ನಟಿ ಹಾಗೂ ಸಕ್ರಿಯ ರಾಜಕಾರಣಿಯೂ ಆಗಿರುವ ಖುಷ್ಬೂ (Khushboo) ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಒಂದಿಲ್ಲೊಂದು ಚರ್ಚೆ ಹುಟ್ಟು ಹಾಕುತ್ತಲೇ ಇರುತ್ತಾರೆ. ಅದಕ್ಕೆ ಬಂದ ಉತ್ತರಗಳಿಗೆ ಮತ್ತು ಹುಟ್ಟಿದ ಪ್ರಶ್ನೆಗಳಿಗೆ ಸಮಾಧಾನವಾಗಿಯೇ ಉತ್ತರ ನೀಡುತ್ತಾರೆ. ಈ ಬಾರಿ ಅವರ ಮದುವೆ ಮತ್ತು ಮತಾಂತರ (Conversion) ಕುರಿತಾಗಿ ಪ್ರಶ್ನೆಯೊಂದು ತೇಲಿ ಬಂದಿದ್ದು, ಅದಕ್ಕೂ ಖುಷ್ಬೂ ಉತ್ತರಿಸಿದ್ದಾರೆ.
Advertisement
ಖುಷ್ಬೂ ಮುಂಬೈನ ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದವರು. ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ನಂತರ ಅವರು ದಕ್ಷಿಣ ಭಾರತದಲ್ಲಿ ನೆಲೆಯೂರಿದರು. ಹೆಚ್ಚೆಚ್ಚು ಸಿನಿಮಾಗಳು ಸಿಕ್ಕಾಗಿ ಚೆನ್ನೈನಲ್ಲೇ ಮನೆ ಮಾಡಿಕೊಂಡರು. ಅಲ್ಲದೇ, ನಿರ್ದೇಶಕ ಸುಂದರ್. ಸಿ (Sundar C)ಅವರನ್ನು ವಿವಾಹವೂ ಆದರು. ಈ ವಿವಾಹದ ಕುರಿತಾಗಿಯೇ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದಾರೆ. ನೀವು ಹಿಂದೂ ವ್ಯಕ್ತಿಯನ್ನು ಮದುವೆ ಆಗಿದ್ದೀರಿ. ಹಾಗಾಗಿ ಮತಾಂತರ ಆಗಿದ್ದೀರಾ? ಎನ್ನುವ ಪ್ರಶ್ನೆಯನ್ನು ನಟಿಯ ಮುಂದಿಟ್ಟಿದ್ದಾರೆ. ಇದನ್ನೂ ಓದಿ:ಶಿವಣ್ಣ ಅಭಿಮಾನಿಗಳ ಆಕ್ರೋಶಕ್ಕೆ ಮಣಿದು, ಹೇಳಿದ ಮಾತು ಹಿಂಪಡೆದ ಸಂಬರ್ಗಿ
Advertisement
Advertisement
ದಿ ಕೇರಳ ಸ್ಟೋರಿ ಸಿನಿಮಾ ರಿಲೀಸ್ ಆದ ಬೆನ್ನಲ್ಲೇ ಈ ಪ್ರಶ್ನೆ ಅವರಿಗೆ ಎದುರಾಗಿದೆ. ಕೇಳಿದ ಪ್ರಶ್ನೆಗೆ ಸಮಚಿತ್ತದಿಂದಲೇ ಉತ್ತರಿಸಿರುವ ಖುಷ್ಭೂ. ನಾನು ಮತಾಂತರ ಆಗಿಲ್ಲ. ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದೆ. ಈ ಕಾಯ್ದೆ ಬಗ್ಗೆ ತಿಳಿದುಕೊಳ್ಳಿ ಎಂದು ಅವರು ಹೇಳಿದ್ದಾರೆ. ಈ ಮೂಲಕ ತಾವು ಯಾವುದೇ ಧರ್ಮಕ್ಕೆ ಮತಾಂತರ ಆಗಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.
Advertisement
ಖುಷ್ಬೂ ದಕ್ಷಿಣ ಭಾರತದ ಅಷ್ಟೂ ಭಾಷೆಯ ಸಿನಿಮಾಗಳಲ್ಲಿ ನಟಿಸಿರುವ ಹೆಸರಾಂತ ನಟ. ಕನ್ನಡದಲ್ಲೂ ಅವರು ರವಿಚಂದ್ರನ್ ಜೊತೆ ಸಿನಿಮಾ ಮಾಡಿದ್ದಾರೆ. ಮತ್ತೆ ಕನ್ನಡ ಸಿನಿಮಾ ರಂಗಕ್ಕೆ ವಾಪಸ್ಸಾಗುವ ಮಾತುಗಳನ್ನೂ ಆಡಿದ್ದಾರೆ. ಇದರ ಜೊತೆ ಜೊತೆಗೆ ರಾಜಕಾರಣದಲ್ಲೂ ಅವರು ಹಂತ ಹಂತವಾಗಿ ಬೆಳೆಯುತ್ತಿದ್ದಾರೆ.