ಬೆಂಗಳೂರು: ಕೆಂಪೇಗೌಡ ಪ್ರತಿಮೆ (KempeGowda Statue) ಅನಾವರಣ ಹಿಂದಿನ ಪಾಲಿಟಿಕ್ಸ್ ಏನು..?, ಹಳೇ ಮೈಸೂರು ಭಾಗದಲ್ಲಿ ಬಿಜೆಪಿ (BJP) ಗೆ ಎಲೆಕ್ಷನ್ ಲಾಭ ತರುತ್ತಾ ಎಂಬ ಪ್ರಶ್ನೆಯೊಂದು ಎದ್ದಿದೆ.
Advertisement
ಹೌದು. ಹಳೆ ಮೈಸೂರಿನಲ್ಲಿ ಕೆಂಪೇಗೌಡ ಅಸ್ತ್ರ ಪ್ರಯೋಗಕ್ಕೆ ಬಿಜೆಪಿ ರೆಡಿಯಾಗಿದೆ. ಬೆಂಗಳೂರಿನ ನಿರ್ಮಾತೃ ಕೆಂಪೇಗೌಡ ಪ್ರತಿಮೆಯ ಮೂಲಕ ಇಂದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯಲಿದ್ದಾರೆ. ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ ಹಿಂದೆ ರಾಜಕೀಯ (Politics) ಸ್ಟ್ರಾಟಜಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಇದನ್ನೂ ಓದಿ: ಬೆಂಗಳೂರಿಗೆ ಮೋದಿ – 3 ಐತಿಹಾಸಿಕ ಕಾರ್ಯಕ್ರಮಕ್ಕೆ ನಮೋ ಸಾಕ್ಷಿ
Advertisement
Advertisement
ಓಲ್ಡ್ ಮೈಸೂರಿನಲ್ಲಿ ಒಕ್ಕಲಿಗ ಸಮುದಾಯ ಅಧಿಕ ಸಂಖ್ಯೆಯಲ್ಲಿದೆ. ಹೀಗಾಗಿ ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ ಜಿಲ್ಲೆಗಳ ಒಕ್ಕಲಿಗ ಮತ ಬ್ಯಾಂಕ್ ಮೇಲೆ ಬಿಜೆಪಿ ಕಣ್ಣು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಹಳೇ ಮೈಸೂರು ಭಾಗದ ಒಕ್ಕಲಿಗರಿಗೆ ಪ್ರಧಾನಿಯಿಂದಲೇ ಸಂದೇಶ ರವಾನೆಯಾಗುವ ಸಾಧ್ಯತೆಗಳಿವೆ.
Advertisement
ಪ್ರತಿಮೆ ಲಾಂಚ್ ಬಳಿಕ ಓಲ್ಡ್ ಮೈಸೂರು ಭಾಗದಲ್ಲಿ ಬಿಜೆಪಿ ಪ್ರವಾಸ ನಡೆಸಲಿದ್ದು, ಇದೇ ಅಸ್ತ್ರದ ಮೂಲಕ ಅನ್ಯ ಪಕ್ಷಗಳ ಒಕ್ಕಲಿಗ ನಾಯಕರಿಗೂ ಗಾಳ ಉರುಳಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಓಲ್ಡ್ ಮೈಸೂರು ಭಾಗದಲ್ಲಿ ಆಪರೇಷನ್ ಕಮಲಕ್ಕೆ ಚುರುಕು ಕೊಡಲು ನಿರ್ಧಾರ ಮಾಡಲಾಗಿದೆ. ಕೆಂಪೇಗೌಡ ಪ್ರತಿಮೆ ಅಸ್ತ್ರ ಪರಿಣಾಮಕಾರಿ ಬಳಕೆಗೆ ಸ್ಟ್ರಾಟೆಜಿ ಕಂಡುಕೊಂಡಿದ್ದು, ಈ ಮೂಲಕ ಜೆಡಿಎಸ್, ಕಾಂಗ್ರೆಸ್ ಭದ್ರ ಕೋಟೆಗಳಲ್ಲಿ ಬಿಜೆಪಿ ಸ್ಟ್ರಾಟೆಜಿ ವರ್ಕೌಟ್ ಆಗುತ್ತಾ ಎಂಬುದನ್ನು ಕಾದುನೋಡಬೇಕಿದೆ.