Exclusive | ಮಾಫಿ ಸಾಕ್ಷಿ ಹಿಂದೆ ವಿಜಯಲಕ್ಷ್ಮಿ ಕೈವಾಡ? – ʻಪಬ್ಲಿಕ್‌ ಟಿವಿʼಗೆ ಧನ್ವೀರ್‌ ಸ್ಫೋಟಕ ಹೇಳಿಕೆ

2 Min Read

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi) ಮ್ಯಾನೇಜರ್ ನಾಗರಾಜ್ ಹಾಗೂ ನಟ ಧನ್ವೀರ್ ನಡುವಿನ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿದ ಬೆನ್ನಲ್ಲೇ ನಟ ಧನ್ವೀರ್‌ (Dhanveer Gowda) ಸ್ಫೋಟಕ ವಿಚಾರಗಳನ್ನ ಬಿಚ್ಚಿಟ್ಟಿದ್ದಾರೆ. ಪ್ರದೋಷ್‌ ಮಾಫಿ ಸಾಕ್ಷಿಯಾಗೋದ್ರ ಹಿಂದೆ ವಿಜಯಲಕ್ಷ್ಮಿ ಅವರ ಕೈವಾಡ ಇದೆ ಅಂತಾ ಪರೋಕ್ಷವಾಗಿ ಆರೋಪಿಸಿದರು.

ʻಪ‌ಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ ಧನ್ವೀರ್‌, ದರ್ಶನ್‌ ವಿರೋಧಿ ಚಟುವಟಿಕೆ ಮಾಡ್ತಿರೋದು ಯಾರು? ಅನ್ನೋ ಪ್ರಶ್ನೆಗೆ ಉತ್ತರ ಕೊಟ್ಟರು.

ಇದಕ್ಕೆಲ್ಲ ಉತರ ಸಿಗಬೇಕು ಅಂದ್ರೆ ಕೆಲ ವಿಚಾರಗಳು ಬೆಳಕಿಗೆ ಬರಬೇಕು. ರೇಣುಕಾಸ್ವಾಮಿ ಕೇಸಲ್ಲಿ ದರ್ಶನ್‌ ಅಣ್ಣನ ಸಾಕ್ಷಿ ನಾಶ ವಿಚಾರ ಬರುತ್ತೆ, ಅದರಲ್ಲಿ ಪುನೀತ್ ಅನ್ನೋನ ಹೆಸರು ಬರುತ್ತೆ. ಅವನಿಗೆ ಸಂಬಂಧಪಟ್ಟ ವಿಚಾರ ಇದು. ಅವನು ಈ ಕೇಸಲ್ಲಿ ಹೇಗೆ ಬಂದ? ಈ ವಿಚಾರಕ್ಕೆ ಬರೋಕೆ ಹೇಳಿದ್ಯಾರು? ತನಿಖೆ ಆದ್ಮೇಲೆ ಎಫ್‌ಎಎಲ್‌ ರಿಪೋರ್ಟ್‌ ಕೂಡ ಬರುತ್ತೆ, ಯಾಕೆ ಆ ರಿಪೋರ್ಟ್‌ ಮುಚ್ಚಿಹೋಯ್ತು? ಗೌರವ್‌ ಶೆಟ್ಟಿ ಯಾರು? ಈ ಎಫ್‌ಎಸ್‌ಎಲ್‌ ರಿಪೋರ್ಟ್‌ ಕೋರ್ಟ್‌ ಮುಂದೆ ಕೊಟ್ರೆ ಸತ್ಯಾಸತ್ಯತೆ ಗೊತ್ತಾಗುತ್ತಲ್ವಾ? ಅಂತಾ ಪ್ರಶ್ನೆ ಮಾಡಿದ್ರು.

ಇದಾದ್ಮೇಲೆ, ಪ್ರದೋಷ್‌ ಅಪ್ರೋವರ್‌ ಆಗಿದ್ದಾರೆ. ಅವರು ಜೈಲಲ್ಲಿ ಇನ್ನೊಬ್ಬರ ಬಳಿ ಫೋನಲ್ಲಿ ಮಾತಾಡ್ತಿದ್ದಾರೆ ಅಂತ ಇನ್ನೊಂದು ಸುದ್ದಿ ಬರುತ್ತೆ. ಅವರ ಹೆಂಡತಿ ಬಳಿ ಮಾತಾಡೋಕೆ ಜೈಲಲ್ಲಿ ಅವಕಾಶ ಇರುತ್ತೆ? ಹೀಗಿದ್ದಾಗ ಕದ್ದು ಯಾಕೆ ಮಾತಾಡಬೇಕು, ಕದ್ದಾಲಿಕೆ ಯಾಕೆ ಮಾಡಬೇಕು? ಇನ್ನೊಂದು ಫೋನಿಂದ ಮಾತಾಡ್ತಿದ್ದಾರೆ ಅಂದ್ರೆ ಹೆಂಡ್ತಿ ಜೊತೆ ಖಂಡಿತಾ ಮಾತಾಡಿರಲ್ಲ, ಹಾಗಾದ್ರೆ ಯಾರ ಜೊತೆ ಮಾತಾಡ್ತಿದ್ದಾರೆ? ಇದೆಲ್ಲದರ ಎಫ್‌ಎಸ್‌ಎಲ್‌ ರಿಪೋರ್ಟ್‌ ಬಂದಿದ್ದೀಯಲ್ಲ, ಕೋರ್ಟ್‌ ಮುಂದೆ ಬರಲಿ ಎಂದು ಒತ್ತಾಯಿಸಿದ್ರು.

ದರ್ಶನ್‌ ಅಣ್ಣನ ಪರವಾಗಿ ಬಂದ ಕೇಸ್‌ಗಳೆಲ್ಲ ಮುಚ್ಚಿಹೋಗ್ತಿದ್ದಾವಲ್ಲ, ಅವೆಲ್ಲದರ ಎಫ್‌ಎಸ್‌ಎಲ್‌ ರಿಪೋರ್ಟ್‌ ತೆಗೆಸಿ, ಪ್ರತಿ ವಿಚಾರದಲ್ಲೂ ಹೀಗೆ ಆಗ್ತಿದೆ. ಸರಿಯಾಗಿ ಹೋರಾಟ ಮಾಡಿದ್ರೆ, ದರ್ಶನ್‌ ಅಣ್ಣ ಯಾವಾಗಲೋ ಹೊರಗಡೆ ಇರಬೇಕಿತ್ತು. ಇವರು ಪ್ರತಿ ವಿಚಾರದಲ್ಲೂ ಹೀಗೆ ಮಾಡ್ತಿರೋದ್ರಿಂದ ದರ್ಶನ್‌ ಅಣ್ಣನಿಗೆ ಹಿನ್ನೆ ಆಗ್ತಿದೆ. ಆಯಪ್ಪನಿಗೆ ನ್ಯಾಯ ಸಿಗಬೇಕು ಅನ್ನೋದಷ್ಟೇ ನನ್ನ ಉದ್ದೇಶ ಅಂತಾ ಹೇಳಿದ್ರು.

ಇನ್ನೂ ದರ್ಶನ್‌ ಅವ್ರನ್ನ ದೂರ ಮಾಡೋದ್ರಲ್ಲಿ ಸಕ್ಸಸ್‌ ಆದ್ರಾ? ಅನ್ನೋ ʻಪಬ್ಲಿಕ್‌ ಟಿವಿʼ ಪ್ರಶ್ನೆಗೆ ಉತ್ತರಿಸಿದ ಧನ್ವೀರ್‌, ಜೀವ ಮಾನದಲ್ಲೂ ನನ್ನ ದರ್ಶನ್‌ (Darshan) ಅಣ್ಣನ್ನ ದೂರ ಮಾಡೋಕಾಗಲ್ಲ. ಅವರೇನು ಚಿಕ್ಕ ಮಗು ಅಲ್ಲ, ಯಾವುದು ಸತ್ಯ, ಯಾವುದು ಸುಳ್ಳು ಅನ್ನೋದು ಗೊತ್ತಿರುತ್ತೆ. ಎಲ್ಲವನ್ನೂ ನೋಡಿರ್ತಾರೆ. ಇದು ನಿರ್ಣಾಯಕ ಹೋರಾಟ, ಅವರಿಗೆ ಯಾರೇ ಅನ್ಯಾಯ ಮಾಡಿದ್ರೂ, ದರ್ಶನ್‌ ವಿರೋಧವಾಗಿ ಬಂದ್ರೂ ನಾನು ಸಹಿಸಲ್ಲ ಅಂತಾ ಎಚ್ಚರಿಕೆ ಕೊಟ್ಟಿದ್ದಾರೆ.

ದರ್ಶನ್‌ ಅಣ್ಣನ ಹೊರಗೆ ಕರೆದುಕೊಂಡು ಬರಬೇಕು ಅಂತಿದ್ದರೆ, ನನ್ನನ್ನ ಯಾಕೆ ತಡೆಯುತ್ತಿದ್ದೀರಾ? ಮೊದಲು ನಾನು ನನ್ನ ಕೈಲಾದ ಕೆಲಸ ಮಾಡ್ತಿದ್ದೆ. ಈಗ ಅವರೇ ತೋಡಿದ ಹಳ್ಳಕ್ಕೆ ಬೀಳ್ತಿದ್ದಾರೆ. ಸ್ವಲ್ಪ ದಿನದಲ್ಲಿ ಎಲ್ಲವೂ ಹೊರಗೆ ಬರುತ್ತೆ ಅಂತ ಎಚ್ಚರಿಸಿದ್ದಾರೆ.

Share This Article
Exit mobile version