ಲಕ್ನೋ: ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ (Sania Mirza) ಬಳಿಕ ಅದೇ ಹೆಸರಿನ ಯುವತಿಯೊಬ್ಬರು ಇದೀಗ ಭಾರತದ ಕೀರ್ತಿ ಪತಾಕೆ ಹಾರಿಸಲು ಸಜ್ಜಾಗಿದ್ದಾರೆ.
ಹೌದು. ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ (NDA) ಪರೀಕ್ಷೆಯಲ್ಲಿ ಸಾನಿಯಾ ಮಿರ್ಜಾ ಅವರು 149ನೇ ರ‍್ಯಾಂಕ್ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದ್ರೆ ಉತ್ತರ ಪ್ರದೇಶದ ಮಿರ್ಜಾಪುರದ ಸಾನಿಯಾ, ಭಾರತದ ಮೊದಲ ಮುಸ್ಲಿಂ ಫೈಟರ್ ಪೈಲಟ್ (Woman Fighter Pilot) ಎನಿಸಿಕೊಳ್ಳಲಿದ್ದಾರೆ.
Advertisement
Advertisement
ಎನ್‌ಡಿಎ ಪರೀಕ್ಷೆಯಲ್ಲಿ (NDA Exams) ಮಹಿಳೆಯರಿಗೆ ಮೀಸಲಿಟ್ಟ 19 ಸೀಟುಗಳಲ್ಲಿ ಸಾನಿಯಾ 2ನೇ ಸ್ಥಾನ ಪಡೆದಿದ್ದಾರೆ. ಅವನಿ ಚತುರ್ವೇದಿ ಅವರು ಮೊದಲ ಮಹಿಳಾ ಫೈಟರ್ ಪೈಲಟ್ ಎಂಬ ಖ್ಯಾತಿಗೆ ಭಾಜನರಾಗಿದ್ದರು. ಅವರ ಜತೆಗೆ ಮೋಹನಾ ಸಿಂಗ್ ಜಿತರ್ವಾಲ್ ಮತ್ತು ಭಾವನಾ ಕಾಂತ್ ಕೂಡ ಯುದ್ಧ ವಿಮಾನಗಳನ್ನು ಹಾರಿಸಿದ ಮಹಿಳೆಯರ ಸಾಲಿನಲ್ಲಿ ಸೇರಿದ್ದಾರೆ.
Advertisement
Advertisement
ಯಾರಿದು ಸಾನಿಯಾ ಮಿರ್ಜಾ?
ಸಣ್ಣ ಗ್ರಾಮದಿಂದ ಬಂದ ಸಾನಿಯಾ ಮಿರ್ಜಾ, ತಮ್ಮ ಗ್ರಾಮದ ಪಂಡಿತ್ ಚಿಂತಾಮಣಿ ದುಬೆ ಅಂತರ್ ಕಾಲೇಜಿನಲ್ಲಿ ಪ್ರೌಢಶಾಲೆ ಶಿಕ್ಷಣ ಪೂರೈಸಿದ್ದರು. 10ನೇ ತರಗತಿ ಬಳಿಕ ಮಿರ್ಜಾಪುರದ ಗುರು ನಾನಕ್ ಬಾಲಕಿಯರ ಅಂತರ್ ಕಾಲೇಜಿನಲ್ಲಿ 12ನೇ ತರಗತಿ ಪೂರ್ಣಗೊಳಿಸಿದರು. 12ನೇ ತರಗತಿಯಲ್ಲಿ ಉತ್ತರ ಪ್ರದೇಶ ಪರೀಕ್ಷಾ ಮಂಡಳಿಯಲ್ಲಿ ಮಿರ್ಜಾಪುರಕ್ಕೆ ಟಾಪರ್ ಆಗಿದ್ದರು. 2022ರ ಏಪ್ರಿಲ್‌ನಲ್ಲಿ ಎನ್‌ಡಿಎ ಪರೀಕ್ಷೆಗೆ ಹಾಜರಾದ ಸಾನಿಯಾ, ಇದೀಗ 149ನೇ ರ‍್ಯಾಂಕ್ ಪಡೆಯುವ ಮೂಲಕ ದೇಶವೇ ಮೆಚ್ಚುವ ಸಾಧನೆ ಮಾಡಿದ್ದಾರೆ.
