ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈಗಷ್ಟೇ ಘೋಷಣೆ ಆಗಿರುವ ಟೈಸನ್ ಸಿನಿಮಾದಲ್ಲಿ ಮಲಯಾಳಂ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಐಎಎಸ್ ಅಧಿಕಾರಿಯಾಗಿ ನಟಿಸಲಿದ್ದಾರಾ? ಹಾಗೆಂದು ಸೂಚನೆ ನೀಡುತ್ತದೆ ಬಿಡುಗಡೆ ಆಗಿರುವ ಪೋಸ್ಟರ್. ಈ ಪೋಸ್ಟರ್ ನಲ್ಲಿ ವ್ಯಕ್ತಿಯೊಬ್ಬ ‘ರಂಜನ್ ಘೋಷ್ ಐಎಎಸ್’ ಎಂದು ಬರೆಯುತ್ತಿರುವ ಬೋರ್ಡ್ ಕಾಣುತ್ತದೆ. ಹಾಗಾಗಿ ಇದು ಐಎಎಸ್ ಅಧಿಕಾರಿಯ ಬದುಕಿನ ಕಥೆ ಎನ್ನುವ ಪ್ರಶ್ನೆ ಮೂಡಿಸುತ್ತದೆ.
Advertisement
ಇದೇ ಬೋರ್ಡ್ ನಲ್ಲೇ ಅವರು ಮತ್ತೊಂದು ಇಂಟ್ ಕೊಟ್ಟಿದ್ದಾರೆ. ಇದೇ ವರ್ಷವೇ ಈ ಸಿನಿಮಾ ಶೂಟಿಂಗ್ ಶುರು ಮಾಡಿಕೊಂಡು 2023ರಲ್ಲಿ ತೆರೆ ಕಾಣಬಹುದು. ಹಾಗಾಗಿ ರಂಜನ್ ಘೋಷ್ ಹೆಸರಿನ ಮುಂದೆ 2022-23 ಎಂದು ಇಸವಿಯನ್ನೂ ಬರೆಯಲಾಗಿದೆ. ಬಹುಬೇಗ ಸಿನಿಮಾ ಶುರು ಮಾಡಿ, ಬೇಗ ರಿಲೀಸ್ ಮಾಡುವ ಪ್ಲ್ಯಾನ್ ಚಿತ್ರತಂಡದ್ದು. ಮಲಯಾಳಂ ಸಿನಿಮಾ ಮೇಕರ್ಸ್ ತಡಮಾಡಿ ಸಿನಿಮಾ ಮಾಡುವುದು ಕಡಿಮೆ. ಹಾಗಾಗಿ ಈ ಸಿನಿಮಾ ಆದಷ್ಟು ಬೇಗ ತೆರೆಗೆ ಬರಬಹುದು. ಇದನ್ನೂ ಓದಿ: ತಂದೆಯ ಬ್ಯಾನರ್ ನಲ್ಲೇ ಮತ್ತೆ ನಟಿಸಲಿದ್ದಾರಾ ನಿಖಿಲ್ ಕುಮಾರಸ್ವಾಮಿ?: ಯದುವೀರ ಡ್ರಾಪ್?
Advertisement
Advertisement
ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2 ಸಿನಿಮಾ ಭಾರತೀಯ ಸಿನಿಮಾ ರಂಗವನ್ನೇ ಒಗ್ಗೂಡಿಸಿತ್ತು. ಭಾರತೀಯ ಸಿನಿಮಾ ರಂಗದ ವಿವಿಧ ಭಾಷೆಯ ಕಲಾವಿದರು ಕೆಜಿಎಫ್ 2 ಚಿತ್ರಕ್ಕಾಗಿ ಒಂದಾಗಿ, ತಮ್ಮ ಭಾಷೆಯಲ್ಲೇ ಈ ಚಿತ್ರವನ್ನು ನೋಡಿ ಕೊಂಡಾಡಿದ್ದರು. ಹಾಗಾಗಿ ಹೊಂಬಾಳೆ ಫಿಲ್ಸ್ಮ್ ಜೊತೆಗೆ ಭಾರತೀಯ ಸಿನಿಮಾ ರಂಗದ ಬಹುತೇಕ ಕಲಾವಿದರ ಒಡನಾಟ ಬೆಳೆದಿತ್ತು. ಇಂತಿಪ್ಪ ಈ ಬೆಳವಣಿಗೆಯ ಕಾರಣದಿಂದಾಗಿಯೇ ಮಲಯಾಳಂ ಹೆಸರಾಂತ ನಟ ಪೃಥ್ವಿರಾಜ್ ಸುಕುಮಾರನ್ ಕನ್ನಡಕ್ಕೆ ಬಂದಿದ್ದಾರೆ.