ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಮೂಡಿ ಬಂದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ದೇಶಾದ್ಯಂತ ಸಾಕಷ್ಟು ಸದ್ದು ಮಾಡಿತ್ತು. 1990ರ ಕಾಶ್ಮೀರಿ ಕಣಿವೆಯಲ್ಲಿ ಕಾಶ್ಮೀರಿ ಪಂಡಿತರ ಹತ್ಯೆಯನ್ನು ಆಧರಿಸಿದ ಸಿನಿಮಾ ಇದಾಗಿದ್ದರಿಂದ ಚಿತ್ರಕ್ಕೆ ಭಾರೀ ಬೆಂಬಲ ಕೂಡ ವ್ಯಕ್ತವಾಯಿತು. ಹಲವು ರಾಜ್ಯಗಳು ಈ ಚಿತ್ರಕ್ಕೆ ತೆರಿಗೆ ವಿನಾಯತಿ ಘೋಷಣೆ ಮಾಡಿ, ಜನರೂ ನೋಡುವಂತೆ ಮಾಡಿದರು. ಹೀಗಾಗಿ ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಈ ಸಿನಿಮಾ ರಿಲೀಸ್ ಆಯಿತು. ಇದನ್ನೂ ಓದಿ : ಚಿರಂಜೀವಿ ನಟನೆಯ ‘ಆಚಾರ್ಯ’ ಸಿನಿಮಾ ಸೋಲು : ಹೊಣೆಹೊತ್ತು ಹಣ ಮರಳಿಸಿದ್ರಾ ನಿರ್ದೇಶಕ ಶಿವ
Advertisement
ಸಿಂಗಪುರ್ ಸೇರಿದಂತೆ ಹಲವು ರಾಷ್ಟ್ರಗಳು ಈ ಸಿನಿಮಾವನ್ನು ತಮ್ಮ ದೇಶದಲ್ಲಿ ರಿಲೀಸ್ ಮಾಡದಂತೆ ನಿರ್ಬಂಧ ಹೇರಿದವು. ಅಲ್ಲದೇ, ವಿವೇಕ್ ಅಗ್ನಿಹೋತ್ರಿ ಅವರ ಭಾಷಣಕ್ಕೂ ಅಡೆತಡೆ ಮಾಡಲಾಯಿತು. ಇವೆಲ್ಲವೂ ನಡೆಯುತ್ತಿರುವ ಸಂದರ್ಭದಲ್ಲಿ ವಿವೇಕ್ ಅವರಿಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ ಅಭಿಮಾನಿಗಳು. ದಿ ಕಾಶ್ಮೀರಿ ಫೈಲ್ಸ್ ಸಿನಿಮಾ ಪಾರ್ಟ್ 2 ಆಗಿ ಮೂಡಿ ಬರಲಿದೆಯಾ? ಎನ್ನುವ ಪ್ರಶ್ನೆಗೆ ವಿವೇಕ್ ಅಗ್ನಿಹೋತ್ರಿ ಉತ್ತರಿಸಿದ್ದಾರೆ. ಇದನ್ನೂ ಓದಿ : ನಿಖಿಲ್ ಕುಮಾರ್ ಸ್ವಾಮಿ ಪುತ್ರನಿಗೆ ಇಟ್ಟ ಹೆಸರೇನು? ಆ ಹೆಸರಿನ ಅರ್ಥ ಏನು?
Advertisement
Advertisement
ಈಗಾಗಲೇ ಫೈಲ್ಸ್ ಸರಣಿಯ ಚಿತ್ರಗಳನ್ನು ಮಾಡುತ್ತಾ ಬಂದಿದ್ದಾರೆ ವಿವೇಕ್. ದಿ ಕಾಶ್ಮೀರ್ ಫೈಲ್ಸ್ ನಂತರ, ದಿ ಡೆಲ್ಲಿ ಫೈಲ್ಸ್ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾವನ್ನೇ ಮುಂದುವರೆದ ಭಾಗ ಎಂದುಕೊಳ್ಳಿ ಎಂದು ಉತ್ತರಿಸಿದ್ದಾರೆ. ಅಂದರೆ, ಕಾಶ್ಮೀರಿ ಪಂಡಿತರ ಹತ್ಯೆಯ ಸಿನಿಮಾ ಇದಲ್ಲವಾದರೂ, ಡೆಲ್ಲಿ ಫೈಲ್ಸ್ ನಲ್ಲೂ ಹತ್ಯಾಕಾಂಡವೇ ಪ್ರಧಾನ ಕಥೆಯಾಗಿ ಮೂಡಿ ಬರಲಿದೆಯಂತೆ.