ಗುಟ್ಟಾಗಿ ಮದುವೆಯಾದ್ರಾ ‘ಕೆಜಿಎಫ್’ ನಟಿ ಶ್ರೀನಿಧಿ ಶೆಟ್ಟಿ?

Public TV
2 Min Read
srinidhi shetty

ಮಂಗಳೂರಿನ ಬೆಡಗಿ ಶ್ರೀನಿಧಿ ಶೆಟ್ಟಿ (Srinidhi Shetty) ಅವರು ಈಗ ತಮ್ಮ ಮದುವೆಯ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಗುಟ್ಟಾಗಿ ನಟಿ ಮದುವೆಯಾಗಿದ್ದಾರೆ (Wedding) ಎಂದು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಆಗಿದೆ. ಇತ್ತೀಚಿಗೆ ನಟಿ ಶೇರ್ ಮಾಡಿರುವ ಫೋಟೋ ಮದುವೆ ಸುದ್ದಿಗೆ ಮತ್ತಷ್ಟು ಪುಷ್ಟಿ ಕೊಟ್ಟಿದೆ. ಅಷ್ಟಕ್ಕೂ ಆಗಿದ್ದೇನು.? ಇಲ್ಲಿದೆ ಡಿಟೈಲ್ಸ್

srinidhi shetty

ಮಾಡೆಲಿಂಗ್ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದ ಶ್ರೀನಿಧಿ ಶೆಟ್ಟಿ ಅವರು ಯಶ್‌ಗೆ (Yash) ನಾಯಕಿಯಾಗುವ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟರು. ಮೊದಲ ಸಿನಿಮಾದಲ್ಲೇ ತಮ್ಮ ಅಭಿನಯದ ಮೂಲಕ ಮನೆಮಾತಾದರು. ಕೆಜಿಎಫ್ 2ನಲ್ಲೂ (KGF 2) ನಟಿ ಮಿಂಚಿದ್ದರು. ಪ್ರಶಾಂತ್ ನೀಲ್ (PrashanthNeel) ನಿರ್ದೇಶನದ ಸಿನಿಮಾದಲ್ಲಿ ರೀನಾ ಪಾತ್ರಕ್ಕೆ ಜೀವ ತುಂಬಿದ್ದರು.

KGF CHAPTER 2 SRINIDHI SHETTY

ಬಳಿಕ ಚಿಯಾನ್ ವಿಕ್ರಮ್ ಜೊತೆ ‘ಕೋಬ್ರಾ’ (Cobra) ಸಿನಿಮಾದಲ್ಲಿ ನಟಿಸಿದರು. ಸಿನಿಮಾ ಸದ್ದು ಮಾಡದೇ ಇದ್ದರು. ಕೆಜಿಎಫ್ (KGF) ಬ್ಯೂಟಿ ಅಭಿನಯಕ್ಕೆ ಫ್ಯಾನ್ಸ್ ಫಿದಾ ಆದರು. ಈಗ ಹೊಸ ಸಿನಿಮಾ ಅವಕಾಶಗಳನ್ನ ನಟಿ ಗಮನ ವಹಿಸುತ್ತಿದ್ದಾರೆ. ಇತ್ತೀಚಿಗೆ ಕೆಜಿಎಫ್ 3 ಕೂಡ ಅನೌನ್ಸ್ ಮಾಡಲಾಗಿದೆ. ಇದನ್ನೂ ಓದಿ:ಪಿಎಂ ನರೇಂದ್ರ ಮೋದಿ- ಫ್ರೆಂಚ್ ಪ್ರೆಸಿಡೆಂಟ್ ಜೊತೆ ಮ್ಯಾಡಿ ಊಟ

