ಬೆಂಗಳೂರು: ವಿಧಾನಸೌಧದಲ್ಲಿಂದು ನಡೆದ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ (Democracy Day karnataka 2024) ಸಿಎಂ ಸಮ್ಮುಖದಲ್ಲೇ ಅಪರಿಚಿತ ವ್ಯಕ್ತಿಯೊಬ್ಬ ಇದ್ದಕಿದ್ದಂತೆ ಎಡವಟ್ಟಿನ ಕೆಲಸ ಮಾಡಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಒಂದು ಕ್ಷಣ ಏನೋ ಆಯ್ತು ಅಂತ ಅನ್ಕೊಂಡು ಅಲ್ಲಿದ್ದವರು ಗಾಬರಿಯಾಗಿದ್ರು. ಆದ್ರೆ ಅಸಲಿ ವಿಷ್ಯ ಗೊತ್ತಾದ ಮೇಲೆ ಸಿಎಂ, ಸಚಿವರಾದಿಯಾಗಿ ಎಲ್ರೂ ನಿಟ್ಟುಸಿರು ಬಿಟ್ರು.
Advertisement
ಅಷ್ಟಕ್ಕೂ ವಿಧಾನಸೌಧಲ್ಲಿ (Vidhana Soudha) ಇಂದು (ಭಾನುವಾರ) ನಡೆದಿದ್ದಿಷ್ಟು. ಕಡು ಬಿಸಿಲಿನ ನಡುವೆ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಬಳಿ ಸರ್ಕಾರದಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಯೋಜಿಸಲಾಗಿತ್ತು. ಸಿಎಂ, ಸಚಿವರು, ಶಾಸಕರು ವಿವಿಧ ಇಲಾಖೆಗಳ ಅಧಿಕಾರಿಗಳು, ನೂರಾರು ಜನ ಜಮಾಯಿಸಿದ್ರು. ಆದರೆ ಇದ್ದಕಿದ್ದಂತೆ ಅನಾಮಿಕ ವ್ಯಕ್ತಿಯೊಬ್ಬನಿಂದ ಕಾರ್ಯಕ್ರಮದಲ್ಲಿ ಗೊಂದಲ, ಆತಂಕ ಸೃಷ್ಟಿಯಾದ ಪ್ರಸಂಗ ನಡೆದುಹೋಯ್ತು.
Advertisement
Advertisement
ಕಾರ್ಯಕ್ರಮದಲ್ಲಿ ದಿಢೀರನೇ ಸಿಎಂ ಕೂತಿದ್ದ ವೇದಿಕೆಯತ್ತ ಆ ಅಪರಿಚಿತ ವ್ಯಕ್ತಿ ನುಗ್ಗಿದ್ದ. ಕೈಯಲ್ಲಿ ರೇಷ್ಮೆ ಶಾಲು ಹಿಡಿದು ಜನರ ಗುಂಪಿಂದ ವೇದಿಕೆ ಜಿಗಿದು ಸಿಎಂ ಕಡೆ ಧಾವಿಸಿದ್ದ. ಈ ಅನಿರೀಕ್ಷಿತ ಘಟನೆಯಿಂದ ವೆರದಿಕೆಯಲ್ಲಿದ್ದ ಸಿಎಂ (Chief Minister), ಸಚಿವರು ಒಂದು ಕ್ಷಣ ಗಾಬರಿಯಿಂದ ಆತಂಕಗೊಂಡರು. ಸ್ಥಳದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಏನಾಗ್ತಿದೆ ಅಂತ ತಿಳಿಯುವಷ್ಟರಲ್ಲಿ ತಕ್ಷಣ ಭದ್ರತಾ ಸಿಬ್ಬಂದಿ, ವೇದಿಕೆಗೆ ಹಾರಿದ್ದ ಆ ವ್ಯಕ್ತಿಯನ್ನು ತಡೆದು ಕೆಳಗೆ ಉರುಳಿಸಿ ದರದರನೆ ಎಳೆದೋಯ್ದ ಪೊಲೀಸರ ವಶಕ್ಕೆ ಕೊಟ್ರು. ಇದೇ ವೇಳೆ ಆ ವ್ಯಕ್ತಿ ತಾನು ಹಿಡಿದಿದ್ದ ಶಾಲನ್ನು ಸಿಎಂ ಅವರತ್ತ ಎಸೆದ, ಆದರೆ ಅದು ಸಚಿವ ಕೆ.ಜೆ ಜಾರ್ಜ್ ಬಳಿ ಹೋಗಿ ಬಿತ್ತು. ಕೊನೆಗೆ ಆತ ಬಂದಿದ್ದು ಸಿಎಂಗೆ ಶಾಲು ಹಾಕಲು ಅಂತ ಗೊತ್ತಾಗಿ ಸಿಎಂ, ಸಚಿವರು ನಿಟ್ಟುಸಿರು ಬಿಟ್ರು…
Advertisement
ಈ ಘಟನೆ ಪೊಲೀಸರ ಭದ್ರತಾ ವೈಫಲ್ಯದಿಂದ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ. ಸಿಎಂ ಕಾರ್ಯಕ್ರಮದಲ್ಲಿ ಯುವಕ ವಿವಿಐಪಿ ಭದ್ರತೆ ಭೇದಿಸಿ ನುಗ್ಗಿ ಬಂದಿದ್ದು, ಭದ್ರತಾ ವೈಫಲ್ಯ (Security Breach) ಆಗಿದೆ. ಗುಪ್ತಚರ ಇಲಾಖೆ ಏನ್ ಮಾಡ್ತಿದೆ ಎಂದು ಪರಿಷತದ ಸದಸ್ಯ ರವಿಕುಮಾರ್ ಟೀಕಿಸಿದ್ದಾರೆ.
ಪೊಲೀಸರು ಆತನನ್ನ ವಶಕ್ಕೆ ಪಡೆದು ವಿಧಾನಸೌಧ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಶಾಲು ಹಾಕಲು ಬಂದ ವ್ಯಕ್ತಿ ಬನಶಂಕರಿ ಮೂಲದ ಮಹಾದೇವ ನಾಯಕ್ ಎಂದು ಗುರುತಿಸಲಾಗಿದ್ದು, ಕಳೆದ ಒಂದು ವಾರದ ಹಿಂದೆ ಸಿಎಂಗೆ ಶಾಲು ಹಾಕಲು ಮುಂದಾಗಿದ್ದ ಆದರೆ ಆಗಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಇಂದು ಕೂಡ ಶಾಲು ಹಾಕಲು ಯತ್ನಿಸಿದ್ದಾನೆ. ಉತ್ತರ ಕರ್ನಾಟಕ ಮೂಲಕ ಮಹದೇವ ನಾಯಕ್ ಸಿದ್ದರಾಮಯ್ಯ ಅಭಿಮಾನಿ ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ಇನ್ನು ಸಿಎಂ ಕಾರ್ಯಕ್ರಮದಲ್ಲಿ ಭದ್ರತಾ ವೈಫಲ್ಯ ಆಗಿರುವ ಬಗ್ಗೆಯೂ ತನಿಖೆ ನಡೆಯಲಿದೆ ಎನ್ನಲಾಗಿದೆ.