ವೈಯಕ್ತಿಕ ಜೀವನಕ್ಕೆ ಲೈಂಗಿಕತೆ ಎಂಬುದು ತುಂಬಾನೇ ಮುಖ್ಯ. ಇದು ಸಂಬಂಧವನ್ನು ಗಟ್ಟಿಗೊಳಿಸುವ ಒಂದು ಭಾಗವೂ ಆಗಿದೆ. ಜೊತೆಗೆ ಆರೋಗ್ಯ (Health) ಸ್ವಾಸ್ಥ್ಯವನ್ನೂ ಕಾಪಾಡುತ್ತದೆ. ಆದ್ರೆ ಜೀವನಕ್ಕೆ ಸೆಕ್ಸ್ ಎಷ್ಟು ಮುಖ್ಯ ಎಂದು ಕೇಳಿದಾಗ ಒಬ್ಬೊಬ್ಬರು ಒಂದೊಂದು ಉತ್ತರ ನೀಡುತ್ತಾರೆ. ಹಾಗೆಯೇ ಹದಿಹರೆಯದವರು, ಯುವಕರು ತಮ್ಮ ದೇಹವು ಪ್ರೌಢಾವಸ್ಥೆಗೆ ಬರುವಾಗ ಹಾರ್ಮೋನ್‌ಗಳ ಪ್ರಭಾವದಿಂದ ಸಾಕಷ್ಟು ದೈಹಿಕ ಮತ್ತು ಭಾವನಾತ್ಮಕ ಬದಲಾವಣೆಗೆ ಒಳಗಾಗುತ್ತದೆ. ಇದರಿಂದ ನಿಮ್ಮ ಸಂವಹನ ಕ್ರಿಯೆಯೂ ಬದಲಾಗಬಹುದು. ಆದ್ರೆ ಇತ್ತೀಚಿನ ದಿನಗಳಲ್ಲಿ ಈ ಲೈಂಗಿಕ ಆಸಕ್ತಿ ಮದುವೆಯಿಂದ ಕೆಲವರನ್ನ ದೂರ ಉಳಿಯುವಂತೆ ಮಾಡುತ್ತಿದೆ. ಆನ್‌ಲೈನ್ ನಂತಹ ವೇದಿಕೆಗಳನ್ನ ಬಳಸಿಕೊಂಡು ಅದನ್ನೇ ಉದ್ಯಮವಾಗಿ ಪರಿವರ್ತಿಸಿಕೊಳ್ಳಲು ಮುಂದಾಗುತ್ತಿದ್ದಾರೆ.
ಹೌದು.. ಲೈಂಗಿಕತೆಯೆಡೆಗೆ ಹೆಚ್ಚಿದ ಆಕ್ತಿ, ಹಣದ ಮೇಲಿನ ವ್ಯಾಮೋಹಕ್ಕೆ ಜನಪ್ರಿಯ ವ್ಯಕ್ತಿಗಳು ಹಾಗೂ ಕೆಲ ಯುವಕ ಯುವತಿಯರು ಇದಕ್ಕಾಗಿ ಓನ್ಲಿ ಫ್ಯಾನ್ಸ್‌ನಂತಹ ವೇದಿಕೆಗಳತ್ತ ಮುಖ ಮಾಡುತ್ತಿದ್ದಾರೆ. ಕೆಲವರು ಇದನ್ನೇ ಉದ್ಯೋಗವೆಂದು ಭಾವಿಸಿಕೊಂಡಿದ್ದಾರೆ. ನೇರವಾಗಿ ಹೇಳುವುದಾದ್ರೆ ವಿದೇಶಿಗರಿಗೆ ಇದೊಂದು ಪೋರ್ನ್ ಸೈಟ್ ಇದ್ದಂತೆ ಹೆಚ್ಚಿನ ಸಂಖ್ಯೆಯ ನೀಲಿ ತಾರೆಗಳು ತಮ್ಮ ಖಾಸಗಿ ಫೋಟೋ, ವಿಡಿಯೋಗಳನ್ನ ಈ ವೇದಿಕೆ ಮೂಲಕ ಚಂದಾದಾರಿಗೆ ಮಾರಾಟ ಮಾಡ್ತಿದ್ದಾರೆ. ಕಳೆದ ಕೆಲವೇ ವರ್ಷಗಳಲ್ಲಿ ʻಲಿಲ್ಲಿ ಫಿಲಿಪ್ಸ್ʼ ಎಂಬ ನೀಲಿ ತಾರೆ ಹತ್ತಾರುಕೋಟಿ ಆಸ್ತಿ ಗಳಿಕೆ ಮಾಡಿರೋದು ಈ ಓನ್ಲಿ ಫ್ಯಾನ್ಸ್ ವೇದಿಕೆಯಿಂದಲೇ ಅನ್ನೋದು ಇದಕ್ಕೆ ಉದಾಹರಣೆ. ಆದ್ರೆ ಭಾರತದಲ್ಲಿ ಹಾಗಿಲ್ಲ, ಕಟ್ಟುನಿಟ್ಟಿನ ಕಾನೂನು ಇರುವ ಕಾರಣ ಒಳ್ಳೆಯ ವಿಷಯಗಳಿಗೆ ಬಳಕೆಯಾಗ್ತಿದೆ. ಹಾಗಿದ್ರೆ ಈ ಓನ್ಲಿ ಫ್ಯಾನ್ಸ್ ವೇದಿಕೆ ಹೇಗೆ ಕೆಲಸ ಮಾಡುತ್ತೆ? ಇದರಲ್ಲಿ ತೊಡಗಿಸಿಕೊಳ್ಳುವವರನ್ನ ಉದ್ಯೋಗಿಗಳು ಅಂತ ಕರೆಯಬಹುದೇ? ಇದರಿಂದ ಬರುವ ಆದಾಯಕ್ಕೂ ತೆರಿಗೆ ಕಡ್ಡಾಯವೇ ಎಂಬೆಲ್ಲ ವಿಷಯಗಳ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…
ಓನ್ಲಿ ಫ್ಯಾನ್ಸ್ ಅಂದ್ರೆ ಏನು?
