ಮುಂಬೈ: ಬಾಲಿವುಡ್ನ ಕ್ಯೂಟ್ ಆ್ಯಂಡ್ ಹಾಟ್ ಜೋಡಿಗಳೆಂದು ಕರೆಸಿಕೊಳ್ಳುವ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಇದೂವರೆಗೂ ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿಲ್ಲ. ಆದರೆ ತಮ್ಮಿಬ್ಬರ ಮಧ್ಯೆ ಪ್ರೀತಿ ಇದೆ ಎಂಬುದರ ಸುಳಿವನ್ನು ಆಗಾಗ ನೀಡುತ್ತಿರುತ್ತಾರೆ.
ಇತ್ತೀಚೆಗೆ ನೇಹಾ ದೂಪಿಯಾ ನಿರೂಪಣೆಯ ‘ವೋಗ್ ಬಿಎಫ್ಎಫ್’ ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆ ಭಾಗಿಯಾಗಿದ್ದರು. ಈ ವೇಳೆ ನೇಹಾ ನೇರವಾಗಿ ರಣ್ವೀರ್ ಸಿಂಗ್ ಕಿಸ್ಸಿಂಗ್ ಸಾಮಥ್ರ್ಯದ ಬಗ್ಗೆ ನಿಮ್ಮ ಅಭಿಪ್ರಾಯವೇನು ಅಂತಾ ದೀಪಿಕಾಗೆ ಕೇಳಿದ್ದಾರೆ. ಕೂಡಲೇ ರಣ್ವೀರ್ ಸಿಂಗ್ ಕಿಸ್ ಮಾಡುವ ವಿಚಾರದಲ್ಲಿ ಬೆಸ್ಟ್ ಕಿಸ್ಸರ್ ಅಂತಾ ದೀಪಿಕಾ ನಗುತ್ತಾ ಹೇಳಿದ್ದಾರೆ. ಈ ವಿಡಿಯೋ ಫೇಸ್ಬುಕ್, ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
Advertisement
Advertisement
‘ಗೋಲಿಯೊಂ ಕೀ ರಾಸಲೀಲಾ: ರಾಮ್ಲೀಲಾ’ ಸಿನಿಮಾದಲ್ಲಿ ರಣ್ವೀರ್ ಸಿಂಗ್ ಮತ್ತು ದೀಪಿಕಾ ಜೊತೆಯಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ದೀಪಿಕಾಗೆ ಹಲವು ಬಾರಿ ರಣ್ವೀರ್ ಸಿಂಗ್ ಲಿಪ್ ಟು ಲಿಪ್ ಕಿಸ್ ಮಾಡಿದ್ದಾರೆ. ರಾಮ್ಲೀಲಾ ಬಳಿಕ ಮತ್ತೆ ಇಬ್ಬರು ‘ಬಾಜೀರಾವ್ ಮಸ್ತಾನಿ’ ಚಿತ್ರದಲ್ಲಿ ಒಂದಾಗಿದ್ರು. ಆದ್ರೆ ಬಾಜೀರಾವ್ ಮಸ್ತಾನಿ ಐತಿಹಾಸಿ ಕಥೆಯನ್ನು ಹೊಂದಿದ್ದರಿಂದ ರೊಮ್ಯಾಂಟಿಕ್ ಮತ್ತು ಕಿಸ್ಸಿಂಗ್ ದೃಶ್ಯಗಳು ಇರಲಿಲ್ಲ.
Advertisement
ರಣ್ವೀರ್ ಸಿಂಗ್ ‘ಬೇಫಿಕ್ರೆ’ ಸಿನಿಮಾದಲ್ಲಿ ಚುಂಬನಗಳ ಸುರಿಮಳೆಯನ್ನೆ ಸುರಿಸಿದ್ದರು. ಈ ಹಿಂದೆಯೂ ರಣ್ವೀರ್ ತಾವು ನಟಿಸಿರುವ ಹಲವು ಚಿತ್ರಗಳಲ್ಲಿಯೂ ಕಿಸ್ಸಿಂಗ್ ಸೀನ್ ಮಾಡಿದ್ದಾರೆ. ಬೇಫಿಕ್ರೆ ಸಿನಿಮಾದಲ್ಲಿ ನಟಿ ವಾಣಿ ಕಪೂರ್ದೊಂದಿಗೆ ಅತಿ ಹೆಚ್ಚು ಕಿಸ್ ನೀಡಿದ್ದಾರೆ.
Advertisement
https://www.instagram.com/p/BeLxsuTAU17/?taken-by=deepika.padukone.fanpage