ಈ ನಟನಿಂದ ವೇಯ್ಟ್ ಲಾಸ್ ಟಿಪ್ಸ್ ಪಡೆಯಲಿದ್ದಾರಂತೆ ಸಲ್ಮಾನ್ ಖಾನ್!

Public TV
2 Min Read
salma aamir khan

ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ತಮ್ಮ ಮುಂದಿನ ಚಿತ್ರಕ್ಕಾಗಿ ತೂಕ ಕಡಿಮೆ ಮಾಡಿಕೊಳ್ಳಲು ಮಿಸ್ಟರ್ ಪರ್ಫೆಕ್ಟ್ ಆಮೀರ್ ಖಾನ್‍ರಿಂದ ಸಲಹೆ ಪಡೆದಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

aamir khan

ಫಿಟ್ ಆ್ಯಂಡ್ ಸ್ಲಿಮ್ ಆಗಿರೋ ಆಮೀರ್‍ರಿಂದ ಸಲ್ಮಾನ್ ತೂಕ ಇಳಿಸಲು ಸಹಾಯ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಈ ಹಿಂದೆ ಸಲ್ಮಾನ್ ಖಾನ್ `ಸುಲ್ತಾನ್’ ಸಿನಿಮಾಗಾಗಿ ತೂಕವನ್ನು ಹೆಚ್ಚಿಸಿಕೊಂಡು ಅಪ್ಪಟ ದೇಶಿ ಕುಸ್ತಿಪಟುವಾಗಿ ಕಾಣಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ಸಲ್ಮಾನ್ ತೂಕದಲ್ಲಿ ಇಳಿಕೆ ಕಂಡಿಲ್ಲ. ಸದ್ಯ ಸಲ್ಮಾನ್ `ಜಿಂದಾ ಹೈ ಟೈಗರ್’ ಸಿನಿಮಾದಲ್ಲಿಯೂ ಮಾಸ್ ಲುಕ್‍ನಲ್ಲಿ ಕಾಣಿಸಿಕೊಳ್ಳಲಿದ್ದು, ಇಲ್ಲಿಯೂ ಸಹ ಸಲ್ಮಾನ್ ತೂಕವನ್ನು ಇಳಿಸಿಕೊಂಡಿಲ್ಲ.

https://www.instagram.com/p/BNRaevTjDEr/?taken-by=beingsalmankhan&hl=en

ಆಮೀರ್ ಯಾಕೆ?: ತಮ್ಮ ಸಿಕ್ಸ್ ಪ್ಯಾಕ್ ಮೂಲಕ ಮನೆಮಾತಾಗಿರೋ ಸಲ್ಮಾನ್, ದೇಹದ ತೂಕ ಇಳಿಸಿಕೊಳ್ಳಲು ಆಮಿರ್ ಸಲಹೆ ಪಡೆಯುತ್ತಿದ್ದಾರೆ. ಕಳೆದ ವರ್ಷ ಬಿಡುಗಡೆಗೊಂಡ `ದಂಗಲ್’ ಸಿನಿಮಾದಲ್ಲಿ ಆಮೀರ್ ಎರಡು ವಿಭಿನ್ನ ಶೇಡ್‍ನಲ್ಲಿ ಕಾಣಿಸಿಕೊಂಡಿದ್ರು. ಮೊದಲಿಗೆ ವಯಸ್ಕರಾಗಿ ಮಹಾವೀರ್ ಫೋಗಟ್ ಪಾತ್ರದಲ್ಲಿ ನಟಿಸಿದ್ದರು. ಜೊತೆಗೆ ತೂಕ ಇಳಿಸಿಕೊಂಡು ಯುವಕನ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು. ವಿಭಿನ್ನ ಪಾತ್ರಗಳಿಗಾಗಿ ಕಡಿಮೆ ಅವಧಿಯಲ್ಲಿ ಆಮೀರ್ ತೂಕ ಇಳಿಸುವ ಮೂಲಕ ಸುದ್ದಿಯಾಗಿದ್ದರು.