ಓನ್ಲಿ ಫ್ಯಾನ್ಸ್ (OnlyFans) ಒಂದು ಆನ್‌ಲೈನ್ ಚಂದಾದಾರಿಕೆ ಆಧಾರಿತ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಆಗಿದ್ದು, ಅಲ್ಲಿ ವಿಷಯ ರಚನೆಕಾರರು (ಕಂಟೆಂಟ್ ಕ್ರಿಯೇಟರ್ಸ್) ತಮ್ಮ ವಿಶಿಷ್ಟವಾದ ವಿಷಯವನ್ನು ಪೇವಾಲ್‌ನ (paywall) ಹಿಂದೆ ಪ್ರಕಟಿಸುತ್ತಾರೆ. ಅದನ್ನ ವೀಕ್ಷಿಸುವುದಕ್ಕಾಗಿ ಅಭಿಮಾನಿಗಳು ಮಾಸಿಕ ಶುಲ್ಕ ಪಾವತಿಸುತ್ತಾರೆ. ಇದು ವಯಸ್ಕರ ವಿಷಯ, ಫಿಟ್‌ನೆಸ್, ಸಂಗೀತ, ಹಾಸ್ಯ ಇತ್ಯಾದಿ ವಿವಿಧ ರೀತಿಯ ವಿಷಯಗಳನ್ನ ಒಳಗೊಂಡಿರುತ್ತದೆ. ಭಾರತದಲ್ಲೂ ಸೇರಿದಂತೆ ವಿಶ್ವದಾದ್ಯಂತ ಹೆಚ್ಚಿನ ಜನರು ಹಣ ಗಳಿಕೆ ಉದ್ದೇಶದಿಂದ ಈ ಪ್ಲಾಟ್‌ಫಾರ್ಮ್‌ಗೆ ಪ್ರವೇಶಿಸಿದ್ದಾರೆ.
ಭಾರತದಲ್ಲಿ ಇದು ಕಾನೂನುಬದ್ಧವೇ?
ಭಾರತದಲ್ಲಿ ಓನ್ಲಿಫ್ಯಾನ್ಸ್ ಬಳಸುವುದು ಕಾನೂನು ಬಾಹಿರವಲ್ಲ ಎನ್ನುತ್ತಾರೆ ಕೆಲ ತಜ್ಞರು. ಓನ್ಲಿ ಫ್ಯಾನ್ಸ್‌ನಲ್ಲಿ ಖಾತೆ ರಚಿಸುವುದು ಅಥವಾ ಇದರಿಂದ ಹಣ ಗಳಿಸುವುದನ್ನು ನಿಷೇಧಿಸುವ ಯಾವುದೇ ಕಾನೂನುಗಳು ಇಲ್ಲ. ಆದ್ರೆ ಇದು ಅಶ್ಲೀಲತೆ ಅಥವಾ ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಕಾನೂನುಗಳನ್ನು ಉಲ್ಲಂಘಿಸುವಂತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಕಾನೂನುಬಾಹಿರ ಚಟುವಟಿಕೆಗಳ ಕುರಿತು ವಿಷಯಗಳನ್ನ ಹಂಚಿಕೊಳ್ಳುವುದಾದ್ರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.
ಸ್ವಯಂ ಉದ್ಯೋಗಿಗಳೆಂದು ಪರಿಗಣಿಸಬಹುದೇ?
