ಕೊಪ್ಪಳ: ಜಿಲ್ಲೆಯ ಅಳವಂಡಿ ಗ್ರಾಮದ ಶ್ರೀ ಸಿದ್ದೇಶ್ವರ ಮಠದ ಸ್ವಾಮೀಜಿಯವರು ಪೀಠತ್ಯಾಗ ಮಾಡಿದ್ದು, ಇದೀಗ ಸ್ವಾಮೀಜಿಗಳ ನಡೆ ಭಾರೀ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
13ನೇ ವಯಸ್ಸಿನಲ್ಲಿಯೇ ಪೀಠಾಧಿಪತಿಯಾಗಿದ್ದ ಸ್ವಾಮೀಜಿಯವರು ಮುಂಡರಗಿಯ ಕಾಲೇಜಿನಲ್ಲಿ ಪಾಠವನ್ನೂ ಮಾಡುತ್ತಿದ್ದರು. ಇದೀಗ ಕಾಲೇಜಿಗೆ ಬರುತ್ತಿದ್ದ ತಮ್ಮ ವಿದ್ಯಾರ್ಥಿನಿಯನ್ನೇ ಪ್ರೀತಿಸಿ ಮದುವೆಯಾಗಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.
Advertisement
ಈ ಮಠವೂ ಉಜ್ಜಯನಿಯ ಶಾಖಾ ಪೀಠದಲ್ಲೊಂದಾಗಿದೆ. ಇದೇ ಕಾರಣಕ್ಕಾಗಿ ಪೀಠ ತ್ಯಾಗ ಮಾಡಿ ಹೋಗಿದ್ದಾರೆ ಎನ್ನುವ ಗುಮಾನಿಯೂ ಹರಡಿದೆ. ಆದ್ರೆ ಒಂದು ಗುಂಪು ಮಠದ ಅಭಿವೃದ್ಧಿ ಮಾಡಲು ಸಾಧ್ಯವಾಗದೇ ಮನನೊಂದು ಮಠತ್ಯಾಗ ಮಾಡಿದ್ದಾರೆ ಅನ್ನುತ್ತಿದೆ.
Advertisement
Advertisement
ಈ ಬಗ್ಗೆ ಸ್ವಾಮೀಜಿಗಳ ತಂದೆ ಪ್ರಕಾಶ್ ಇನಾಂದರ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಸ್ವಾಮೀಜಿಗಳು ಪೀಠತ್ಯಾಗ ಮಾಡಿ 2 ದಿನಗಳಾಗಿವೆ. ನಾನು ಅಳವಂಡಿಯಲ್ಲಿಯೇ ಇದ್ದೇನೆ. ಆದ್ರೆ ಯಾಕೆ ಪೀಠ ತ್ಯಾಗ ಮಾಡಿದ್ದಾರೆ ಅಂತ ಗೊತ್ತಿಲ್ಲ ಅಂದ್ರು.
Advertisement
ನಾನು ಮಠಕ್ಕೆ ಹೋಗಿಲ್ಲ. ಮನಸ್ಸಿಗೆ ಬೇಜರಾಗಿ ಮನೆಯಿಂದ ಹೊರಗಡೆ ಹೋಗಿಯೇ ಇಲ್ಲ. ಹೀಗಾಗಿ ನನಗೇನೂ ಗೊತ್ತಿಲ್ಲ. ಹೋಗುವ ಮೊದಲು ಅವರ ಮೊಬೈಲ್ ನನಗೆ ಕೊಟ್ಟು ಹೋಗಿದ್ದಾರೆ. ಮನನೊಂದು ಹೋಗುತ್ತಿದ್ದೇನೆ ಅಂತ ಹೇಳಿದ್ದಾರೆ ಅಷ್ಟೇ. ಅದಕ್ಕಿಂತ ಹೆಚ್ಚು ನನಗೇನೂ ಗೊತ್ತಿಲ್ಲ. ಎಲ್ಲಿ ಹೋಗಿದ್ದಾರೆ ಅಂತನೂ ನನಗೆ ತಿಳಿದಿಲ್ಲ ಅಂತ ಹೇಳಿದರು.
ಪೀಠತ್ಯಾಗ ಮಾಡುವ ಬಗ್ಗೆ ಮಠದವರಿಗೆ ತಿಳಿಸಿದ್ದಾರೆ. ಒಟ್ಟಿನಲ್ಲಿ ಪೀಠತ್ಯಾಗ ಮಾಡುವ ಬಗ್ಗೆ ಯಾರ ಜೊತೆಗೂ ಏನೂ ಮಾತನಾಡಿಕೊಂಡಿಲ್ಲ ಅಂತ ಅವರು ತಿಳಿಸಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv