ಮೈಸೂರು: ಡ್ರಗ್ಸ್ (Drugs) ಮಾಫಿಯಾದ ಕೇಂದ್ರ ಸ್ಥಾನ ಆಗ್ತಿದ್ದೆಯಾ ಮೈಸೂರು ಎಂಬ ಪ್ರಶ್ನೆಯೊಂದು ಈಗ ಎದ್ದಿದೆ. ಕಾರಣ ಮೈಸೂರಲ್ಲಿ ಶನಿವಾರ (ಜು.26) ರಾತ್ರಿ ಭಾರೀ ಪ್ರಮಾಣದ ಎಂಡಿಎಂಎ ಯನ್ನು ಪೊಲೀಸರು (Mysuru Police) ವಶಕ್ಕೆ ಪಡೆದಿದ್ದಾರೆ.
ಮಹಾರಾಷ್ಟ್ರ ಪೊಲೀಸರು ಖಚಿತ ಮಾಹಿತಿ ಮೇರೆಗೆ ಮೈಸೂರು (Mysuru) ಹೊರವಲಯದ ರಿಂಗ್ ರಸ್ತೆ ಬಳಿಯಲ್ಲಿ ಮಾದಕ ಪದಾರ್ಥಗಳ ತಯಾರಿಕಾ ಘಟಕದ ಮೇಲೆ ದಾಳಿ ಮಾಡಿ ಭಾರೀ ಪ್ರಮಾಣದ ಎಂಡಿಎಂಎ (MDMA) ವಶಕ್ಕೆ ಪಡೆದಿದ್ದಾರೆ. 50 ಕೆಜಿಗೂ ಹೆಚ್ಚು ಪ್ರಮಾಣದ ಎಂಡಿಎಂಎ ವಶಕ್ಕೆ ಪಡೆದಿದ್ದಾರೆ. ಇದು ಈಗ ಮೈಸೂರನ್ನೇ ಬೆಚ್ಚಿ ಬೀಳಿಸಿದೆ. ಇದನ್ನೂ ಓದಿ: ಮೆಜೆಸ್ಟಿಕ್ ರೈಲ್ವೆ ಸ್ಟೇಷನ್‌ನಲ್ಲಿ ಟಿಕೆಟ್ ದಂಧೆ – ಹಣ ಕೊಟ್ರೆ ವೇಟಿಂಗ್ ಲಿಸ್ಟ್ ಇದ್ರೂ ಕನ್ಫರ್ಮ್ ಆಗುತ್ತೆ!
ಈ ದಾಳಿಯ ಮೂಲಕ ಮೈಸೂರು ಸೀರಿಯಸ್ ಟ್ರಬಲ್‌ನಲ್ಲಿ ಇದೆಯಾ ಅನ್ನಿಸಿದೆ. ಮಹಾರಾಷ್ಟ್ರದಲ್ಲಿ ಸೆರೆಯಾದ ಡ್ರಗ್ ಪೆಡ್ಲರ್ ನೀಡಿದ ಮಾಹಿತಿ ಮೇರೆಗೆ ಮಹಾರಾಷ್ಟ್ರ ಪೊಲೀಸರು ಮೈಸೂರು ಪೊಲೀಸರ ಸಹಕಾರದಿಂದ ಈ ಕಾರ್ಯಾಚರಣೆ ಮಾಡಿದ್ದಾರೆ. ಮೈಸೂರಿನಲ್ಲಿ ಡ್ರಗ್ಸ್ ತಯಾರಿಸಿ ಮಹಾರಾಷ್ಟ್ರ ಸೇರಿ ದೇಶದ ವಿವಿಧ ಭಾಗಗಳು, ವಿದೇಶಗಳಿಗೆ ಎಂಡಿಎಂಎ ಸರಬರಾಜು ಮಾಡುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಟಿಬಿ ಡ್ಯಾಂನ 26 ಗೇಟ್‌ಗಳಿಂದ 90,893 ಕ್ಯೂಸೆಕ್ ನೀರು ರಿಲೀಸ್ – ಮುಳುಗಡೆ ಭೀತಿಯಲ್ಲಿ ಹಂಪಿ ಸ್ಮಾರಕಗಳು
15 ದಿನಗಳ ಹಿಂದಷ್ಟೇ ಡ್ರಗ್ಸ್ ತಯಾರಿಕಾ ಘಟಕ ಮೈಸೂರಲ್ಲಿ ಶುರುವಾಗಿದೆ. ಮುಂದೆ ಕಾರ್ ಗ್ಯಾರೇಜ್ ಮಾಡಿಕೊಂಡು ಅದರ ಹಿಂದೆ ಡ್ರಗ್ಸ್ ತಯಾರಿಕಾ ಘಟಕ ನಿರ್ಮಿಸಿ ಕೊಳ್ಳಲಾಗಿತ್ತು. ಮೂರು ದೊಡ್ಡ ಕಂಟೇನರ್ ಇಟ್ಟು ದ್ರವದ ಆವಿಯಿಂದ ಡ್ರಗ್ ತಯಾರಿಕೆ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. 15 ದಿನದಲ್ಲಿ 13 ಕೆಜಿ ಡ್ರಗ್ಸ್ ತಯಾರಿಸಲಾಗಿತ್ತು. 50 ಕೆಜಿ ಡ್ರಗ್ಸ್ ತಯಾರಿಕೆ ಪ್ರಕ್ರಿಯ ಅಂತಿಮ ಹಂತದಲ್ಲಿತ್ತು. ಇದನ್ನು ಈಗ ಪೊಲೀಸರು ಸ್ಹೀಜ್ ಮಾಡಿದ್ದಾರೆ.
ಅಲ್ಲಿಗೆ ಮೈಸೂರು ನಿಧಾನವಾಗಿ ಡ್ರಗ್ಸ್ ಮಾಫಿಯಾದ ಕೇಂದ್ರ ಸ್ಥಾನವಾಗಿ ಬದಲಾಗುವ ಲಕ್ಷಣ ಕಂಡಿದ್ದು ಇದು ಇಡೀ ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಹರಿದ್ವಾರ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ – 6 ಭಕ್ತರು ಸಾವು