– ತಜ್ಞರ ತನಿಯಲ್ಲಿ ಅಚ್ಚರಿ ಅಂಶಗಳು ಬಯಲು
ಬೆಂಗಳೂರು: ಹಾಗಿದ್ರೆ ಒಮ್ಮೆ ಈ ಸ್ಟೋರಿ ನೋಡಲೇಬೇಕು. ರಾಜ್ಯದಲ್ಲಿ ಹೆಚ್ಚಾಗ್ತಿರೋ ಹೃದಯಘಾತ ಪ್ರಕರಣಗಳಿಗೆ ಮೊಬೈಲ್ (Mobile) ಬಳಕೆ ಕೂಡ ಕಾರಣ ಅನ್ನೋ ಅಚ್ಚರಿಯ ಅಂಶ ತಜ್ಞರ ತನಿಖೆಯಲ್ಲಿ ಬಯಲಾಗಿದೆ.
ಹೌದು. ರಾಜ್ಯದಲ್ಲಿ ಹೃದಯಘಾತ (Heart Attack) ಸಮಸ್ಯೆಗಳು ಹೆಚ್ಚಾಗುತ್ತಿರುವ ಸಂಬಂಧ ತಜ್ಞರ ತನಿಖೆಯಲ್ಲಿ ಅನೇಕ ಅಂಶಗಳು ಬಯಲಾಗಿವೆ. ನಿತ್ಯ ಜೀವನದ ಭಾಗವೆಂದೇ ಭಾವಿಸುವ ಅನೇಕ ಚಟುವಟಿಕೆಗಳು ಕೂಡ ನಿಮ್ಮ ಹೃದಯಕ್ಕೆ ಡೇಂಜರ್ ಅನ್ನೋ ಸತ್ಯ ಹೊರ ಬಿದ್ದಿದೆ. ಅದರಲ್ಲೂ ಇತ್ತೀಚಿನ ಕೆಲವು ವರ್ಷಗಳಿಂದ ಹೆಚ್ಚಾಗಿರೋ ಮೊಬೈಲ್ ಗೀಳು (Mobile Addiction) ಕೂಡ ಇದಕ್ಕೆ ಕಾರಣ ಅನ್ನೋ ಶಾಕಿಂಗ್ ಅಂಶ ಬಯಲಾಗಿದ್ದು, ಹೆಚ್ಚು ಮೊಬೈಲ್ ಬಳಕೆದಾರರೇ ಬಿ ಕೇರ್ ಫುಲ್ ಅಂತಿದೆ ತಜ್ಞರ ವರದಿ. ಇದನ್ನೂ ಓದಿ: ಮಾಜಿ ಲವ್ವರ್‌ಗೆ ಅಶ್ಲೀಲ ಸಂದೇಶ – ರೇಣುಕಾಸ್ವಾಮಿ ಕೊಲೆ ಕೇಸ್ ಉಲ್ಲೇಖಿಸಿ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ಯಾಂಗ್
ಹೌದು. ಇದು ಖುದ್ದು ಬಯಲಾಗಿರೋದು ತಜ್ಞರು ಇತ್ತೀಚಿಗೆ ರಾಜ್ಯದಲ್ಲಿ ನಡೆಸಿದ ತನಿಖೆಯಲ್ಲಿ. ರಾಜ್ಯದಲ್ಲಿ ಹೆಚ್ಚಾದ ಹೃದಯಘಾತ ಸಂಬಂಧ ನಡೆದ ತನಿಖೆಯಲ್ಲಿ ಈ ಸತ್ಯ ಹೊರ ಬಿದ್ದಿದೆ. ಕೊವಿಡ್ ಪರಿಸ್ಥಿತಿ ಬಳಿಕ ಜನ ಹೆಚ್ಚು ಮೊಬೈಲ್ ಬಳಕೆ ಗೀಳಿಗೆ ಒಳಗಾಗುತ್ತಿದ್ದಾರೆ. ಅದರಲ್ಲೂ ಸೋಶಿಯಲ್ ಮೀಡಿಯಾ ಸಾಮಾನ್ಯ ಜನರ ಜೀವನದ ಅಂಗವಾಗಿ ಬದಲಾಗಿದೆ. ಇದೇ ಅನೇಕರ ಹೃದಯದ ಮೇಲೆ ಪರಿಣಾಮ ಬೀರಲು ಕಾರಣವಾಗಿದೆ ಎಂದು ತಜ್ಞರ ವರದಿ ತಿಳಿಸಿದೆ. ಇದನ್ನೂ ಓದಿ: 100 ವರ್ಷಗಳಲ್ಲಿ ಇದೇ ಮೊದಲು – ಟೆಕ್ಸಾಸ್‌ನಲ್ಲಿ ಭೀಕರ ಪ್ರವಾಹಕ್ಕೆ 78 ಮಂದಿ ಬಲಿ, 41 ಜನ ಮಿಸ್ಸಿಂಗ್
