ಮೈಸೂರು: ಮುಡಾ ಹಗರಣದ ತನಿಖೆ ತೀವ್ರಗೊಂಡ ಹೊತ್ತಲ್ಲೇ ಸ್ಫೋಟಕ ವಿಚಾರವೊಂದು ಬಹಿರಂಗಗೊಂಡಿದೆ. ಮುಡಾದಲ್ಲಿ ಈ ಹಿಂದೆ ಕೆಲಸ ಮಾಡಿದ್ದ ಇಬ್ಬರು ಅಧಿಕಾರಿಗಳು, ಸಚಿವರಿಬ್ಬರ ಪಾತ್ರದ ಬಗ್ಗೆಯೂ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.
50:50 ಅನುಪಾತದಲ್ಲಿ ಸೈಟ್ ಹಂಚಿಕೆ ಮಾಡೋವಾಗ ಇಬ್ಬರು ಸಚಿವರು ಪ್ರಭಾವ ಬೀರಿದ್ದಾರೆ.. ಇಬ್ಬರು ಪ್ರಮುಖ ಸಚಿವರ ಸಹಕಾರದಿಂದ ಈ ಅಕ್ರಮ ಆಗಿದೆ ಎಂದು ಇಬ್ಬರು ಅಧಿಕಾರಿಗಳು ಹೇಳಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
Advertisement
Advertisement
ಅಧಿಕಾರಿಗಳ ಈ ಹೇಳಿಕೆ ಆಧರಿಸಿ ಇಡಿ ತನಿಖೆ ಇನ್ನಷ್ಟು ತೀವ್ರಗೊಳಿಸಿದೆ. ಮುಂದಿನ ವಾರ ಸಿಎಂ ಸಿದ್ದರಾಮಯ್ಯಗೆ ಇಡಿ ನೊಟೀಸ್ ಕೊಡಬಹುದು, ವಿಚಾರಣೆ ನಡೆಸಬಹುದು ಎಂಬ ಸುದ್ದಿ ಹಬ್ಬಿದೆ.
Advertisement
ಈ ಮಧ್ಯೆ, ಕೊಳ್ಳೆ ಹೊಡೆಯುತ್ತಿದ್ರೂ ಮುಖ್ಯಮಂತ್ರಿಗಳನ್ನು ಮುಟ್ಟಬಾರದಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. 50 ಕೋಟಿ ರೂ. ಆಮಿಷದ ಆರೋಪ ಮಾಡಿದ್ದಕ್ಕೆ ಬಫೂನ್ ಎಂದು ಜರೆದಿದ್ದಾರೆ. ಇದನ್ನೂ ಎಸ್‌ಐಟಿಗೆ ಕೊಡಿ ಎಂದು ಲೇವಡಿ ಮಾಡಿದ್ದಾರೆ. ಆದ್ರೆ, ಸಿಎಂ ಹೇಳಿಕೆಯನ್ನು ರಮೇಶ್ ಬಂಡಿಸಿದ್ದೇಗೌಡ ಸಮರ್ಥಿಸಿದ್ದಾರೆ. ಸಿಎಂ ರಾಜೀನಾಮೆ ಕೊಡೋದು ನಿಶ್ಚಿತ ಎಂದು ವಿಜಯೇಂದ್ರ ಮತ್ತೊಮ್ಮೆ ಹೇಳಿದ್ದಾರೆ.