ನವದೆಹಲಿ: ಹಳೆಯ 100 ರೂ. ನೋಟು ನಿಷೇಧಗೊಳ್ಳಲಿದೆ ಎಂಬ ಸುದ್ದಿಯನ್ನು ದಯವಿಟ್ಟು ಶೇರ್ ಮಾಡಬೇಡಿ.
Advertisement
ದೇಶದಲ್ಲಿ ಈಗ ಚಲಾವಣೆಯಾಗುತ್ತಿರುವ ಹಳೆಯ 100, 10, ಮತ್ತು 5 ರೂಪಾಯಿ ನೋಟುಗಳನ್ನು ಅಮಾನ್ಯಗೊಳಿಸುವ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಚಿಂತನೆ ನಡೆಸಿದೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಈ ಸುದ್ದಿ ನಕಲಿ ಆಗಿದ್ದು ಇಲ್ಲಿಯವರೆಗೆ ಆರ್‌ಬಿಐ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಇದನ್ನೂ ಓದಿ: ಹಳೆಯ 100 ರೂ. ಹಿಂಪಡೆಯುವುದಿಲ್ಲ – ಆರ್‌ಬಿಐ ಸ್ಪಷ್ಟನೆ
Advertisement
Advertisement
100 ರೂಪಾಯಿ ಹಳೆಯನೋಟುಗಳ ಚಲಾವಣೆ ಸ್ಥಗಿತಗೊಳಿಸಿ ಹೊಸ ಸೀರಿಸ್‍ನ ನೋಟುಗಳನ್ನು ಚಲಾವಣೆಗೆ ತರಲಾಗುವುದು. ಹಾಗಾಗಿ ಹಳೆಯ ನೋಟುಗಳ ಮುದ್ರಣ ಸ್ಥಗಿತಗೊಳಿಸಿ ಹಳೆಯ ನೋಟುಗಳನ್ನು ಹಂತಹಂತವಾಗಿ ಬ್ಯಾಂಕ್‍ಗಳ ಮೂಲಕ ಹಿಂಪಡೆಯಲಾಗುತ್ತಿದೆ ಎಂದು ಪೋಸ್ಟ್‌ನಲ್ಲಿದೆ.
Advertisement
ಈ ಬಗ್ಗೆ ಈ ಹಿಂದೆಯೇ ಪಿಐಬಿ ಫ್ಯಾಕ್ಟ್ ಚೆಕ್ ಇದು ಸುಳ್ಳು ಸುದ್ದಿ. ಹಳೆಯ 100 ನೋಟು ಅಮಾನ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಕರೆನ್ಸಿ ನೋಟುಗಳ ಮೇಲೆ ನೇತಾಜಿ ಫೋಟೋ ಮುದ್ರಿಸಿ: ಹರೇನ್ ಬಿಸ್ವಾಸ್ ಮನವಿ
एक खबर में दावा किया जा रहा है कि आरबीआई द्वारा दी गई जानकारी के अनुसार मार्च 2021 के बाद 5, 10 और 100 रुपए के पुराने नोट नहीं चलेंगे।#PIBFactCheck: यह दावा #फ़र्ज़ी है। @RBI ने ऐसी कोई घोषणा नहीं की है। pic.twitter.com/WiuRd2q9V3
— PIB Fact Check (@PIBFactCheck) January 24, 2021
2018ರಲ್ಲಿ ಹೊಸ 100 ರೂಪಾಯಿ ಮುಖಬೆಲೆಯ ನೋಟುಗಳು ಹೊಸ ಬಣ್ಣದಿಂದ ಚಲಾವಣೆಗೆ ಬಂದಿದೆ. ಈ ನೋಟುಗಳ ಜೊತೆಗೆ ಹಳೆಯ ಮುಖ ಬೆಲೆಯ ನೋಟುಗಳು ಮುಂದುವರಿಯುತ್ತದೆ ಎಂದು ಆರ್‌ಬಿಐ ಈ ಹಿಂದೆ ತಿಳಿಸಿತ್ತು.