Exclusive- ನಟ ನರೇಶ್ ಜೊತೆ ಪವಿತ್ರಾ ಲೋಕೇಶ್ ಮದುವೆ ಆಗಿದ್ದಾರಾ? : ಇವತ್ತು ಇಲ್ಲ, ನಾಳೆ ಗೊತ್ತಿಲ್ಲ ಎಂದ ನಟಿ

Public TV
2 Min Read
FotoJet 12

ತೆಲುಗು ನಟ ನರೇಶ್ ಅವರ ಜೊತೆ ಪವಿತ್ರಾ ಲೋಕೇಶ್ ಮದುವೆಯಾಗಿದ್ದಾರಾ? ಈ ಕುರಿತು ಕಳೆದೊಂದು ವಾರದಿಂದ ದೊಡ್ಡ ಚರ್ಚೆ ಆಗುತ್ತಿದೆ. ತೆಲುಗು ಮಾಧ್ಯಮಗಳಂತೂ ಎರಡು ವರ್ಷಗಳ ಹಿಂದೆಯೇ ಅವರು ಮದುವೆ ಆಗಿದ್ದಾರೆ ಎಂದು ಸುದ್ದಿ ಮಾಡಿದ್ದವು. ಈ ಕುರಿತು ನರೇಶ್ ಅವರ ಪತ್ನಿ ರಮ್ಯಾ ಕೂಡ ಹೇಳಿಕೆ ನೀಡಿ, ನರೇಶ್ ಮತ್ತು ಪವಿತ್ರಾ ಲೋಕೇಶ್ ಒಟ್ಟಿಗೆ ಜೀವನ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಪವಿತ್ರಾ ಲೋಕೇಶ್ ಜೊತೆಗಿದ್ದ ಸುಚೇಂದ್ರ ಪ್ರಸಾದ್ ಕೂಡ ರಮ್ಯಾ ಅವರಿಗೆ ಅನ್ಯಾಯ ಆಗಬಾರದು ಎಂದಿದ್ದರು. ಈ ಕುರಿತು ಪವಿತ್ರಾ ಲೋಕೇಶ್ ಪಬ್ಲಿಕ್ ಟಿವಿಗೆ ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿದ್ದಾರೆ.

FotoJet 11

‘ನಾನು ಮತ್ತು ನರೇಶ್ ಅವರು ಪರಿಚಯವಾಗಿದ್ದು 4 ವರ್ಷಗಳ ಹಿಂದೆ. ಅವರು ನಾನು ಹ್ಯಾಪಿ ವೆಡ್ಡಿಂಗ್ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದೆವು. ಆಗ ನರೇಶ್ ಯಾರು ಅಂತಾನೇ ಗೊತ್ತಿರಲಿಲ್ಲ. ಎರಡನೇ ಸಿನಿಮಾ ಮಾಡುವಾಗ ಪರಿಚಯವಾದರು. ತೀರಾ ಸಲುಗೆ ಬೆಳೆಯಿತು. ಅವರು ತಮ್ಮ ವೈಯಕ್ತಿಕ ವಿಚಾರಗಳನ್ನು ನನ್ನ ಜೊತೆ ಹಂಚಿಕೊಳ್ಳುತ್ತಿದ್ದರು. ನಾನೂ ಹಂಚಿಕೊಳ್ಳುತ್ತಿದೆ. ಅಷ್ಟರ ಮಟ್ಟಿಗೆ ನಮ್ಮಲ್ಲಿ ಆತ್ಮಿಯತೆ ಬೆಳೆಯಿತು. ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ ಅಂದರೆ, ಒಟ್ಟಿಗೆ ಓಡಾಡುವುದು ಸಹಜ. ಅದರ ಹೊರತಾಗಿ ಏನೂ ಇಲ್ಲ” ಎಂದಿದ್ದಾರೆ ಪವಿತ್ರಾ ಲೋಕೇಶ್. ಇದನ್ನೂ ಓದಿ : ಎಪ್ರಿಲ್ 2ನೇ ವಾರದಲ್ಲಿ ನಟಿ ಕಾವ್ಯ ಶಾ ಮದ್ವೆ : ಮಾಧ್ಯಮ ಲೋಕದ ಹುಡುಗನ ಜತೆ ಸಪ್ತಪದಿ

FotoJet 7

ನಾನು ನೂರಾರು ಸಿನಿಮಾಗಳನ್ನು ಮಾಡಿರುವೆ. ಹಲವು ಕಲಾವಿದರ ಜೊತೆ ನಟಿಸಿರುವೆ. ಹಾಗಂತ ಎಲ್ಲರ ಜೊತೆಯೂ ನನಗೆ ಸಂಬಂಧವಿದೆ ಅಂದರೆ ಹೇಗೆ? ರಮ್ಯಾ ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ. ನಾನು ಮತ್ತು ನರೇಶ್ ಏನು ಅಂತ ನಮ್ಮಿಬ್ಬರಿಗೆ ಗೊತ್ತು. ಅದನ್ನು ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ ಪವಿತ್ರಾ ಲೋಕೇಶ್. ಸದ್ಯ ಆತ್ಮೀಯರಾಗಿದ್ದೇವೆ. ನಾಳೆಯ ಬಗ್ಗೆ ನಾನು ಹೇಗೆ ಮಾತನಾಡೋಕೆ ಆಗುತ್ತೆ? ಎಂದು ಹೇಳುವ ಮೂಲಕ ಮತ್ತೆ ಕುತೂಹಲ ಮೂಡಿಸಿದ್ದಾರೆ.

ನರೇಶ್ ಅವರ ಬ್ಯಾನರ್ ನಲ್ಲೇ ಪವಿತ್ರಾ ಲೋಕೇಶ್ ಅವರು ಶಾರ್ಟ್ ಫಿಲ್ಮ್ ವೊಂದನ್ನು ನಿರ್ದೇಶನ ಮಾಡಿದ್ದಾರಂತೆ. ಹೀಗೆ ಒಟ್ಟಿಗೆ ಕೆಲಸ ಮಾಡುವಾಗ ಆತ್ಮೀಯತೆ ಬೆಳೆಯದೇ ಇರುತ್ತಾ ಎನ್ನುವುದು ಪವಿತ್ರಾ ಲೋಕೇಶ್ ಪ್ರಶ್ನೆ. ನರೇಶ್ ಮತ್ತು ತಮ್ಮ ಮಧ್ಯೆ ಕೇವಲ ಆತ್ಮೀಯತೆ ಎನ್ನುವುದಕ್ಕಿಂತ ಒಂದು ಹೆಜ್ಜೆ ಮುಂದಿನ ಆಪ್ತತೆಯೂ ಇದೆ ಎಂದೂ ಪವಿತ್ರಾ ಲೋಕೇಶ್ ಹೇಳಿದ್ದಾರೆ. ನರೇಶ್ ಮತ್ತು ತಮ್ಮ ಮದುವೆ ವಿಚಾರ ಸದ್ಯಕ್ಕೆ ಇಷ್ಟೆ. ಮುಂದೆ ಏನು ಅಂತ ನನಗಂತೂ ಗೊತ್ತಿಲ್ಲ ಎಂದಿದ್ದಾರೆ ಪವಿತ್ರಾ.

Live Tv

Share This Article
Leave a Comment

Leave a Reply

Your email address will not be published. Required fields are marked *