ಅನುಷ್ಕಾ ಶೆಟ್ಟಿ ‘ಪೊನ್ನಿಯಿನ್ ಸೆಲ್ವನ್’ ಕೈಬಿಟ್ಟಿದ್ದಕ್ಕೆ ಮೀ ಟೂ ಕಾರಣವಾ?

Public TV
1 Min Read
anushka shetty

ಇಂದು ವಿಶ್ವದಾದ್ಯಂತ ರಿಲೀಸ್ ಆಗಿರುವ ‘ಪೊನ್ನಿಯಿನ್ ಸೆಲ್ವನ್’ (Ponniyin Selvan) ಸಿನಿಮಾದಲ್ಲಿ ಅಂದುಕೊಂಡಂತೆ ಆಗಿದ್ದರೆ ಅನುಷ್ಕಾ ಶೆಟ್ಟಿ (Anushka Shetty) ನಟಿಸಬೇಕಿತ್ತು. ಸ್ವತಃ ನಿರ್ದೇಶಕ ಮಣಿರತ್ನಂ (Mani Ratnam) ಅವರೇ ಅನುಷ್ಕಾಗೆ ಕರೆ ಮಾಡಿ, ಮಹತ್ವದ ಪಾತ್ರವೊಂದನ್ನು ಮಾಡಬೇಕು ಎಂದು ಹೇಳಿದ್ದರಂತೆ. ಹೆಸರಾಂತ ನಿರ್ದೇಶಕರು ಕರೆ ಮಾಡಿದರೂ, ಆ ಆಫರ್ ಅನ್ನು ತಿರಸ್ಕಾರ ಮಾಡಿದರಂತೆ ಅನುಷ್ಕಾ. ಅದಕ್ಕೆ ಕಾರಣ ಮೀ ಟೂ (Me Too) ಎಂದು ಹೇಳಲಾಗುತ್ತಿದೆ.

Ponniyin Selvan 2 2

ತಮಿಳು ಮಾಧ್ಯಮಗಳ ಸುದ್ದಿ ಮಾಡಿದಂತೆ, ಮೀ ಟೂ ಕಾರಣದಿಂದಾಗಿ ಪೊನ್ನಿಯಿನ್ ಸೆಲ್ವನ್ ಸಿನಿಮಾವನ್ನು ಅನುಷ್ಕಾ ಕೈ ಬಿಟ್ಟಿದ್ದಾರಂತೆ. ಐಶ್ವರ್ಯ ರೈ ಮಾಡಿರುವ ಪಾತ್ರವನ್ನೇ ಅನುಷ್ಕಾ ನಿರ್ವಹಿಸಬೇಕಿತ್ತಂತೆ. ಆದರೆ, ಮೀ ಟೂ ಆರೋಪಿತ ವ್ಯಕ್ತಿಯೊಬ್ಬರು ಆ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವುದರಿಂದ ಅವರ ಜೊತೆ ನಾನು ಕೆಲಸ ಮಾಡಲಾರೆ ಎಂದು ಅನುಷ್ಕಾ ತಿರಸ್ಕಾರ ಮಾಡಿದ್ದಾರಂತೆ.

anushka shetty

ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ಗೀತರಚನೆಕಾರ ವೈರಮುತ್ತು (Vairamuthu) ಕೆಲಸ ಮಾಡಿದ್ದಾರೆ. ಇವರ ಮೇಲೆ ಅನೇಕರು ಮೀ ಟೂ ಆರೋಪವನ್ನು ಮಾಡಿದ್ದಾರೆ. ಹಾಗಾಗಿ ತಾವು ಈ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ನೇರವಾಗಿಯೇ ಅನುಷ್ಕಾ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಕುರಿತು ಅನುಷ್ಕಾ ಆಗಲಿ ಅಥವಾ ಚಿತ್ರತಂಡದ ಯಾವುದೇ ಸದಸ್ಯರಾಗಲಿ ಅಧಿಕೃತ ಹೇಳಿಕೆ ನೀಡದೇ ಇದ್ದರೂ, ತಮಿಳು ಚಿತ್ರೋದ್ಯಮದಲ್ಲಿ ಈ ವಿಷಯ ಭಾರೀ  ಸದ್ದು ಮಾಡುತ್ತಿದೆ. ಇದನ್ನೂ ಓದಿ:ಸಂಪತ್ ಪತ್ನಿ 5 ತಿಂಗಳ ಗರ್ಭಿಣಿ- ಸಹನಟನ ನೆನೆದು ಕಣ್ಣೀರಿಟ್ಟ ವೈಷ್ಣವಿ

ponniyin selvan 1

ಇಂದು ವಿಶ್ವದಾದ್ಯಂತ ರಿಲೀಸ್ ಆಗಿರುವ ‘ಪೊನ್ನಿಯಿನ್ ಸೆಲ್ವನ್ 2’ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪೊನ್ನಿಯಿನ್ ಸೆಲ್ವನ್ 1 ಚಿತ್ರವೂ ಸಾಕಷ್ಟು ಸದ್ದು ಮಾಡಿತ್ತು. ತ್ರಿಷಾ, ಐಶ್ವರ್ಯ ರೈ, ಚಿಯಾನ್ ವಿಕ್ರಮ್, ಕಾರ್ತಿ ಸೇರಿದಂತೆ ಬಹುತಾರಾಗಣವೇ ಸಿನಿಮಾದಲ್ಲಿದೆ. ಈ ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ.

Share This Article