ಸಾನಿಯಾ ಅವರು ಡಿ. 27ರಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಎನ್‌ಡಿಎ ಖಾಡಕ್ವಲ್ಸಾವನ್ನು ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ನಿರೀಕ್ಷೆಯಂತೆ ನಡೆದರೆ ಸಾನಿಯಾ ಮಿರ್ಜಾ ಅವರು ಭಾರತೀಯ ವಾಯುಪಡೆಯ ಯುದ್ಧ ವಿಮಾನದ ಮೊದಲ ಮುಸ್ಲಿಂ ಪೈಲಟ್ ಎನಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಮೂಗಿನ ಮೂಲಕ ತೆಗೆದುಕೊಳ್ಳುವ ಲಸಿಕೆಯ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮತಿ
ಈ ಕುರಿತು ಮಾತನಾಡಿರುವ ಸಾನಿಯಾ `ನಾನು ಪೈಲಟ್ ಲೆಫ್ಟಿನೆಂಟ್ ಅವನಿ ಚತುರ್ವೇದಿ ಅವರನ್ನು ಯಟ್ಯೂಬ್‌ನಲ್ಲಿ ನೋಡಿದ ನಂತರ ಅವರಿಂದ ಬಹಳ ಸ್ಫೂರ್ತಿ ಪಡೆದಿದ್ದೇನೆ. ಅವರನ್ನು ನೋಡಿಯೇ ನಾನು ಎನ್‌ಡಿಎ ಸೇರಿರುವುದು. ಯುವ ಪೀಳಿಗೆ ಮುಂದೊಮ್ಮೆ ನನ್ನಿಂದ ಕೂಡ ಪ್ರೇರಣೆ ಪಡೆಯಲಿದೆ ಎಂಬ ಆಶಯ ನನ್ನದು’ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಿವೃತ್ತ ಪ್ರಾಧ್ಯಾಪಕಿ ಶೆಲ್ಲಿ ದೆಹಲಿ ಮೇಯರ್ ಅಭ್ಯರ್ಥಿಯಾಗಿ ಘೋಷಣೆ
Mirzapur's Sania Mirza will became first Muslim woman fighter pilot after securing 149th rank in NDA exam
"I was very much inspired by Flight Lieutenant Avani Chaturvedi & seeing her I decided to join NDA. I hope younger generation will someday get inspired by me: Sania Mirza pic.twitter.com/6SMKIi2g5m
— ANI UP/Uttarakhand (@ANINewsUP) December 22, 2022
ಏನಿದು ಯೋಜನೆ?
ಈ ವರ್ಷದ ಆರಂಭದಲ್ಲಿ ರಕ್ಷಣಾ ಸಚಿವಾಲಯವು ಐಎಎಫ್‌ನಲ್ಲಿ (IAF) ಮಹಿಳಾ ಪೈಲಟ್‌ಗಳನ್ನು ನಿಯೋಜಿಸುವ ತನ್ನ ಪ್ರಾಯೋಗಿಕ ಯೋಜನೆಯನ್ನು ಶಾಶ್ವತಗೊಳಿಸಲು ನಿರ್ಧರಿಸಿತು. ರಕ್ಷಣಾ ಸಚಿವಾಲಯವು ಮಹಿಳೆಯರೂ ಫೈಟರ್ ಪೈಲಟ್‌ಗಳಾಗಿ ವಾಯುಪಡೆ ಸೇರಲು 2015ರಲ್ಲಿ ಅನುಮತಿಸಿತ್ತು. ನಂತರ `ಫೈಟರ್ ಸ್ಟ್ರೀಮ್ ಆಫ್ ಫ್ಲೈಯಿಂಗ್ʼ ಬ್ರಾಂಚ್‌ನಲ್ಲಿ ಮಹಿಳಾ ಎಸ್‌ಎಸ್‌ಸಿ ಅಧಿಕಾರಿಗಳನ್ನು ಸೇರಿಸುವ ಯೋಜನೆ 2016ರಲ್ಲಿ ಪ್ರಾರಂಭವಾಯಿತು.