ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಬ್ರೇಕಿಂಗ್ ನ್ಯೂಸ್ ತಾಂತ್ರಿಕ ಕಾರಣಗಳಿಂದಲೇ ಬ್ರೇಕ್ ಫೇಲ್ ಆಯ್ತಾ ಎಂಬ ಪ್ರಶ್ನೆ ಈಗ ಎದ್ದಿದೆ.
ಹೌದು. ಬಿಎಸ್‍ವೈ ಗುರುವಾರ ಸಂಜೆ 7 ಗಂಟೆಗೆ ಟ್ವೀಟ್ ಮಾಡಿ ಶುಕ್ರವಾರ ಸಂಜೆ 5 ಗಂಟೆಗೆ ಬ್ರೇಕಿಂಗ್ ನ್ಯೂಸ್ ನೀಡುತ್ತೇನೆ ಎಂದು ಹೇಳಿದ್ದರು. ಹೀಗಾಗಿ ಸಂಜೆ 5 ಗಂಟೆಯಿಂದ ಬಿಎಸ್‍ವೈ ಟ್ವಿಟ್ಟರ್ ಖಾತೆಯನ್ನು ಗಮನಿಸುತ್ತಿದ್ದವರಿಗೆ ನಿರಾಸೆಯಾಗಿತ್ತು. ಕೊನೆಗೆ 5.48ರ ವೇಳೆಗೆ ಸಿದ್ದರಾಮಯ್ಯ ಸರ್ಕಾರದ ವೈಫಲ್ಯವನ್ನು ತೋರಿಸುವ ವಿಡಿಯೋವನ್ನು ರಿಲೀಸ್ ಮಾಡುವ ಮೂಲಕ ಬ್ರೇಕಿಂಗ್ ನ್ಯೂಸ್ ನೀಡಿದರು.
Advertisement
ಬ್ರೇಕಿಂಗ್ ನ್ಯೂಸ್ ನೀಡಿದ್ದರೂ ತಡವಾಗಿ ವಿಡಿಯೋ ರಿಲೀಸ್ ಮಾಡಿದ್ದು ಯಾಕೆ ಎನ್ನುವ ಪ್ರಶ್ನೆಗೆ ಬಿಎಸ್‍ವೈ ಕಡೆಯಿಂದ ಉತ್ತರ ಸಿಕ್ಕಿಲ್ಲ. ಆದರೆ ಟ್ವಿಟ್ಟರ್ ನಲ್ಲಿ ವಿಡಿಯೋ ರಿಲೀಸ್ ಮಾಡಲು ಟ್ವಿಟ್ಟರ್ ನಿಯಮಗಳಿಂದಾಗಿ ತಡವಾಗಿರುವ ಸಾಧ್ಯತೆ ಇದೆ. ಈ ಕಾರಣಕ್ಕೆ 5.44ಕ್ಕೆ ಫೇಸ್‍ಬುಕ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿ ನಂತರ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ರಿಲೀಸ್ ಮಾಡಿರಬಹುದಾ ಎನ್ನುವ ಪ್ರಶ್ನೆ ಎದ್ದಿದೆ.
Advertisement
ಟ್ವಿಟ್ಟರ್ ನಿಯಮ ಏನು ಹೇಳುತ್ತೆ?: ಟ್ವಿಟ್ಟರ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಬೇಕಾದರೆ ವಿಡಿಯೋ ಸೈಜ್ ಗರಿಷ್ಟ 512 ಎಂಬಿ ಮೀರಿರಬಾರದು. ಅಷ್ಟೇ ಅಲ್ಲದೇ ವಿಡಿಯೋ ಗರಿಷ್ಟ 2 ನಿಮಿಷ 20 ಸೆಕೆಂಡ್ ಮೀರಿರಬಾರದು. ಒಂದು ವೇಳೆ ಮೀರಿದ್ದರೂ ಅದರ ಗಾತ್ರ 512 ಎಂಬಿಗಿಂತ ಜಾಸ್ತಿ ಇರಬಾರದು. ಈ ನಿಯಮಗಳಿಂದಾಗಿ ಬ್ರೇಕಿಂಗ್ ನ್ಯೂಸ್ ವಿಡಿಯೋ ಅಪ್ಲೋಡ್ ಮಾಡುವ ವೇಳೆ ಸಮಸ್ಯೆ ಎದುರಿಸಿ ವಿಡಿಯೋದ ಗಾತ್ರವನ್ನು ಕುಗ್ಗಿಸಿ ನಂತರ ಅಪ್ಲೋಡ್ ಮಾಡಿರುವ ಸಾಧ್ಯತೆಯಿದೆ.
Advertisement
ತಾಂತ್ರಿಕ ಕಾರಣಗಳು ಏನೇ ಇದ್ರೂ ಈ ಬ್ರೇಕಿಂಗ್ ನ್ಯೂಸ್ ಮಾತ್ರ ಫ್ಲಾಪ್ ಶೋ ಆಯ್ತು ಅನ್ನೋದು ಮಾತ್ರ ಸುಳ್ಳಲ್ಲ.
Advertisement
ಕಾಂಗ್ರೆಸ್ ತಿರುಗೇಟು: ಸಂಜೆ 5 ಗಂಟೆಗೆ ಬ್ರೇಕಿಂಗ್ ನ್ಯೂಸ್ ನೀಡದ್ದಕ್ಕೆ ಕರ್ನಾಟಕ ಕಾಂಗ್ರೆಸ್, ವಚನ ಭ್ರಷ್ಟ ಬಿಎಸ್‍ವೈ ಅವರು ಹೇಳಿರುವ ಮಾತನ್ನೇ ಸರಿಯಾದ ಸಮಯಕ್ಕೆ ನಡೆಸಲಾಗದವರು, ಜನರ ಮಾತು ಹಾಗೂ ನಿರೀಕ್ಷೆಗಳನ್ನು ಹೇಗೆ ನಡೆಸಿಕೊಡುವವರು ಎಂದು ಟ್ವೀಟ್ ಮಾಡಿ ತಿರುಗೇಟು ನೀಡಿದೆ.
Congress govt led by @siddaramaiah has betrayed the people of #Karnataka & has been a No.1 failure in living up to their expectations!#10PercentCM has cheated the people of Karnataka & has put a brake on the growth & development story of the state!#LiesDamnedLiesAndStatistics pic.twitter.com/A3hYSCly9s
— B.S.Yediyurappa (@BSYBJP) March 16, 2018
ವಚನಭ್ರಷ್ಟ ಯಡಿಯೂರಪ್ಪ!
ಅವರು ಹೇಳಿರುವ ಮಾತನ್ನೇ ಸರಿಯಾದ ಸಮಯಕ್ಕೆ ನಡೆಸಲಾಗದವರು, ಜನರ ಮಾತು ಹಾಗೂ ನಿರೀಕ್ಷೆಗಳನ್ನು ಹೇಗೆ ನಡೆಸಿಕೊಡುವವರು?!#BariOluBJP https://t.co/mictaefbWM
— Karnataka Congress (@INCKarnataka) March 16, 2018
Yeddyurappa's 'Breaking News' range from ditching BJP to being Jailed.
Expect more Nuisance than News!#BJP420 pic.twitter.com/4PkyaliIUt
— Karnataka Congress (@INCKarnataka) March 16, 2018