ಹೆಚ್ಚು ಹೊತ್ತು ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್, ವ್ಲಾಗ್‌ಗಳ ವೀಕ್ಷಣೆ ನಿತ್ಯ ಜನರ ಜೀವನದ ಮೇಲೆ ಪರಿಣಾಮ ಬೀರಲು ಆರಂಭಿಸಿದೆ. ಜನರ ಮೊಬೈಲ್ ಗೀಳಿನಿಂದಾಗಿ ಅವರ ದೈಹಿಕ ಚಟುವಟಿಕೆ ಕುಂಠಿತವಾಗಲು ಕಾರಣವಾಗುತ್ತಿದೆ. ಮೊಬೈಲ್‌ಗೆ ಅಂಟಿಕೊಂಡಿರುವುದರಿಂದ ಹಾರ್ಟ್ ರೇಟ್ ವೇರಿ ಆಗ್ತಿದ್ದು ಹೃದಯಗಳ ಸಮಸ್ಯೆಗೆ ಕಾರಣವಾಗುತ್ತಿದೆ. ಇದನ್ನೂ ಓದಿ: ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಕ್ ವಿರುದ್ಧ ಮೋದಿ ಕಟು ವಾಗ್ದಾಳಿ – ಬುದ್ಧನ ಶಾಂತಿ ತತ್ವ ಪ್ರತಿಪಾದಿಸಿದ ಪ್ರಧಾನಿ
ಇನ್ನೂ ತಜ್ಣರ ಪ್ರಕಾರ ಕೋವಿಡ್ ಬಳಿಕ ಮೊಬೈಲ್ ಮೇಲೆ ಜನರ ಹೆಚ್ಚು ಅವಲಂಬನೆ ಆರಂಭವಾಗಿದೆ. ನಿತ್ಯ ಜೀವನದ ಬೋರ್ ಡಂ ಹೋಗಿಸುವುದಕ್ಕೆ ಸದಾ ಮೊಬೈಲ್‌ನಲ್ಲಿ ಕಳೆದು ಹೋಗುತ್ತಿದ್ದಾರೆ. ಅನೇಕರು ಸದಾ ಮೊಬೈಲ್ ಯೂಸ್ ಮಾಡುತ್ತಾ.. ಊಟ ತಿಂಡಿ ಮಾಡದೇ ನಿದ್ದೆ ಮಾಡದೇ ಒತ್ತಡದ ಬದುಕ್ತಿದ್ದಾರೆ. ಇದ್ರಿಂದ ಜನ ತಲೆನೋವು, ಸುಸ್ತು, ಹೃದಯ ಹೆವಿನೆಸ್‌ಗೆ ಒಳಗಾಗುವ ಸಾಧ್ಯತೆ ಹೆಚ್ಚಾಗುತ್ತಿದೆ. ಪರಿಣಾಮ ಅದೇ ರೆಡಿಯೇಷನ್ ಹೃದಯಕ್ಕೂ ಕುತ್ತು ತರುವ ಸಾಧ್ಯತೆ ಹೆಚ್ಚಾಗುತ್ತಿದೆ. ತಜ್ಞರ ವರದಿಯಲ್ಲಿಯೂ ಸ್ಕ್ರೀನ್ ಟೈಮ್ ಹೆಚ್ಚು ಬಳಕೆ ಹೃದಯಘಾತ ಹೆಚ್ಚಳಕ್ಕೆ ಕಾರಣ ಅನ್ನೋ ಬಗ್ಗೆ ಉಲ್ಲೇಖ ಮಾಡಲಾಗಿದೆ.
ತಜ್ಞರ ವರದಿಯ ಪ್ರಮುಖ ಅಂಶಗಳು
* ಮೊಬೈಲ್ ಬಳಕೆಯಿಂದ ಅಪಾಯ ಹೆಚ್ಚು
* ಹಲವರು ಮೊಬೈಲ್‌ಗೆ ಅಂಟಿಕೊಂಡಿರುತ್ತಾರೆ
* ಹೊರಗಡೆ ಎದ್ದು ಹೋಗೋದೇ ಇಲ್ಲ, 24 ಗಂಟೆ ಮೊಬೈಲ್‌ನಲ್ಲಿ ತಲ್ಲೀನರಾಗಿರುತ್ತಾರೆ
* ಕಣ್ಣಿನ ರೆಟಿನಾಗೆ ಎಫೆಕ್ಟ್.. ತಲೆನೋವು, ತಲೆಸುತ್ತು ಬರುತ್ತದೆ
* ಮೆಮೋರಿ ಲಾಸ್ ಆಗುವ ಸಾಧ್ಯತೆ ಕೂಡ ಇದೆ
* ಬೇರೆಯವರ ಜೊತೆ ಬೆರೆಯುವುದಿಲ್ಲ, ಸಣ್ಣ-ಪುಟ್ಟ ಮಾತಿಗೂ ಸಿಡುಕುತ್ತಾರೆ
* ಓದಿನ ಕಡೆಗೂ ಆಸಕ್ತಿ ಕಡಿಮೆ ಆಗುತ್ತದೆ
* ಹೃದಯದ ಹತ್ತಿರ ಮೊಬೈಲ್ ಇಟ್ಟುಕೊಂಡರೆ ಡೇಂಜರ್
* ಹಾರ್ಟ್ ರೇಟ್ ವೆರಿಯೆಬಿಲಿಟಿ ಆಗುವ ಸಾಧ್ಯತೆಗಳೂ ಇವೆ ಎಂದು ತಜ್ಞರ ವರದಿ ಹೇಳಿದೆ.