ಬೆಂಗಳೂರು: ನಾನು ಮಹಿಳೆಗೆ ಅಪಮಾನ ಮಾಡಿದರೆ ಈ ಕ್ಷಣವೇ ರಾಜೀನಾಮೆ ನೀಡುತ್ತೇನೆ. ಹೆಣ್ಣುಮಗಳಿಗೆ ನೋವಾಗಿದ್ದರೆ ಪದ ವಾಪಸ್ ತೆಗೆದುಕೊಳ್ಳುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಕೆಯೇ ಮುಖ್ಯಮಂತ್ರಿ ನಾಲಾಯಕ್ ಅಂದು ರಾಜ್ಯಕ್ಕೆ ಅವಮಾನ ಮಾಡಿದ್ದಾರೆ. ಕನ್ನಡಸೌಧ ಗೇಟ್‍ಗೆ ಕಲ್ಲಲ್ಲಿ ಹೊಡೆದರೆ ಸುಮ್ಮನಿರಬೇಕೇ? ಅದಕ್ಕೆ ಕ್ರಮ ತೆಗೆದುಕೊಂಡಿದ್ದೇವೆ ಎಂದು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.
Advertisement
Advertisement
ನಾನು ರೈತ ಮಹಿಳೆಯಗೆ ಅವಹೇಳನಕಾರಿಯಾಗಿ ಮಾತನಾಡಿಲ್ಲ. ಮಹಿಳೆಯರಿಗೆ ಅಪಮಾನ ಮಾಡಿದೆ ಎಂದು ಹೇಳಿದರೆ ಒಂದು ಕ್ಷಣ ನಾನು ಈ ಸ್ಥಾನದಲ್ಲಿ ಇರುವುದಿಲ್ಲ. ನನ್ನ ವೈಯಕ್ತಿಕ ಜೀವನದ ಬಗ್ಗೆ ಚರ್ಚೆಗೂ ನಾನು ರೆಡಿ. ಒಳ್ಳೆ ಕೆಲಸ ಮಾಡುವುದು ತಪ್ಪೇ? ನಾನು ಏನು ತಪ್ಪು ಮಾಡಿದ್ದೇನೆ? ಆ ಮಹಿಳೆಗೆ ನೋವಾಗಿದ್ದರೆ ಆ ಪದವನ್ನು ವಾಪಸ್ ತೆಗೆದುಕೊಳ್ಳುತ್ತೇನೆ ಎಂದರು.
Advertisement
ಪೊಲೀಸರಿಗಿಂತ ಮಾಧ್ಯಮಗಳೇ ಮೊದಲು ಹೋಗ್ತಿರಾ ಅಂದ್ರೆ ಅರ್ಥ ಏನು? ನಾಲಾಯಕ್ ಮುಖ್ಯಮಂತ್ರಿ ಅಂದ್ರೆ ನಾನು ಸುಮ್ಮನೆ ಇರಬೇಕೇ? ಅದಕ್ಕೆ ಆಕೆಯನ್ನ ಬಂಧಿಸಲು ನಾನೇ ಹೇಳಿದೆ. ಗುಪ್ತಚರ ಇಲಾಖೆಯ ವೈಫಲ್ಯ ಆಗಿಲ್ಲ. ಕೆಲ ಮಾಧ್ಯಮಗಳ ಪ್ರಾಯೋಜಿತ ಪ್ರತಿಭಟನೆ ಇದು ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ ಎಂದರು.
Advertisement
ಮುಖ್ಯಮಂತ್ರಿಯಾಗಿ ನಾನು ಟಿಎ, ಡಿಎ ತೆಗೆದುಕೊಂಡಿಲ್ಲ. ಸರ್ಕಾರಿ ಬಂಗಲೆಯನ್ನು ನಾನು ಬಳಸುತ್ತಿಲ್ಲ. ಪೆಟ್ರೋಲ್ ಬಿಲ್ ತಗೊಂಡಿಲ್ಲ. ನಾನು ನಾಡಿನ ಜನರನ್ನು ರಕ್ಷಿಸಲು ಇಲ್ಲಿ ಕುಳಿತಿದ್ದೇನೆ. ನನ್ನ ಮೇಲೆ ಯಾಕೆ ಅನುಮಾನ, ಯಾಕೆ ಆಕ್ರೋಶ? 45 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದಕ್ಕಾ ಎಂದು ಪ್ರಶ್ನಿಸಿದರು.
ಪ್ರತಿಭಟನೆ ವಾಪಸ್: ಸೋಮವಾರ ಫ್ರೀಡಂ ಪಾರ್ಕ್‍ನಲ್ಲಿ ರೈತರು ನೆಲದಮೇಲೆ ಉರುಳಾಡಿ ಆಕ್ರೋಶ ವ್ಯಕ್ತಪಡಿಸಿದರು. ಅಹೋರಾತ್ರಿ ಧರಣಿಗೂ ಮುಂದಾಗಿದ್ದರು. ಆದರೆ ಮಧ್ಯಾಹ್ನ 4 ಗಂಟೆ ಹೊತ್ತಿಗೆ ಸರ್ಕಾರಕ್ಕೆ 15 ದಿನಗಳ ಗಡುವು ನೀಡಿದ ರೈತರು ಪ್ರತಿಭಟನೆ ಹಿಂಪಡೆದರು. ಸಿಎಂ ನಮ್ಮನ್ನ ಭೇಟಿಯಾಗದೇ ಇದ್ದರೂ ಪರವಾಗಿಲ್ಲ. ನಮ್ಮ 29 ಬೇಡಿಕೆಗಳ ಪಟ್ಟಿಕೊಟ್ಟಿದ್ದೇವೆ. 15 ದಿನಗಳೊಳಗೆ ಈಡೇರಿಸದಿದ್ದರೆ ಮತ್ತೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಡೆಡ್‍ಲೈನ್ ನೀಡಿದರು.
https://www.youtube.com/watch?v=Uy_ZDY02jOo
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews