Exclusive | ನಾನು ನೆಪಮಾತ್ರ ದರ್ಶನ್‌ ನಿಜವಾದ ಟಾರ್ಗೆಟ್‌ – ವಿಜಯಲಕ್ಷ್ಮಿ ವಿರುದ್ಧ ಧನ್ವೀರ್‌ ಹೊಸ ಬಾಂಬ್‌

1 Min Read

– ದರ್ಶನ್‌ ಅಣ್ಣನಿಗೆ ಅನ್ಯಾಯ ಆಗೋಕೆ ನಾನ್‌ ಬಿಡಲ್ಲ
– ʻಪಬ್ಲಿಕ್‌ ಟಿವಿʼಗೆ ನಟ ಧನ್ವೀರ್‌ ಸ್ಫೋಟಕ ಹೇಳಿಕೆ

ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್‌ (Dhanveer Gowda) ನಡುವಿನ ಫೈಟ್‌ ಜೋರಾಗಿದೆ. ಟ್ವೀಟ್, ವಾಟ್ಸಪ್ ಸ್ಟೇಟಸ್‌ಗೆ ಸೀಮಿತವಾಗಿದ್ದ ಗಲಾಟೆ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು.. ಧನ್ವೀರ್ ಮೇಲೆ ಮೂರು ಪ್ರತ್ಯೇಕ ದೂರು ದಾಖಲಾಗಿವೆ. ಇತ್ತ ಮನೆಗೆ ನುಗ್ಗಿ ಜೀವ ಬೆದರಿಕೆ ಹಾಕಿದ್ದಾರೆ ಅಂತ ವಿಜಯಲಕ್ಷ್ಮಿ (Vijayalakshmi Darshan) ವಿರುದ್ಧ ಧನ್ವೀರ್‌ ತಂದೆ ದೂರು ನೀಡಿದ್ದಾರೆ. ಈ ಮಧ್ಯೆ ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿರುವ ನಟ ಧನ್ವೀರ್‌ ಇನ್ನಷ್ಟು ಸ್ಫೋಟಕ ವಿಚಾರಗಳನ್ನ ಹಂಚಿಕೊಂಡಿದ್ದಾರೆ.

ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿರುವ ಅವರು, ನಾನು ಎಲ್ಲದಕ್ಕೂ ಅಡ್ಡಗಾಲಾಗಿದ್ದೆ. ಕೇಸ್‌ ವಿಚಾರದಲ್ಲಿ ಕಳೆದ 6-7 ತಿಂಗಳಲ್ಲಿ ಆದ ಬೆಳವಣಿಗೆ ಏನಿದೆ. ನಾನು ಅದಕ್ಕೆಲ್ಲ ಅಡ್ಡಗಾಲಾಗಿದ್ದೆ. ಹಾಗಾಗಿ ಏನಾದ್ರೂ ಮಾಡಿ ನನ್ನನ್ನ ದೂರ ಕಳಿಸಬೇಕಿತ್ತು ಅನ್ನೋ ಪ್ಲ್ಯಾನ್‌ನಲ್ಲಿ ಕೆಲವರಿದ್ದರು. ಅದರಂತೆ ನಡೆದುಕೊಳ್ತಿದ್ದಾರೆ, ನಾವು ನೋಡಿಕೊಂಡು ಬಂದಿದ್ದೇವೆ, ಇದನ್ನೆಲ್ಲ ಎಂಡ್‌ ಮಾಡಬೇಕು. ಏಕೆಂದ್ರೆ ಜೈಲಲ್ಲಿ ನೋವು ತಿನ್ನುತ್ತಿರೋದು ದರ್ಶನ್‌, ಇನ್ಯಾರು ಅವರ ಬಗ್ಗೆ ಯೋಚನೆ ಮಾಡ್ತಿಲ್ಲ ಅಂತಾ ಹೇಳಿದ್ದಾರೆ.

ಇನ್ನೂ ದರ್ಶನ್‌ ಅವ್ರನ್ನ ದೂರ ಮಾಡೋದ್ರಲ್ಲಿ ಸಕ್ಸಸ್‌ ಆದ್ರಾ? ಅನ್ನೋ ʻಪಬ್ಲಿಕ್‌ ಟಿವಿʼ ಪ್ರಶ್ನೆಗೆ ಉತ್ತರಿಸಿದ ಧನ್ವೀರ್‌, ಜೀವ ಮಾನದಲ್ಲೂ ನನ್ನ ದರ್ಶನ್‌ (Darshan) ಅಣ್ಣನ್ನ ದೂರ ಮಾಡೋಕಾಗಲ್ಲ. ಅವರೇನು ಚಿಕ್ಕ ಮಗು ಅಲ್ಲ, ಯಾವುದು ಸತ್ಯ, ಯಾವುದು ಸುಳ್ಳು ಅನ್ನೋದು ಗೊತ್ತಿರುತ್ತೆ. ಎಲ್ಲವನ್ನೂ ನೋಡಿರ್ತಾರೆ. ಇದು ನಿರ್ಣಾಯಕ ಹೋರಾಟ, ಅವರಿಗೆ ಯಾರೇ ಅನ್ಯಾಯ ಮಾಡಿದ್ರೂ, ದರ್ಶನ್‌ ವಿರೋಧವಾಗಿ ಬಂದ್ರೂ ನಾನು ಸಹಿಸಲ್ಲ ಅಂತಾ ಎಚ್ಚರಿಕೆ ಕೊಟ್ಟಿದ್ದಾರೆ.

ದರ್ಶನ್‌ ಅಣ್ಣನ ಹೊರಗೆ ಕರೆದುಕೊಂಡು ಬರಬೇಕು ಅಂತಿದ್ದರೆ, ನನ್ನನ್ನ ಯಾಕೆ ತಡೆಯುತ್ತಿದ್ದೀರಾ? ಮೊದಲು ನಾನು ನನ್ನ ಕೈಲಾದ ಕೆಲಸ ಮಾಡ್ತಿದ್ದೆ. ಈಗ ಅವರೇ ತೋಡಿದ ಹಳ್ಳಕ್ಕೆ ಬೀಳ್ತಿದ್ದಾರೆ. ಸ್ವಲ್ಪ ದಿನದಲ್ಲಿ ಎಲ್ಲವೂ ಹೊರಗೆ ಬರುತ್ತೆ ಅಂತ ಎಚ್ಚರಿಸಿದ್ದಾರೆ.

Share This Article
Exit mobile version