ರಿಯಲ್ ಸ್ಟಾರ್ ಉಪೇಂದ್ರ (Upendra) ನಟನೆಯ ‘ಯುಐ’ ಚಿತ್ರದ (UI) ವಾರ್ನರ್ (ಟ್ರೈಲರ್) ರಿಲೀಸ್ ಆಗಿದೆ. ಈ ಬೆನ್ನಲ್ಲೇ ಚಿತ್ರತಂಡ ಸುದ್ದಿಗೋಷ್ಠಿ ಆಯೋಜಿಸಿದ್ದು, ಸಿನಿಮಾ ಬಗ್ಗೆ ಹಲವು ವಿಚಾರಗಳನ್ನು ತಿಳಿಸಿದೆ. ‘ಯುಐ’ ಚಿತ್ರ ಸೂಪರ್ ಸಿನಿಮಾದ ಮುಂದುವರೆದ ಭಾಗನಾ? ಎಂದು ಕೇಳಲಾದ ಪ್ರಶ್ನೆಗೆ ಇಂಟರೆಸ್ಟಿಂಗ್ ಆಗಿ ಉಪೇಂದ್ರ ಉತ್ತರ ನೀಡಿದ್ದಾರೆ.
Advertisement
2010ರ ‘ಸೂಪರ್’ (Super) ಸಿನಿಮಾದಲ್ಲಿ 2035ಕ್ಕೆ ಭಾರತ ಹೇಗಿರುತ್ತೆ ಎಂದು ತೋರಿಸಿದ್ದೀರಿ. ಈಗೀನ ‘ಯುಐ’ (UI) ಚಿತ್ರ 2040ರಲ್ಲಿ ಭಾರತ ಹೇಗಿರುತ್ತದೆ ಎಂಬುದು ತೋರಿಸಲು ಹೊರಟಿದ್ದೀರಾ, ಹಾಗಾದ್ರೆ UI ಚಿತ್ರ ಈ ಹಿಂದಿನ ಸೂಪರ್’ ಸಿನಿಮಾದ ಭಾಗನಾ? ಎಂದು ಸುದ್ದಿಗೋಷ್ಠಿಯಲ್ಲಿ ಉಪೇಂದ್ರಗೆ ಪ್ರಶ್ನೆ ಎದುರಾಗಿದೆ. ಅದಕ್ಕೆ ನಟ, ನೀವು ಹೇಗೆ ಬೇಕಾದರೂ ಅಂದುಕೊಳ್ಳಬಹುದು ಎಂದು ತಮಾಷೆಯಾಗಿ ಉತ್ತರ ನೀಡಿದ್ದಾರೆ.
Advertisement
Advertisement
Advertisement
ಆ ನಂತರ ಆ ಚಿತ್ರದ ಕಥೆಗೂ ‘ಯುಐ’ಗೂ ಯಾವುದೇ ಸಂಬಂಧವಿಲ್ಲ. ‘ಯುಐ’ ಎಲ್ಲದ್ದಕ್ಕಿಂತ ವಿಭಿನ್ನವಾಗಿರುತ್ತದೆ. ಸಿನಿಮಾದಲ್ಲಿ ಟ್ವಿಸ್ಟ್ ಸಾಕಷ್ಟು ಇರುತ್ತದೆ. ನಮ್ಮ ಸಿನಿಮಾ ಕಥೆ ನಿಮ್ಮ ಮೇಲೆ ಡಿಫೆಂಡ್ ಆಗಿದೆ. ನೀವು ಅರ್ಥ ಮಾಡಿಕೊಳ್ಳುವುದರ ಮೇಲಿದೆ. ಇಡೀ ಸಿನಿಮಾ ಬೇರೆ ಬೇರೆ ಟಾಪಿಕ್ ಇರುತ್ತದೆ ಎಂದು ಉಪೇಂದ್ರ ಮಾತನಾಡಿದ್ದಾರೆ.
ಅಂದಹಾಗೆ, ‘ಯುಐ’ ಸಿನಿಮಾ ವಾರ್ನರ್ ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇನ್ನೂ 2040 ಭವಿಷ್ಯದ ಅಸಲಿ ಕಥೆ ಹೇಳಲು ‘ಯುಐ’ ಸಿನಿಮಾ ಮೂಲಕ ಉಪೇಂದ್ರ ಸಜ್ಜಾಗಿದ್ದಾರೆ. ಡಿ.20ಕ್ಕೆ ರಿಲೀಸ್ ಆಗಲಿರುವ ಈ ಸಿನಿಮಾದಲ್ಲಿ ಉಪೇಂದ್ರಗೆ ಕೊಡಗಿನ ಕುವರಿ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಮೂಲಕ ಮಹೋಹರ್ ನಾಯ್ಡು ಹಾಗೂ ಕೆ.ಪಿ ಶ್ರೀಕಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.