ದೊಡ್ಡವರಾದವರು ತನಿಖಾ ಸಂಸ್ಥೆಗಳಿಗೆ ಹೋಗಬಾರದು ಅಂತ ಇದೆಯಾ?: ಕಾಂಗ್ರೆಸ್ ವಿರುದ್ಧ ಸುಧಾಕರ್ ವಾಗ್ದಾಳಿ

SUDHAKAR 3

ಚಿಕ್ಕಬಳ್ಳಾಪುರ: ರಾಹುಲ್ ಗಾಂಧಿ ಇಡಿ ವಿಚಾರಣೆಗೆ ತೆರಳುವ ವೇಳೆ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ವಿಚಾರಕ್ಕೆ ಸಂಬಂಧಪಟ್ಟಂತೆ ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಇಡಿ, ಸಿಬಿಐ, ಐಟಿ ಎಲ್ಲವೂ ಇವತ್ತು. ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಯಾರ ಮೇಲೂ ಕೇಸ್ ಮಾಡಿಲ್ವಾ? ಎ ರಾಜಾ ಯಾರ ಕಾಲದಲ್ಲಿ ಜೈಲಿಗೆ ಹೋದರು? 2ಜಿ ಯಾರ ಅವಧಿಯಲ್ಲಿ ಆಯ್ತು? ಎಷ್ಟು ಜನ ಜೈಲಿಗೆ ಹೋಗಿಲ್ಲ? ಹೀಗಾಗಿ ಕಾಂಗ್ರೆಸ್‌ನವರು ಜೈಲಿಗೆ ಹಾಕಿಸಿದ್ರು ಎಂದು ಹೇಳೋಕೆ ಆಗುತ್ತಾ? ತನಿಖಾ ಸಂಸ್ಥೆಗಳ ಬಗ್ಗೆ ಗೌರವ ಇಟ್ಕೋಬೇಕು. ವಿಚಾರಣೆ ಮಾಡಲಿ, ಇನ್ನೂ ಏನು ಆಗಿಲ್ಲ. ಕುಂಬಳಕಾಯಿ ಕಳ್ಳ ಎಂದರೆ ಯಾಕೆ ಹೆಗಲು ಮುಟ್ಟಿಕೊಂಡು ನೋಡ್ಕೋತೀರಾ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಏನಿದು ಅನ್ಯಾಯ? ಏನು ಕ್ರೈಂ ಮಾಡಿದ್ದಾರೆ? ಅದು ರಾಷ್ಟ್ರದ ಆಸ್ತಿ, ಸ್ವಂತದ್ದಲ್ಲ: ಡಿಕೆಶಿ ಕೆಂಡಾಮಂಡಲ

RAHUL GANDHI

ಇಡೀ ದೇಶದಲ್ಲಿ ಕಾಂಗ್ರೆಸ್‌ನವರು ಯಾಕೆ ಪ್ರತಿಭಟನೆ ಮಾಡುತ್ತಿದ್ದೀರಾ? ಈ ದೇಶದಲ್ಲಿ ಯಾರ ಮೇಲೂ ಕೇಸ್ ಮಾಡಬಾರದಾ? ದೊಡ್ಡವರು ಉನ್ನತ ಸ್ಥಾನದಲ್ಲಿ ಇರುವವರು, ಶ್ರೀಮಂತರ ಮೇಲೆ ಕೇಸ್ ಮಾಡಬಾರದಾ? ಕಾನೂನು ತೆಗೆದುಬಿಡೋಣವಾ? ಎಲ್ಲಾ ಜನ ನೋಡುತ್ತಿದ್ದಾರೆ, ಎಚ್ಚರಿಕೆಯಿಂದ ಇರಬೇಕು. ವಿರೋಧ ಪಕ್ಷದ ನಾಯಕರುಗಳಿಗೆ ಮನವಿ ಮಾಡುತ್ತೇನೆ. ಇದೇ ರೀತಿ ಮುಂದುವರೆದರೆ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.

ಜನಸಾಮಾನ್ಯರ ಮಧ್ಯೆ ಕಾನೂನಿಗೆ ಗೌರವ ಕೊಡುವುದು, ಸಂವಿಧಾನಕ್ಕೆ ಗೌರವ ಕೊಡುವುದು ಒಳ್ಳೆಯದು. ಇವರು ಸಂವಿಧಾನದ ಪರವಾದ ಕೆಲಸ ಮಾಡುತ್ತಿದ್ದಾರಾ? ದೊಡ್ಡವರಾದವರು ತನಿಖೆ ಸಂಸ್ಥೆಗಳಿಗೆ ಹೋಗಬಾರದು ಅಂತ ಇದೆಯಾ ಎಂದು ಗುಡುಗಿದರು. ಇದನ್ನೂ ಓದಿ: ನ್ಯಾಷನಲ್‌ ಹೆರಾಲ್ಡ್‌ ಸೋನಿಯಾ, ರಾಹುಲ್‌ ಗಾಂಧಿ ವೈಯಕ್ತಿಕ ಆಸ್ತಿಯಲ್ಲ: ಮಲ್ಲಿಕಾರ್ಜುನ ಖರ್ಗೆ

SUDHAKAR MEETING 1 1

ಇದೇ ವೇಳೆ ವೀರಪ್ಪ ಮೊಯ್ಲಿಗೆ ಟಾಂಗ್ ನೀಡಿದ ಸುಧಾಕರ್, ವೀರಪ್ಪ ಮೊಯ್ಲಿ ಬಂದರೆ ಮತ್ತೆ ಎತ್ತಿನಹೊಳೆ ನೀರು ಬರುವುದಿಲ್ಲ. ವೀರಪ್ಪ ಮೊಯ್ಲಿ 10 ವರ್ಷ ಸುಳ್ಳು ಹೇಳಿ ಮನೆಗೆ ಹೋಗಿದ್ದಾರೆ. ಈಗ ಅವರು ಬರದೇ ಇದ್ದರೆ ಎತ್ತಿನಹೊಳೆ ನೀರು ಬರಲಿದೆ. ಅವರೇನಾದ್ರೂ ಮತ್ತೆ ಬಂದರೆ ನೀರು ಮಾಯವಾಗಲಿದೆ ಎಂದು ವೀರಪ್ಪ ಮೊಯ್ಲಿ ವಿರುದ್ಧ ಸಚಿವ ಸುಧಾಕರ್ ವ್ಯಂಗ್ಯ ಮಾಡಿದರು.

Comments

Leave a Reply

Your email address will not be published. Required fields are marked *