ಓನ್ಲಿ ಫ್ಯಾನ್ಸ್ ಕ್ರಿಯೇಟರ್ಸ್‌ಗಳನ್ನ ಸ್ವಯಂ ಉದ್ಯೋಗಿಗಳೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿ ಇವರೂ ಕೂಡ ಆದಾಯ ತೆರಿಗೆ (Income Tax) ವ್ಯಾಪ್ತಿಗೆ ಒಳಪಟ್ಟಿರುತ್ತಾರೆ. ತಮ್ಮ ಆದಾಯಗಳನ್ನ ವರದಿ ಮಾಡಲು ತೆರಿಗೆ ಪಾವತಿಸಬೇಕಾಗುತ್ತದೆ. ಒಂದು ವೇಳೆ ವಾರ್ಷಿಕ ಆದಾಯ ಒಂದು ಕೋಟಿ ಮೀರಿದ್ದರೆ, ಅದಕ್ಕೆ ಸೂಕ್ತ ದಾಖಲೆಗಳನ್ನು ನೀಡಬೇಕಾಗುತ್ತದೆ. ಯಾವ ಉದ್ದೇಶಕ್ಕೆ ಪೇಜ್ ಕ್ರಿಯೆಟ್ ಮಾಡಲಾಗಿದೆ. ಆದಾಯ ಎಷ್ಟು ಬರುತ್ತಿದೆ? ಖರ್ಚು ವೆಚ್ಚ ಎಲ್ಲದರ ವಿವರಗಳನ್ನ ನೀಡಬೇಕಾಗುತ್ತದೆ. ಒಂದು ವೇಳೆ ಅಶ್ಲೀಲತೆ ಅಥವಾ ಅನೈತಿಕ ಚಟುವಟಿಕೆಗಳ ಪ್ರಸಾರದಿಂದ ಹಣ ಗಳಿಸುತ್ತಿದ್ದರೆ, ಬಂಧಕ್ಕೆ ಒಳಗಾಗುವ ಸಾಧ್ಯತೆಗಳೂ ಇರುತ್ತವೆ.
ಓನ್ಲಿ ಫ್ಯಾನ್ ಕ್ರಿಯೇಟರ್ಸ್‌ಗೆ ಆದಾಯ ತೆರಿಗೆ ನಿಯಮ ಹೇಗೆ ಅನ್ವಯ?
ಆನ್‌ಲೈನ್ ವೇದಿಕೆ ಆಗಿರೋದ್ರಿಂದ ಎಲ್ಲವೂ ಡಿಜಿಟಲ್ ಪಾವತಿ ಆಗಿರುತ್ತದೆ. ಹಾಗಾಗಿ ಪ್ರತಿಯೊಂದು ಪಾವತಿಯೂ ದಾಖಲಾಗುತ್ತದೆ. ಆದ್ದರಿಂದ ಒಟ್ಟು ಆದಾಯಕ್ಕೆ ವಿಧಿಸಬಹುದಾದ ತೆರಿಗೆ ಹಾಗೂ ಅನ್ವಯವಾಗುವ ಸ್ಲ್ಯಾಬ್ ದರಗಳ ಪ್ರಕಾರ ತೆರಿಗೆ ವಿಧಿಲಾಗುತ್ತದೆ.
ಜಿಎಸ್‌ಟಿ ಅನ್ವಯಿಸುತ್ತಾ?
ಓನ್ಲಿ ಫ್ಯಾನ್ಸ್‌ನಲ್ಲಿ ಕಂಟೆಂಟ್ ಕ್ರಿಯೆಟರ್ಸ್‌ಗಳ ಆದಾಯವು ಒಂದು ವರ್ಷದಲ್ಲಿ 20 ಲಕ್ಷ ಮೀರಿದ್ರೆ ಜಿಎಸ್‌ಟಿ (GST) ಮಿತಿಗೆ ಒಳಪಡಬೇಕಾಗುತ್ತದೆ. ಭಾರತೀಯ ಚಂದಾದಾರರಿಗೆ ಒದಗಿಸುವ ಸೇವೆಗಳಿಗಾಗಿ 18% ಜಿಎಸ್‌ಟಿ ಅನ್ವಯ ಆಗಲಿದೆ. ಇನ್ನೂ ವಿದೇಶಿ ಸೇವೆಗಳ ಗಳಿಕೆಯನ್ನು ರಫ್ತು ಎಂದು ಪರಿಗಣಿಸಲಾಗುತ್ತದೆ.
ಒಟ್ಟಾರೆ ಹೇಳುವುದಾದ್ರೆ, ಭಾರತದಲ್ಲಿ ಓನ್ಸಿ ಫ್ಯಾನ್ಸ್ ಕಾನೂನುಬದ್ಧವಾಗಿದೆ. ಆದ್ರೆ ಕಂಟೆಂಟ್ ಕ್ರಿಯೇಟರ್ಸ್‌ಗಳು ಅಗತ್ಯ ನಿಯಮಗಳನ್ನು ಪಾಲಿಸಿದ್ರೆ, ಆದಾಯ ದಾಖಲೆ ಮೂಲ ಎಲ್ಲವೂ ಸರಿಯಾಗಿದ್ದರೆ, ಯಾವುದೇ ಅನೈತಿಕ ಚಟುವಟಿಕೆ ನಡೆಸದೇ ಇದ್ದರೆ ಅದೂ ಕೂಡ ಸ್ವಯಂ ಉದ್ಯೋಗದ ಮಿತಿಗೆ ಬರುತ್ತದೆ.





