ಮುಂಬೈ: ಬಾಲಿವುಡ್ ನಟ ಅನಿಲ್ ಕಪೂರ್ ಅವರ ಪುತ್ರಿ, ನಟಿ ಸೋನಂ ಕಪೂರ್ ತಾಯಿ ಆಗುತ್ತಿದ್ದಾರೆ ಎಂಬ ಸುದ್ದಿ ಬಿ-ಟೌನ್‍ನಲ್ಲಿ ಹರಿದಾಡುತ್ತಿದೆ. ಅಲ್ಲದೆ ಅವರ ಬೇಬಿ ಬಂಪ್ ಫೋಟೋ ಕೂಡ ಸಾಕಷ್ಟು ವೈರಲ್ ಆಗುತ್ತಿದೆ.
ಕೆಲವು ದಿನಗಳ ಹಿಂದೆಯಷ್ಟೇ ಸೋನಂ ತಮ್ಮ ಪತಿ ಆನಂದ್ ಅಹುಜಾ ಜೊತೆ ಲಂಡನ್‍ನಿಂದ ಭಾರತಕ್ಕೆ ಹಿಂದಿರುಗಿದ್ದಾರೆ. ಸೋನಂ ಕೊರೊನಾದಿಂದ ಸುರಕ್ಷಿತವಾಗಿದ್ದು, ಸದ್ಯ ಅವರನ್ನು ಹಾಗೂ ಅವರ ಪತಿಯನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಇದರ ನಡುವೆ ಸೋನಂ ಗರ್ಭಿಣಿ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಸೋನಂ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
Advertisement
Advertisement
ಸಾಮಾಜಿಕ ಜಾಲತಾಣಗಳಲ್ಲಿ ಸೋನಂ ಅವರ ಫೋಟೋವೊಂದು ವೈರಲ್ ಆಗಿದೆ. ಇದರಲ್ಲಿ ಅವರ ಬೇಬಿ ಬಂಪ್ ಕಾಣಿಸುತ್ತೆ ಎಂದು ಹೇಳಲಾಗುತ್ತಿದೆ. ಫೋಟೋದಲ್ಲಿ ಸೋನಂ ಬಿಳಿ ಬಣ್ಣದ ನೈಟ್‍ವೇರ್ ನೈಟ್ ಡ್ರೆಸ್ ಧರಿಸಿದ್ದಾರೆ. ಈ ಡ್ರೆಸ್‍ನಲ್ಲಿ ಅವರು ಗರ್ಭಿಣಿ ರೀತಿ ಕಾಣಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಗೃಹ ಬಂಧನದಲ್ಲಿರುವ ಸೋನಂ ತಮ್ಮ ಮನೆಯ ಗಾಜಿನ ಕಿಟಕಿ ಮೂಲಕ ಕೆಳಗೆ ನಿಂತಿದ್ದ ತಮ್ಮ ಅತ್ತೆ ಜೊತೆ ಮಾತನಾಡುತ್ತಿದ್ದಾರೆ.
Advertisement
Advertisement
ವರದಿಗಳ ಪ್ರಕಾರ, ಸೋನಂ ಲಂಡನ್‍ನಿಂದ ಭಾರತಕ್ಕೆ ಹಿಂದಿರುಗಿದಾಗಿನಿಂದ ತುಂಬಾ ದಣಿದಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಸೋನಂ ಲೈಮ್‍ಲೈಟ್‍ನಿಂದ ದೂರವಿದ್ದು, ಕೆಲವು ದಿನಗಳ ಹಿಂದೆ ನಡೆದಿದ್ದ ಅವಾರ್ಡ್ ಕಾರ್ಯಕ್ರಮವನ್ನು ಮಿಸ್ ಮಾಡಿಕೊಂಡಿದ್ದರು ಎಂಬುದು ತಿಳಿದುಬಂದಿದೆ. ಸೋನಂ ತಾಯಿ ಆಗುತ್ತಿರುವ ವಿಷಯದ ಬಗ್ಗೆ ಅವರಾಗಲಿ, ಅವರ ಪತಿಯಾಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.