ಕನ್ನಡದ ನಟಿ ರುಕ್ಮಿಣಿ ವಸಂತ್ (Rukmini Vasanth) ಕೆರಿಯರ್ ಗ್ರಾಫ್ ಏರುತ್ತಿದೆ. ಕಾಂತಾರ 1 ರಲ್ಲಿ ರುಕ್ಮಿಣಿ ನಟಿಸಿರುವ ಕುರಿತು ಈಗಾಗ್ಲೇ ಚಿತ್ರತಂಡ ಘೋಷಿಸಿದೆ. `ಸಪ್ತಸಾಗರದಾಚೆ ಎಲ್ಲೋ’ ಚಿತ್ರದ ಬಳಿಕ ರುಕ್ಮಿಣಿ ವಸಂತ್ ಬಹುಬೇಡಿಕೆಯ ಸ್ಯಾಂಡಲ್‌ವುಡ್ ನಟಿಯಾಗಿ ಗುರುತಿಸಿಕೊಂಡವರು. ತಮಿಳು, ತೆಲುಗು ಉದ್ಯಮದಲ್ಲೂ ಅವಕಾಶ ಪಡೆದುಕೊಂಡವರು. ಪ್ರಶಾಂತ್ ನೀಲ್ ಹಾಗೂ ಜೂ.ಎನ್‌ಟಿಆರ್ ಚಿತ್ರಕ್ಕೂ ಇವರೇ ನಾಯಕಿ ಎನ್ನಲಾಗುತ್ತಿದೆ. ಇದಿ ಇದೀಗ ಈ ನಟಿಯ ಕುರಿತಾಗಿ ಹೊಸ ಸುದ್ದಿಯೊಂದು ವೈರಲ್ ಆಗುತ್ತಿದೆ. ಅದುವೇ ಟಾಕ್ಸಿಕ್ ಚಿತ್ರದಲ್ಲೂ ರುಕ್ಮಿಣಿ ವಸಂತ್ ನಟಿಸಿದ್ದಾರೆ ಅನ್ನೋದೇ ಆ ವೈರಲ್ ಸುದ್ದಿ.
ಯಶ್ (Yash) ನಿರ್ಮಿಸಿ ನಟಿಸುತ್ತಿರುವ ಟಾಕ್ಸಿಕ್ (Toxic) ಚಿತ್ರದ ಶೂಟಿಂಗ್ ಬೆಂಗಳೂರು, ಮುಂಬೈನಲ್ಲಿ ಜೋರಾಗಿ ನಡೆಯುತ್ತಿದೆ. ಈ ಚಿತ್ರದಲ್ಲಿ ಹಲವು ಹೆಸರಾಂತ ನಟಿಯರಿರೋದು ಕನ್ಫರ್ಮ್ ಆಗಿದೆ. ನಯನ್‌ತಾರಾ, ಕಿಯಾರಾ ಅಡ್ವಾನಿ, ತಾರಾ ಸುತಾರಿಯಾ, ಹ್ಯುಮಾ ಖುಮೇಶಿ ನಟಿಸುತ್ತಿರುವ ಸುದ್ದಿ ರಿವೀಲ್ ಆಗಿತ್ತು. ಇದೇ ಚಿತ್ರದಲ್ಲಿ ರುಕ್ಮಿಣಿ ವಸಂತ್ ಕೂಡ ನಟಿಸಿದ್ದು, ಈಗಾಗ್ಲೇ ಕೆಲ ದಿನಗಳ ಕಾಲ ತಮ್ಮ ಶೆಡ್ಯೂಲ್‌ನ್ನೂ ಮುಗಿಸಿದ್ದಾರೆ ಎನ್ನಲಾಗುತ್ತಿದೆ. ಅಲ್ಲಿಗೆ ಟಾಕ್ಸಿಕ್‌ನಲ್ಲಿ ಕನ್ನಡದ ನಟಿಗೆ ಅವಕಾಶವೇ ಇಲ್ವಾ ಅನ್ನೋ ಕೊರತೆಯನ್ನ ರುಕ್ಮಿಣಿ ವಸಂತ್ ತುಂಬಿರುವ ಸಾಧ್ಯತೆ ಇದೆ. ಇದನ್ನೂ ಓದಿ: ದರ್ಶನ್ ನೋಡಲು ಜೈಲಿಗೆ ಆಗಮಿಸಿದ ಪತ್ನಿ ವಿಜಯಲಕ್ಷ್ಮಿ
`ಟಾಕ್ಸಿಕ್’ ಚಿತ್ರ ಪ್ಯಾನ್‌ವರ್ಲ್ಡ್‌ನ ತೆರೆ ಕಾಣಲು ಸಿದ್ಧವಿದೆ. 2026 ಮಾರ್ಚ್ 19ಕ್ಕೆ ರಿಲೀಸ್ ದಿನಾಂಕ ಘೋಷಣೆಯಾಗಿದೆ. ಚಿತ್ರೀಕರಣ ಇನ್ನೂ ಮುಗಿದಿಲ್ಲ. ಇದೀಗ ರುಕ್ಮಿಣಿ ವಸಂತ್ ಇದೇ ಚಿತ್ರದಲ್ಲಿ ನಟಿಸಿರುವ ಸುದ್ದಿ ತೂರಿಬಂದಿದೆ. ಇದುವರೆಗೂ ಚಿತ್ರದ ತಾರಾಗಣದ ಕುರಿತಾಗಿ ಚಿತ್ರತಂಡ ಆಫಿಷಿಯಲ್ ಕನ್ಫರ್ಮೇಷನ್ ಯಾವುದನ್ನೂ ಅಧಿಕೃತ ನೀಡಿಲ್ಲ. ಇದೀಗ ರುಕ್ಮಿಣಿ ವಸಂತ್ ನಟಿಸಿರುವ ಸುದ್ದಿ ವದಂತಿಯಾಗಿದ್ದು ಮುಂದಿನ ದಿನಗಳಲ್ಲಿ ಚಿತ್ರತಂಡವೇ ಕನ್ಫರ್ಮ್ ಮಾಡಬೇಕಿದೆ.