ಚಿತ್ರದುರ್ಗ: ಪಾಕ್ ಮತ್ತು ಭಾರತದ ನಡುವಿನ ಕದನ ವಿರಾಮಕ್ಕೆ (Ceasefire) ಮಧ್ಯಸ್ಥಿಕೆ ವಹಿಸಲು ಅಮೆರಿಕ ಅಧ್ಯಕ್ಷ ಟ್ರಂಪ್ (Donald Trump) ಏನು ಹೆಡ್‌ಮಾಸ್ಟ್ರಾ? ನಾವೇನು ಸ್ಕೂಲ್ ಮಕ್ಕಳಾ? ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಅಸಮಾಧಾನ ಹೊರಹಾಕಿದ್ದಾರೆ.
ಚಿತ್ರದುರ್ಗದಲ್ಲಿ (Chitradurga) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಾಕ್ ಹಾಗೂ ಭಾರತ ನಡುವಿನ ಕದನ ವಿರಾಮವನ್ನು ನಾವು ಸ್ವಾಗತಿಸುತ್ತೇವೆ. ಆದರೆ ಸಾರ್ವಜನಿಕ ವಲಯದಲ್ಲೊಂದು ಪ್ರಶ್ನೆ ತಲೆಯೆತ್ತಿದ್ದು, ಮೊದಲು ನಾವು ಎಲ್ಲಾ ವಿಷಯವನ್ನು ಅವಲೋಕಿಸಿದ ಬಳಿಕ ಸಂಘರ್ಷ ಮಾಡಬೇಕಿತ್ತು. ಆದರೆ ಸಂಘರ್ಷ ಆರಂಭವಾದ ಮೇಲೆ ಅವರಿಗೆ ಪಾಠ ಕಲಿಸಬೇಕಾದ್ದು ನಮ್ಮ ಗುರಿಯಾಗಬೇಕಿತ್ತು. ದಿಢೀರ್ ಅಂತ ಅಮೆರಿಕ ಹೇಳಿದಾಕ್ಷಣ ಕದನ ವಿರಾಮ ಘೋಷಣೆ ಕಂಡಾಗ, ಪಾಕ್‌ಗೆ ನಾವು ನಿಜವಾಗಿಯೂ ಪಾಠ ಕಲಿಸಿದ್ದೀವಾ ಎಂಬ ಪ್ರಶ್ನೆ ನನಗೆ ಮೂಡುತ್ತಿದೆ ಎಂದರು. ಇದನ್ನೂ ಓದಿ: ಧಾರಾಕಾರ ಮಳೆಗೆ ತತ್ತರಿಸಿದ ಕೀನ್ಯಾ – ರಸ್ತೆಗಳು ಸಂಪೂರ್ಣ ಜಲಾವೃತ
ಈ ಕದನ ವಿರಾಮದ ಬಳಿಕ ಭಾರತಕ್ಕೆ ನಾವು ಪಾಠ ಕಲಿಸಿದ್ದೇವೆ ಎಂದು ಅವರು ಹೇಳಿಕೊಳ್ಳುತ್ತಾರೆ. ಆದರೆ ಪಾಕ್‌ಗೆ ಪಾಠ ಕಲಿಸಿದ್ದೀವಿ ಎಂದು ನಾವು ಹೇಳಿಕೊಳ್ಳುತ್ತಿದ್ದೇವೆ. ಒಮ್ಮೆ ಸಂಘರ್ಷ ಆರಂಭವಾದ ಮೇಲೆ ನಮ್ಮ ಆಂತರಿಕ ವಿಚಾರದಲ್ಲಿ ಪಾಕಿಸ್ತಾನ ಮತ್ತೊಮ್ಮೆ ಬೆರಳು ತೋರಿಸುವ ದುಸ್ಸಾಹಸಕ್ಕೆ ಕೈ ಹಾಕದಂತೆ ಪಾಠ ಕಲಿಸಬೇಕಿತ್ತು ಎಂದು ಹೇಳಿದರು. ಇದನ್ನೂ ಓದಿ: ಮೋದಿಗೆ ಯುದ್ಧಕ್ಕಿಂತ ಬಿಹಾರ ಚುನಾವಣೆ ಮುಖ್ಯ: ಪ್ರಿಯಾಂಕ್ ಖರ್ಗೆ ಕಿಡಿ
