ನಿವೃತ್ತ ಡಿಜಿಪಿ ಬರ್ಬರ ಹತ್ಯೆ – ತಂಗಿಯರಿಗೆ ಆಸ್ತಿ ಕೊಟ್ಟಿದ್ದಕ್ಕೆ ನಡೀತಾ ಕೊಲೆ?

Public TV
1 Min Read
om prakash murder

– ತಂಗಿಯರ ವಿಚಾರಕ್ಕೆ ಬರಬೇಡ ಎಂದು ಪತ್ನಿಗೆ ಎಚ್ಚರಿಕೆ ಕೊಟ್ಟಿದ್ರಾ ಓಂ ಪ್ರಕಾಶ್?

ಬೆಂಗಳೂರು: ನಿವೃತ್ತ ಡಿಜಿಪಿ ಓಂ ಪ್ರಕಾಶ್ ಬರ್ಬರ ಹತ್ಯೆ ಪ್ರಕರಣ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ತಂಗಿಯರಿಗೆ ಆಸ್ತಿ ಕೊಟ್ಟಿದ್ದಕ್ಕೆ ಕೊಲೆ ನಡೆಯಿತೆ ಎಂಬ ಅನುಮಾನ ಮೂಡಿದೆ.

ಓಂ ಪ್ರಕಾಶ್ ಅವರಿಗೆ ಸೇರಿದ ಎರಡು ಮನೆ ಬೆಂಗಳೂರಿನಲ್ಲಿ ಇದೆ. ಕಾವೇರಿ ಜಂಕ್ಷನ್‌ನ ಪ್ರೆಸ್ಟೀಜ್ ಅಪಾರ್ಟ್ಮೆಂಟ್‌ನಲ್ಲಿ ಫ್ಲಾಟ್ ಇದೆ. ಹೆಚ್‌ಎಸ್‌ಆರ್ ಲೇಔಟ್‌ನ ಐಪಿಎಸ್ ಕ್ವಾಟ್ರಸ್‌ನಲ್ಲಿ ಮನೆ ಇವೆ. ಮನೆಯಲ್ಲಿ ಗಲಾಟೆ ಆದಾಗ ಪ್ರೆಸ್ಟೀಜ್ ಅಪಾರ್ಟ್ಮೆಂಟ್‌ನಲ್ಲಿ ಓಂ ಪ್ರಕಾಶ್ ವಾಸ ಇರುತ್ತಿದ್ದರು.

ದಾಂಡೇಲಿಯ ಆಸ್ತಿ ವಿಚಾರಕ್ಕೆ ಐಪಿಎಸ್ ಅಧಿಕಾರಿಯ ಹತ್ಯೆ ಆಗಿದೆಯಾ ಎಂಬ ಅನುಮಾನ ಪೊಲೀಸರಲ್ಲಿ ಮೂಡಿದೆ. ತಂಗಿಯರ ಹೆಸರಿಗೆ ಓಂ ಪ್ರಕಾಶ್ ಪ್ರಾಪರ್ಟಿ ಮಾಡಿದ್ದರು. ತಂಗಿಯರ ಹೆಸರಿಗೆ ಯಾಕೆ ಆಸ್ತಿ ಮಾಡಿದ್ದೀರಾ ಅನ್ನೋ ವಿಚಾರಕ್ಕೆ ಹಲವು ದಿನಗಳಿಂದ ಗಲಾಟೆ ನಡೆದಿತ್ತು ಎನ್ನಲಾಗಿದೆ. ತಂಗಿಯರ ವಿಚಾರ ಮಾತಾಡಬೇಡ ಎಂದು ಈ ಹಿಂದೆ ಪತ್ನಿಗೆ ಎಚ್ಚರಿಕೆ ಕೊಟ್ಟಿದ್ದರು ಎನ್ನಲಾಗಿದೆ.

ಆಸ್ತಿ ವಿಚಾರಕ್ಕೆ ಪತ್ನಿ ಜೊತೆ ಪದೇ ಪದೆ ಜಗಳ ಆಗುತ್ತಿತ್ತಾ ಎಂಬ ಪ್ರಶ್ನೆ ಮೂಡಿದೆ. ಕೊಲೆ ಪ್ರಕರಣ ಸಂಬಂಧ ಓಂ ಪ್ರಕಾಶ್ ಪತ್ನಿ ಹಾಗೂ ಪುತ್ರಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Share This Article