CinemaLatestLeading NewsMain PostSouth cinema

ಬ್ರಹ್ಮಾಸ್ತ್ರ ಇವೆಂಟ್ ಕ್ಯಾನ್ಸಲ್: ನಟ ಜ್ಯೂ.ಎನ್.ಟಿ.ಆರ್ ಗೆ ಈಗಿನಿಂದಲೇ ಅಡ್ಡಗಾಲು ಹಾಕುತ್ತಿದ್ದಾರಾ ತೆಲಂಗಾಣ ಸಿಎಂ ಕೆಸಿಆರ್

ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ವಿರುದ್ಧ ತೆಲುಗಿನ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್ ಫ್ಯಾನ್ಸ್ ಗರಂ ಆಗಿದ್ದಾರೆ. ತಮ್ಮ ನೆಚ್ಚಿನ ನಟನಿಗೆ ಕೆಸಿಆರ್ ಸುಖಾಸುಮ್ಮನೆ ತೊಂದರೆ ಕೊಡುತ್ತಿದ್ದಾರೆ ಎಂದು ಫ್ಯಾನ್ಸ್ ಆರೋಪ ಮಾಡಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧದ ಚರ್ಚೆ ಕೂಡ ನಡೆದಿದ್ದು, ಕೆಸಿಆರ್ ನಡೆಯನ್ನು ವ್ಯಾಪಕವಾಗಿ ಖಂಡಿಸುತ್ತಿದ್ದಾರೆ. ಜ್ಯೂನಿಯರ್ ಫ್ಯಾನ್ಸ್ ಸಿಎಂ ಮೇಲೆ ಗರಂ ಆಗಿರುವುದಕ್ಕೆ ಕಾರಣವೂ ಇದೆ.

ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಕಾಂಬಿನೇಷನ್ ನ ಬ್ರಹ್ಮಾಸ್ತ್ರ ಸಿನಿಮಾದ ಬೃಹತ್ ಇವೆಂಟ್ ಹೈದರಾಬಾದ್ ನಲ್ಲಿ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಜ್ಯೂನಿಯರ್ ಎನ್.ಟಿ.ಆರ್ ಆಗಮಿಸಬೇಕಿತ್ತು. ಜ್ಯೂನಿಯರ್ ಫ್ಯಾನ್ಸ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ತುದಿಗಾಲಲ್ಲಿ ನಿಂತಿದ್ದರು. ಈ ಕಾರ್ಯಕ್ರಮದಿಂದ ಜ್ಯೂನಿಯರ್ ಗೆ ಮತ್ತಷ್ಟು ಪ್ರಚಾರ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಪೊಲೀಸರನ್ನು ಬಳಸಿಕೊಂಡು ಇವೆಂಟ್ ಕ್ಯಾನ್ಸಲ್ ಮಾಡಿಸಿದ್ದಾರಂತೆ ಸಿಎಂ. ಹಾಗಂತ ಅಭಿಮಾನಿಗಳು ಆರೋಪ ಮಾಡುತ್ತಿದ್ದಾರೆ. ಇದನ್ನೂ ಓದಿ: ಜಶ್ವಂತ್‍ನಿಂದ ನಂದಿನಿ ಅಂತರ ಕಾಯ್ದುಕೊಳ್ಳುತ್ತಿರುವುದ್ಯಾಕೆ..?

ಇತ್ತೀಚೆಗಷ್ಟೇ ಜ್ಯೂನಿಯರ್ ಎನ್.ಟಿ.ಆರ್ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಈ ಸಮಯದಲ್ಲಿ ಅಮಿತ್ ಶಾ ಕೂಡ ಜ್ಯೂನಿಯರ್ ಬಗ್ಗೆ ಹಾಡಿ ಹೊಗಳಿದ್ದರು. ರಾಜಕೀಯ ಕುಟುಂಬದ ಹಿನ್ನೆಲೆಯಿಂದಲೇ ಬಂದಿರುವ ಜ್ಯೂನಿಯರ್ ಬಿಜೆಪಿ ಸೇರುತ್ತಾರೆ ಎನ್ನುವ ಸುದ್ದಿ ಕೂಡ ತೆಲಂಗಾಣದಲ್ಲಿ ಜೋರಾಗಿದೆ. ಇದು ತೆಲಂಗಾಣ ಸಿಎಂ ಕೆಸಿಆರ್ ಅವರನ್ನು ನಿದ್ದೆಗೆಡಿಸಿದೆ ಎಂದು ಹೇಳಲಾಗುತ್ತಿದೆ. ಬ್ರಹ್ಮಾಸ್ತ್ರ ಸಿನಿಮಾದ ಇವೆಂಟ್ ಗೆ ಸಿಲ್ಲಿ ಕಾರಣ ಕೊಟ್ಟು ಕ್ಯಾನ್ಸಲ್ ಆಗುವಂತೆ ಮಾಡಲಾಗಿದೆ.

ಸದ್ಯ ಗಣಪತಿ ಹಬ್ಬವೂ ಇರುವುದರಿಂದ, ಹೆಚ್ಚಿನ ಸಂಖ್ಯೆಯಲ್ಲಿ ಭದ್ರತೆ ಅವಶ್ಯಕತೆಯಿದ್ದು, ಲಕ್ಷಾಂತರ ಜನರು ಸೇರುವ ಬ್ರಹ್ಮಾಸ್ತ್ರ ಸಿನಿಮಾದ ಇವೆಂಟ್ ಗೆ ಭದ್ರತೆ ನೀಡುವುದು ಕಷ್ಟ. ಹಾಗಾಗಿ ಕಾರ್ಯಕ್ರಮವನ್ನು ಕ್ಯಾನ್ಸಲ್ ಮಾಡಿಕೊಳ್ಳಿ ಎಂದು ಪೊಲೀಸರು ಸೂಚಿಸಿದ್ದಾರೆ. ಇವೆಂಟ್ ಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದ ತಂಡಕ್ಕೆ ಈ ನಡೆಯಿಂದ ಬೇಸರವುಂಟಾಗಿದೆ.

Live Tv

Leave a Reply

Your email address will not be published.

Back to top button