ಈ ಹಿಂದೆ 1971ರಲ್ಲಿ ಕೂಡ ಈ ಪಾಕಿಸ್ತಾನ ಇದೇ ರೀತಿ ಭಾರತಕ್ಕೆ ತೊಂದರೆ ನೀಡಿದ್ದು, ಆಗಿನ ಪ್ರಧಾನಿ ಇಂದಿರಾ ಗಾಂಧಿ ಪಾಕಿಸ್ತಾನದ ಮೇಲೆ ಯುದ್ಧ ಮಾಡಿದ್ದರು. ಪಾಕಿಸ್ತಾನವನ್ನೇ ಇಬ್ಭಾಗ ಮಾಡಿದ್ದು, ಸಾವಿರಾರು ಜನ ಸೈನಿಕರು ನಮಗೆ ಶರಣಾಗಿದ್ದರು. ಆಗ ಪಾಕಿಸ್ತಾನವೇ ನಾವು ಸೋತಿದ್ದೇವೆ ಎನ್ನುವ ಮಟ್ಟಕ್ಕೆ ಅವರ ವಿರುದ್ಧ ಇಂದಿರಾ ಗಾಂಧಿ ಯುದ್ಧ ಮಾಡಿದ್ದರು ಎಂದು ಅಂದಿನ ಪರಿಸ್ಥಿತಿಯನ್ನು ಸ್ಮರಿಸಿದರು. ಇದನ್ನೂ ಓದಿ: ಲಂಡನ್‌ನಲ್ಲಿ ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್- ಜ್ಯೂ.ಎನ್‌ಟಿಆರ್ ಆಕ್ರೋಶ
ಹಾಗೆಯೇ ನಾವು ಯುದ್ಧಕ್ಕೆ ಹೋದಮೇಲೆ ತಾರ್ಕಿಕ ಅಂತ್ಯ ನೀಡಬೇಕಿದ್ದು, ಮುಂದಿನ ಆಗುಹೋಗುಗಳ ಬಗ್ಗೆ ಲೆಕ್ಕ ಹಾಕಿ ಯುದ್ಧಕ್ಕೆ ಹೋಗಬೇಕಿತ್ತು. ಅದರ ಬದಲಾಗಿ ಅಮೆರಿಕ ಹೇಳಿದಾಕ್ಷಣ ನಾವು ಸಂಘರ್ಷವನ್ನು ನಿಲ್ಲಿಸಿದರೆ ಹೇಗೆ? ಈ ಕದನ ವಿರಾಮದಿಂದಾಗಿ ನಮ್ಮ ಎಲ್ಲಾ ಉದ್ದೇಶ ಈಡೇರಿದ್ಯಾ ಎಂಬುದು ನನ್ನ ಮೊದಲ ಪ್ರಶ್ನೆ. ಇಂತಹ ಪ್ರಶ್ನೆಗಳು ಭಾರತದ ಎಲ್ಲಾ ನಾಗರಿಕರ ಮನಸ್ಸಿನಲ್ಲಿಯೂ ಉದ್ಭವವಾಗಿವೆ. ಇದಕ್ಕೆ ಕೇಂದ್ರ ಸರ್ಕಾರ ಸ್ಪಷ್ಟ ಉತ್ತರ ಕೊಡಬೇಕು. ಜೊತೆಗೆ ಕಾಶ್ಮೀರ ನಮ್ಮ ಆಂತರಿಕ ವಿಷಯವೆಂದು ಪಾಕಿಸ್ತಾನವೇ ಒಪ್ಪಿಕೊಂಡಿದ್ದು, ಈ ವಿಚಾರದಲ್ಲಿ ಅಮೆರಿಕ ಮಧ್ಯಸ್ಥಿಕೆ ವಹಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಪಾಕ್‌ನಲ್ಲಿರುವ ಎಲ್ಲಾ ಭಯೋತ್ಪಾದಕರು ಈಗ ಧರ್ಮಗುರುಗಳಾಗಿದ್ದಾರೆ – ಸಚಿವ ಖವಾಜಾ ಆಸಿಫ್
ಹಾಗಾದರೆ ನಾವು ಇಷ್ಟು ದಿನ ತೆಗೆದುಕೊಂಡ ನಿಲುವು ಏನಾಯ್ತು? ನಮ್ಮ ಕಾಶ್ಮೀರದ ವಿಚಾರ ಭಾರತದ ಆಂತರಿಕ ವಿಷಯವೋ ಅಥವಾ ಅಂತಾರಾಷ್ಟ್ರೀಯ ವಿಷಯವೋ ಎಂಬ ಅನುಮಾನ ನಮಗೆ ಮೂಡಿದೆ. ಅಷ್ಟೇ ಅಲ್ಲದೇ ನಾವೇ ಎಲ್ಲೋ ಒಂದು ಕಡೆ ಕಾಶ್ಮೀರದ ವಿಚಾರವನ್ನು ಅಂತಾರಾಷ್ಟ್ರೀಯ ವಿಷಯ ಮಾಡುತ್ತಿದ್ದು, ಆಂತರಿಕ ವಿಚಾರವನ್ನು ಅಂತಾರಾಷ್ಟ್ರೀಯ ವಿಷಯ ಮಾಡುವ ಮೂಲಕ ಎಲ್ಲೆಂದರಲ್ಲಿ ಮಾತಾಡಲು ನಾವೇ ಅವಕಾಶ ಮಾಡಿಕೊಟ್ಟಂತಿದೆ ಎಂದು ಹೇಳಿದರು. ಇದನ್ನೂ ಓದಿ: ನಾನು ಅಕ್ಷರ ಕಲಿಯದಿದ್ದರೆ ಚಡ್ಡಿ ಹಾಕೊಂಡು ಕುರಿ ಕಾಯ್ತಿದ್ದೆ – ಸಿದ್ದರಾಮಯ್ಯ
ನಮ್ಮ ಕಾಶ್ಮೀರದ ಬಗ್ಗೆ ಯಾರು ಬೇಕಾದರೂ ಮಾತನಾಡುತ್ತಾ ಉಪದೇಶ ಕೊಡುವ ಅವಕಾಶ ನೀಡಿರುವುದರಿಂದಾಗಿ ನಮಗೆ ತೀವ್ರ ನಷ್ಟವೇ ಆಗಲಿದೆ. ಹೀಗಾಗಿ ಈ ಪಾಕಿಸ್ತಾನಕ್ಕೆ ಶಾಶ್ವತ ಪಾಠ ಕಲಿಸಬೇಕೆಂಬ ಸಂಕಲ್ಪದಿಂದ ಆರಂಭವಾದ ಕದನಕ್ಕೆ ವಿರಾಮ ಮಾಡುವಾಗ ನಮ್ಮ ಉದ್ದೇಶ ಈಡೇರಿದ್ಯಾ ಎಂಬುದನ್ನು ಕೇಂದ್ರ ಸರ್ಕಾರ ಉತ್ತರಿಸಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಟೇಕ್ವಾಂಡೋ ಸ್ಪರ್ಧೆಯಲ್ಲಿ 2 ಚಿನ್ನ ಗೆದ್ದ ಕನ್ನಡಿಗ ದಕ್ಷಿಣ್ ಸೂರ್ಯ
ನಾವು ಹಾಗೂ ಪಾಕಿಸ್ತಾನದವರು ಮಾತನಾಡಿಕೊಳ್ಳುವುದು ಒಂದು ಭಾಗವಾದರೆ ಟ್ರಂಪ್ ಹೇಳಿದಾಕ್ಷಣ ನಾವು ಮಂಡಿ ಊರಿದಾಗ ನಮ್ಮ ಸಾರ್ವಭೌಮ ಏನಾಯ್ತು? ಒಂದು ವೇಳೆ ಅವರು ಹೇಳಿದ ಕೂಡಲೇ ನಾವು ಎಸ್ ಸಾರ್ ಅಂತ ಒಪ್ಪಿಕೊಂಡ್ರೆ ಹೇಗೆ? ಗುರಿ ಈಡೇರಿದ ನಂತರ ಕದನ ವಿರಾಮವನ್ನು ಒಪ್ಪಿಕೊಂಡಿದ್ದರೆ ನಮ್ಮ ಸಹಮತವಿತ್ತು. ಬದಲಾಗಿ ಪಾಕಿಸ್ತಾನ ಇನ್ನೊಮ್ಮೆ ನಮ್ಮ ವಿಚಾರದಲ್ಲಿ ಕೈ ಹಾಕದ ರೀತಿ ಬುದ್ಧಿ ಕಲಿಸದೇ, ವಿಶ್ವದ ದೊಡ್ಡಣ್ಣ ಎನಿಸಿರುವ ಅಮೆರಿಕ ಹೇಳಿದ ಕೂಡಲೇ ಒಪ್ಪಿಕೊಳ್ಳುವುದು ಎಷ್ಟು ಸರಿ ಎಂದು ಗುಡುಗಿದರು. ಈ ವೇಳೆ ಅವರೊಂದಿಗೆ ಸಾಂಖ್ಯಿಕ ಹಾಗು ಯೋಜನಾ ಖಾತೆ ಸಚಿವ ಡಿ.ಸುಧಾಕರ್ ಉಪಸ್ಥಿತರಿದ್ದರು. ಇದನ್ನೂ ಓದಿ: ಇಂದು ರಾತ್ರಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಮೋದಿ