ಬಾಲಿವುಡ್ ನಟನೊಂದಿಗೆ ಮದುವೆಗೆ ರೆಡಿಯಾದ್ರಾ ಶ್ರೀಲೀಲಾ?- ಅರಿಶಿಣ ಶಾಸ್ತ್ರದ ಫೋಟೋ ವೈರಲ್

Public TV
1 Min Read
sreeleela 4

ನ್ನಡದ ‘ಕಿಸ್’ ನಟಿ ಶ್ರೀಲೀಲಾ (Sreeleela) ಈಗೀಗ ಸಿನಿಮಾಗಿಂತ ವೈಯಕ್ತಿಕ ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಕಾರ್ತಿಕ್ ಆರ್ಯನ್ (Karthik Aryan) ಜೊತೆ ಅವರು ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿಯ ನಡುವೆ ಇದೀಗ ಅರಿಶಿಣ ಶಾಸ್ತ್ರದ ಫೋಟೋ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕಮಲ್ ಹಾಸನ್ ಕನ್ನಡ ಕಾಂಟ್ರವರ್ಸಿ ಬಗ್ಗೆ ಕೇಳ್ತಿದ್ದಂತೆ ಕೈಮುಗಿದ ಶಿವಣ್ಣ!

sreeleela 1 3

ನಟಿಯ ಮನೆಯಲ್ಲಿ ಅರಿಶಿಣ ಶಾಸ್ತ್ರ ನಡೆದಿದೆ. ಶ್ರೀಲೀಲಾ ಕೆನ್ನೆಗೆ ಅರಿಶಿಣ, ಹಣೆಗೆ ಕುಂಕುಮ ಇಡಲಾಗಿದೆ. ಇಬ್ಬರೂ ಹಿರಿಯ ಮಹಿಳೆಯರು ನಟಿಗೆ ಅರಿಶಿಣ ಹಚ್ಚುತ್ತಿದ್ದಾರೆ. ಈ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿ, ‘ಕಮಿಂಗ್ ಸೂನ್’ ಎಂದು ಬರೆದುಕೊಂಡಿದ್ದಾರೆ. ನಟಿಯು ಖುಷಿಯಿಂದ ಇರೋದು ನೋಡಿ ಕಾರ್ತಿಕ್ ಜೊತೆ ಮದುವೆ ಸೆಟ್ ಆಯ್ತಾ ಎಂದೆಲ್ಲಾ ಫ್ಯಾನ್ಸ್ ಪ್ರಶ್ನಿಸುತ್ತಿದ್ದಾರೆ. ಇದು ಸಿನಿಮಾಕ್ಕೆ ಸಂಬಂಧಿಸಿದ ಫೋಟೋನಾ? ಅಥವಾ ನಿಜಕ್ಕೂ ಗುಡ್ ನ್ಯೂಸ್ ಇದ್ಯಾ? ಎಂಬುದರ ಬಗ್ಗೆ ಅವರೇ ಸ್ಪಷ್ಟನೆ ನೀಡುವವರೆಗೂ ಕಾಯಬೇಕಿದೆ. ಇದನ್ನೂ ಓದಿ:ಮೋಹನ್ ಬಾಬು ನಿರ್ಮಾಣದ ‘ಕಣ್ಣಪ್ಪ’ ಚಿತ್ರದಲ್ಲಿ ನಟಿಸದಿರಲು ಕಾರಣ ಬಿಚ್ಚಿಟ್ಟ ಶಿವಣ್ಣ

sreeleela 1 1ಇತ್ತೀಚೆಗೆ ಅವಾರ್ಡ್ ಫಂಕ್ಷನ್‌ವೊಂದರಲ್ಲಿ ಕಾರ್ತಿಕ್ ಆರ್ಯನ್ ತಾಯಿಗೆ ಯಾವ ಥರದ ಸೊಸೆ ಬೇಕು ಎಂದು ಕರಣ್ ಜೋಹರ್ ಕೇಳಿದರು. ಅದಕ್ಕೆ ನಟನ ತಾಯಿ, ಡಾಕ್ಟರ್ ಆಗಿರುವ ಸೊಸೆ ಬೇಕು ಎಂದಿದ್ದರು. ಎಲ್ಲರಿಗೂ ಗೊತ್ತಿರುವಂತೆ ಶ್ರೀಲೀಲಾ ಅವರು ಎಂಬಿಬಿಎಸ್ ಓದಿಕೊಂಡಿದ್ದಾರೆ. ಅಲ್ಲಿ ಕಾರ್ತಿಕ್ ತಾಯಿ ಡಾಕ್ಟರ್ ಸೊಸೆ ಬೇಕು ಎಂದ ಕೂಡಲೇ ಎಲ್ಲರ ಕಣ್ಣು ಶ್ರೀಲೀಲಾ ಮೇಲೆ ಬಿದ್ದಿತ್ತು.

sreeleela karthik aryanಹೀಗಾಗಿ ಇದೀಗ ನಟಿಯ ಅರಿಶಿಣ ಶಾಸ್ತ್ರದ ಫೋಟೋ ನೋಡಿ ಕಾರ್ತಿಕ್ ಜೊತೆಗಿನ ಡೇಟಿಂಗ್ ಸುದ್ದಿಗೆ ಪುಷ್ಠಿ ಸಿಕ್ಕಂತಾಗಿದೆ. ಸದ್ದಿಲ್ಲದೇ ಹಸೆಮಣೆ ಏರಲು ರೆಡಿಯಾದ್ರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

sreeleela 2

ಅಂದಹಾಗೆ, ಅನುರಾಗ್ ಬಸು ನಿರ್ದೇಶನದ ‘ಆಶಿಕಿ 3’ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್‌ಗೆ ಶ್ರೀಲೀಲಾ ನಾಯಕಿಯಾಗಿದ್ದಾರೆ. 2025ರ ದೀಪಾವಳಿಯಂದು ಈ ಸಿನಿಮಾ ರಿಲೀಸ್ ಆಗಲಿದೆ.

Share This Article