srinidhi shetty

ಈ ನಡುವೆ ನಟಿ ಶ್ರೀನಿಧಿ ತಮ್ಮ ಮದುವೆ ವಿಚಾರಕ್ಕೆ ಸಂಚಲನ ಮೂಡಿಸಿದ್ದಾರೆ. ಹೇಳದೇ ಕೇಳದೇ ನಟಿ ಗುಟ್ಟಾಗಿ ಮದುವೆಯಾಗಿದ್ದಾರೆ ಎಂದು ನೆಟ್ಟಿಗರು ಬೇಸರ ಹೊರಹಾಕಿದ್ದಾರೆ. ಶ್ರೀನಿಧಿಗೆ ಈ ಮೊದಲೇ ಮದುವೆ ಆಗಿತ್ತಾ? ಅಥವಾ ಸದ್ದಿಲ್ಲದೇ ಮದುವೆ ಆಗಿಬಿಟ್ರಾ? ಒಂದು ಫೋಟೊ ಕೂಡ ಹೊರಗೆ ಬರಲಿಲ್ಲವಲ್ಲ ಅಂತೆಲ್ಲಾ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಆಕೆಯ ಹೊಸ ಇನ್ಸ್ಟಾಗ್ರಾಂ ಪೋಸ್ಟ್. ಆಕೆ ಹಂಚಿಕೊಂಡಿರುವ ಎರಡು ಫೋಟೊಗಳು ಇಂತಾದೊಂದು ಚರ್ಚೆಗೆ ಕಾರಣವಾಗಿದೆ. 4 ದಿನಗಳ ಹಿಂದೆ ಶ್ರೀನಿಧಿ ಶೆಟ್ಟಿ ಎರಡು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಹಳದಿ ಬಣ್ಣದ ಸೆಲ್ವಾರ್‌ನಲ್ಲಿ ಫೋನ್‌ನಲ್ಲಿ ಸೆಲ್ಫಿ ಹಿಡಿದುಕೊಂಡಿದ್ದಾರೆ. ಆದರೆ ಆ ಫೋಟೊಗಳಲ್ಲಿ ಆಕೆಯ ಬೈತಲೆಯಲ್ಲಿ ಸಿಂಧೂರ ಇಟ್ಟುಕೊಂಡಿದ್ದಾರೆ. ಸಾಮಾನ್ಯವಾಗಿ ಮದುವೆಯಾದ ಮಹಿಳೆಯರು ಮಾತ್ರ ಈ ರೀತಿ ಬೈತಲೆಯಲ್ಲಿ ಕುಂಕುಮ ಇಟ್ಟುಕೊಳ್ಳುತ್ತಾರೆ. ಅದೇ ಕಾರಣಕ್ಕೆ ಕೆಲವರು ಶ್ರೀನಿಧಿಗೆ ಮದುವೆ ಆಗಿಬಿಡ್ತಾ?ಎಂದು ಅಚ್ಚರಿ ವ್ಯಕ್ತಪಡಿಸ್ತಿದ್ದಾರೆ.

ಅಂದಹಾಗೆ ಶ್ರೀನಿಧಿ ಶೆಟ್ಟಿಗೆ ಮದುವೆ ಆಗಿದೆ ಅನ್ನುವುದು ಸುಳ್ಳು. ಆದರೆ ಕೆಲ ಯುವತಿಯರು ಮದುವೆ ಆಗದಿದ್ದರೂ ಬೈತಲೆಗೆ ಕುಂಕುಮ ಇಟ್ಟುಕೊಳ್ಳುತ್ತಾರೆ. ಅದೇ ರೀತಿ ನಟಿ ಶ್ರೀನಿಧಿ ಶೆಟ್ಟಿ ಕೂಡ ಕುಂಕುಮ ಹಚ್ಚಿಕೊಂಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿ ಕ್ಲಾರಿಟಿ ಕೊಡುತ್ತಿದ್ದಾರೆ. ಒಟ್ನಲ್ಲಿ ಆಕೆಯ ಪೋಸ್ಟ್ ಕಾಮೆಂಟ್ ಬಾಕ್ಸ್‌ನಲ್ಲಿ ಈ ಬಗ್ಗೆ ಭಾರೀ ಚರ್ಚೆಯೇ ನಡೆಯುತ್ತಿದೆ. ಈ ಬಗ್ಗೆ ಶ್ರೀನಿಧಿ ಪ್ರತಿಕ್ರಿಯೆ ನೀಡುತ್ತಾರಾ? ಕಾದು ನೋಡಬೇಕಿದೆ.

Share This Article