ಬೆಂಗಳೂರು: ಸಾರಿಗೆ ಸಚಿವರಿಗೆ ಇಲಾಖೆ ಬೇಡವಾದ ಕೂಸು ಅನ್ನೋ ಆರೋಪ ಮೊದಲಿನಿಂದಲೂ ಇದೆ. ಒಲ್ಲದ ಮನಸಲ್ಲೇ ಇಲಾಖೆ ವಹಿಸಿಕೊಂಡ ಸಚಿವರು ತಮ್ಮ ಭಟ್ಟಂಗಿಗಳಿಗೆ ನಿಗಮಗಳನ್ನ ವಹಿಸಿದ್ದಾರಾ ಅನ್ನೋ ಅನುಮಾನ ಶುರುವಾಗಿದೆ. ಇದಕ್ಕೆ ಕಾರಣ ಇತ್ತೀಚೆಗೆ ಸಾರಿಗೆ ಸಚಿವರ ಕಚೇರಿಯಲ್ಲಿ ನಡೆಯುತ್ತಿರೋ ವರ್ಗಾವಣೆ ಭ್ರಷ್ಟಾಚಾರದ ಆರೋಪವಾಗಿದೆ.
Advertisement
ರಾಜ್ಯ ಸರ್ಕಾರದ ಅತ್ಯಂತ ಪ್ರಭಾವಿ ಸಚಿವರಲ್ಲೊಬ್ಬರಾದ ಶ್ರೀರಾಮುಲುಗೆ ತಮ್ಮ ಸಾರಿಗೆ ಇಲಾಖೆ ಮೇಲೆ ಅದ್ಯಾಕೋ ಮೋಹ ಕಡಿಮೆ. ಸಚಿವರು ಸಾರಿಗೆ ನಿಗಮಗಳ ಬಗ್ಗೆ ತಲೆಕೆಡಿಸಿಕೊಂಡಿದ್ದೂ ಕಡಿಮೆ. ಸಚಿವರ ಈ ವರ್ತನೆ ಈಗ ಅವರ ಹಿಂಬಾಲಕರಿಗೆ ಹಣ ಮಾಡಿಕೊಳ್ಳೋ ದಾರಿಯಾಗಿದ್ಯಾ ಅನ್ನೋ ಅನುಮಾನಕ್ಕೆ ಕಾರಣವಾಗಿದೆ. ಕಾರಣ ನಾಲ್ಕೂ ಸಾರಿಗೆ ನಿಗಮಗಳಲ್ಲಿ ಎಲ್ಲಾ ವರ್ಗಾವಣೆ ನೇರವಾಗಿ ಸಚಿವರ ಕಚೇರಿಯಿಂದಲೇ ನಡೆಯಲಾರಂಭಿಸಿದೆ.
Advertisement
Advertisement
ಈ ವರ್ಗಾವಣೆಗೆ ಏಂಜಟರುಗಳಿದ್ದು ಹಣ ವಸೂಲಿ ಮಾಡ್ತಿದ್ದಾರೆ. ಪ್ರತೀ ವರ್ಗಾವಣೆಗಿಷ್ಟು ಎಂದು ಹಣ ಪಡೆಯಲಾಗ್ತಿದೆ. ಸಾರಿಗೆ ಸಚಿವರ ಕಚೇರಿಯಿಂದ ಟ್ರಾನ್ಸ್‍ಫರ್ ದಂಧೆಯ ವಾಸನೆ ಬರಲಾರಂಭಿಸಿದೆ ಎಂದು ಕೆಎಸ್‍ಆರ್ಟಿಸಿ ಸ್ಟಾಫ್ ಅಂಡ್ ಫೆಡರೇಷನ್ ನೇರವಾಗೇ ಆರೋಪ ಮಾಡಿದೆ. ಜೊತೆಗೆ ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ನೌಕರರ ಮುಖಂಡ ಅನಂತ್ ಸುಬ್ಬಾರಾವ್ ಪತ್ರ ಬರೆದು ಆಗ್ರಹಿಸಿದ್ದಾರೆ. ಇದನ್ನೂ ಓದಿ: CommonwealthGames: ಬೆಳ್ಳಿಗೆ ಮುತ್ತಿಟ್ಟ ಭಾರತದ ವನಿತೆ ತುಲಿಕಾ ಮಾನ್
Advertisement
ಸಾರಿಗೆ ನಿಗಮದಲ್ಲಿ ಒಂದು ನಿಯಮವಿದೆ. ಯಾವುದೇ ಟ್ರಾನ್ಸ್ ಫರ್ ನಡೆಯೋದಾದ್ರೂ ಅದನ್ನ ನಿಗಮದ ಎಂಡಿಗಳೇ ಮಾಡಬೇಕು. ವರ್ಗಾವಣೆಗೂ ಸಾರಿಗೆ ಸಚಿವರಿಗೂ ಯಾವುದೇ ಸಂಬಂಧ ಇಲ್ಲ. ಹೀಗಿರುವಾಗ ಸಚಿವರ ಕಚೇರಿಯೇಕೆ ಮಧ್ಯ ಪ್ರವೇಶ ಮಾಡ್ಬೇಕು ಎಂದು ನೌಕರರ ಫೆಡರೇಷನ್ ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ಸಾರಿಗೆ ಇಲಾಖೆಯಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಆಗಾಗ ಪ್ರೂವ್ ಆಗ್ತಲೇ ಇದೆ. ಮಾನವೀಯತೆ ದೃಷ್ಟಿಯಿಂದ ಯಾವುದೋ ನೌಕರರಿಗೆ ಟ್ರಾನ್ಸ್ ಫರ್ ಮಾಡಿ ಒಳಿತು ಮಾಡಿದ್ರೆ ಅದ್ರ ಬಗ್ಗೆ ಯಾರ ಆಕ್ಷೇಪಣೆಯೂ ಇಲ್ಲ. ಆದ್ರೆ ನೌಕರರ ಸಂಘಟನೆ ಆರೋಪದಂತೆ ಸಚಿವರ ಗಮನಕ್ಕೆ ಬಾರದೇ ಅವ್ರ ಹಿಂಬಾಲಕರು ಬಡನೌಕರರಿಂದ ಹಣ ಪೀಕಿ ವರ್ಗಾವಣೆ ದಂಧೆಗಿಳಿದಿದ್ರೆ ನಿಜಕ್ಕೂ ಅದು ದುರದೃಷ್ಟಕರ. ಈಬಗ್ಗೆ ಸಚಿವರು ಎಚ್ಚೆತ್ತುಕೊಳ್ಳೋ ಅನಿವಾರ್ಯತೆ ಇದೆ.