ಸಲ್ಮಾನ್ ಖಾನ್ ರೆಮೋ ಡಿಸೋಜಾ ನಿರ್ಮಾಣದ ಡ್ಯಾನ್ಸ್ ಕಥೆಯುಳ್ಳ ಸಿನಿಮಾದಲ್ಲಿ ನಟಿಸಲಿದ್ದಾರೆ. ಹೀಗಾಗಿ ಡ್ಯಾನ್ಸ್ ಗಾಗಿ ತಮ್ಮ ತೂಕವನ್ನು ಇಳಿಸಿಕೊಳ್ಳಲು ನಿರ್ಧರಿಸಿದ್ದಾರೆ. ಸಿನಿಮಾ ಡ್ಯಾನ್ಸ್ ಆಧರಿತ ಕಥಾ ಹಂದರವನ್ನು ಹೊಂದಿದೆ. ಸಿನಿಮಾದಲ್ಲಿ ಸಲ್ಮಾನ್‍ಗೆ ಜೊತೆಯಾಗಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕಾಣಿಸಿಕೊಳ್ಳಲಿದ್ದಾರೆ.

https://www.instagram.com/p/BOVRPn_DLd7/?taken-by=beingsalmankhan&hl=en

ಸಿನಿಮಾದಲ್ಲಿ ನಾನು 9 ವರ್ಷದ ಮಗಳ ತಂದೆಯಾಗಿ ನಟಿಸಲಿದ್ದೇನೆ. ತಾಯಿಯನ್ನು ಕಳೆದುಕೊಂಡಿರುವ ಮಗುವನ್ನ ಬೆಳೆಸುವ ಜವಬ್ದಾರಿ ನನ್ನ ಮೇಲಿರುತ್ತದೆ. ಮಗುವಿನ ತಾಯಿ ಸಾಯುವ ಮುನ್ನ ನಾನು ಆಕೆಗೆ ಮಗಳ ಎಲ್ಲ ಆಸೆಗಳನ್ನು ಈಡೇರಿಸುತ್ತೇನೆ ಎಂಬ ಮಾತನ್ನು ಸಹ ನೀಡಿರುತ್ತೇನೆ. ಒಮ್ಮೆ ಡ್ಯಾನ್ಸ್ ಕಾಂಪಿಟೇಷನ್‍ಗಾಗಿ ತಂದೆಯ ಹೆಸರನ್ನು ಮಗಳು ಎಂಟ್ರಿ ಮಾಡಿರುತ್ತಾಳೆ. ಮಗಳ ಆಸೆಯಂತೆ ಡ್ಯಾನ್ಸ್ ಕಲಿಯಲು ಹೋಗುವ ತಂದೆಗೆ ಜಾಕ್ವೆಲಿನ್ ಫರ್ನಾಂಡೀಸ್ ಡ್ಯಾನ್ಸ್ ಟೀಚರ್ ಆಗಿ ಪರಿಚಯವಾಗ್ತಾಳೆ ಎಂದು ಸಲ್ಮಾನ್ ತಮ್ಮ ಮುಂದಿನ ಸಿನಿಮಾದ ಕಥಾ ಹಂದರವನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.

https://www.instagram.com/p/BHwN14XDiVO/?taken-by=beingsalmankhan&hl=en

ನನ್ನ ಸಿನಿಮಾ ಜೀವನದಲ್ಲಿ ಡ್ಯಾನ್ಸ್ ಫಿಲ್ಮ್ ವೊಂದು ಬಾಕಿಯಿತ್ತು, ಅದನ್ನು ಸಹ ಮಾಡ್ತಾಯಿದ್ದೇನೆ ಎಂದು ಸಲ್ಮಾನ್ ತಿಳಿಸಿದ್ರು. ಈ ಮೊದಲು ಕಿಕ್ ಸಿನಿಮಾದಲ್ಲಿ ಜಾಕ್ವೆಲಿನ್ ಮತ್ತು ಸಲ್ಮಾನ್ ಜೊತೆಯಾಗಿ ನಟಿಸಿದ್ದರು.

https://www.instagram.com/p/BJ2jHJvjUsi/?taken-by=beingsalmankhan&hl=en

https://www.instagram.com/p/BFyx6hVH1nx/?taken-by=beingsalmankhan&hl=en

https://www.instagram.com/p/BE2monnn1jv/?taken-by=beingsalmankhan&hl=en

https://www.instagram.com/p/BUPqS1ogVI3/?taken-by=1.aamirkhan&hl=en

https://www.instagram.com/p/BEFxn8en1ln/?taken-by=beingsalmankhan&hl=en

https://www.instagram.com/p/BU_lkaygx7w/?taken-by=1.aamirkhan&hl=en

Share This Article
Leave a Comment

Leave a Reply

Your email address will not be published. Required fields are marked *