ದೆಹಲಿ ಪೊಲೀಸ್ ಪ್ರಧಾನ ಕಚೇರಿಗೆ ಅಮಿತ್ ಶಾ ಭೇಟಿ – ಕಾನೂನು ಸುವ್ಯವಸ್ಥೆ ಪರಿಶೀಲನೆ

1 Min Read

ನವದೆಹಲಿ: ಎಸ್‌ಐಆರ್ ವಿರುದ್ಧದ ಸಿಜೆಪಿ ಪ್ರತಿಭಟನೆ (CJP Protest) ವೇಳೆ ಪೊಲೀಸರ ಕಾರ್ಯವೈಖರಿ ಬಗ್ಗೆ ತೀವ್ರ ಟೀಕೆ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಇವತ್ತು ದೆಹಲಿ ಪೊಲೀಸ್ ಪ್ರಧಾನ ಕಚೇರಿಗೆ (Delhi Police Headquarters) ಭೇಟಿ ನೀಡಿದ್ದರು. ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಪರಿಶೀಲಿಸಿದರು.

ಸಿಜೆಪಿ ಪ್ರತಿಭಟನೆ, ಮಾದಕ ವಸ್ತುಗಳ ವಿರುದ್ಧದ ಹೋರಾಟ, ವಿದೇಶದಿಂದ ಕಾರ್ಯಾಚರಣೆ ನಡೆಸುತ್ತಿರುವ ಗ್ಯಾಂಗ್‌ಸ್ಟರ್‌ಗಳ ವಿರುದ್ಧದ ಕ್ರಮಗಳು ಮತ್ತು ಮಹಿಳೆಯರ ಮೇಲಿನ ಅಪರಾಧಗಳ ಕುರಿತು ಅಮಿತ್ ಶಾ ಅವರು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ ಅಂತ ತಿಳಿದು ಬಂದಿದೆ. ಇದನ್ನೂ ಓದಿ: ಶಿವಮೊಗ್ಗ ದಸರಾ ಅವಘಡದಲ್ಲಿ ಹಾನಿಯಾಗಿದ್ದ ಅಂಬಾರಿ, ವಿಗ್ರಹವನ್ನು ಪರಿಶೀಲಿಸಿದ ಸಚಿವ ಮಧು ಬಂಗಾರಪ್ಪ

ಮತ್ತೊಂದ್ಕಡೆ, ನವೆಂಬರ್ 1ರಂದು ಎಸ್‌ಐಆರ್ ವಿರುದ್ಧದ ರ‍್ಯಾಲಿ ಕೈಬಿಡುವಂತೆ ರಾಹುಲ್ ಗಾಂಧಿಗೆ ದೆಹಲಿ ವ್ಯಾಪಾರಿಗಳು ಮನವಿ ಮಾಡಿದ್ದಾರೆ. ದೀಪಾವಳಿ ಅವಧಿಯಾಗಿರುವ ಕಾರಣ `ಇಂಡಿ ಕೂಟದ ರ‍್ಯಾಲಿ’ ನಡೆದರೆ 10,000 ಕೋಟಿ ನಷ್ಟವಾಗಲಿದೆ ಅಂತ ಎಚ್ಚರಿಕೆ ನೀಡಿದ್ದಾರೆ. 2025ರ ದೀಪಾವಳಿ ಅವಧಿಯಲ್ಲಿ 75,000 ಕೋಟಿ ವಹಿವಾಟು ನಡೆದಿತ್ತು ಅಂತಲೂ ವಿವರಿಸಿದ್ದಾರೆ. ಇದನ್ನೂ ಓದಿ: ಗುಂಡಿನ ದಾಳಿ ಘಟನೆ ಬೆನ್ನಲ್ಲೇ 9 ಕೋಟಿಗೆ ಮುಂಬೈ ಫ್ಲಾಟ್ ಸೇಲ್‌ ಮಾಡಿದ ಟೈಗರ್ ಶ್ರಾಫ್!

ಹಾಗಾಗಿ, ನವೆಂಬರ್ 10ರ ನಂತರ ರ‍್ಯಾಲಿ ನಡೆಸುವಂತೆ ಕೋರಿದ್ದಾರೆ. ವ್ಯಾಪಾರಿಗಳ ಪ್ರಕಾರ, ರಾಮಲೀಲಾ ಮೈದಾನದ 5 ಕಿ.ಮೀ ವ್ಯಾಪ್ತಿಯಲ್ಲಿ ಚಾಂದನಿ ಚೌಕ್ ಮತ್ತು ಕನಾಟ್ ಪ್ಲೇಸ್ ಸೇರಿದಂತೆ 8 ಪ್ರಮುಖ ಮಾರುಕಟ್ಟೆಗಳಿವೆ. ಇದನ್ನೂ ಓದಿ: ಸಿದ್ದರಾಮಯ್ಯ ನನ್ನ ರಾಜಕೀಯ ಗುರು: ಶಿವಲಿಂಗೇಗೌಡ

Share This Article
Exit mobile version