-ಸಿ.ಟಿ ರವಿ ಬಹಿರಂಗ ಕ್ಷಮೆ ಕೇಳಿದ್ರೆ ಎಲ್ಲಾ ಮುಗಿಯುತ್ತೆ ಎಂದ ಸಚಿವ
ಬೆಂಗಳೂರು: ಬಿಜೆಪಿ ಸಂಸ್ಕೃತಿ, ಸಿಟಿ ರವಿ (CT Ravi) ಹೇಳಿಕೆ ಘೋರವಾದ ಅಪರಾಧ. ಯಾವುದೇ ಹೆಣ್ಣು ಮಗಳು ಊಹಿಸಿಕೊಂಡು ಈ ರೀತಿಯ ಆರೋಪ ಮಾಡಲು ಸಾಧ್ಯವಿಲ್ಲ ಎಂದು ಸಚಿವ ಎಂಬಿ ಪಾಟೀಲ್ (MB Patil) ಕಿಡಿಕಾರಿದ್ದಾರೆ.
Advertisement
ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ವಿರುದ್ಧ ಸಿ.ಟಿ ರವಿ ಪದ ಬಳಕೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದ ಬಗ್ಗೆ ಸಂಸ್ಕೃತಿ ಬಗ್ಗೆ ಪಾಠ ಹೇಳುತ್ತಾರೆ. ಇದು ಅವರ ಸಂಸ್ಕೃತಿ. ಪ್ರವೋಕ್ ಮಾಡಿದ್ದು ಇರಲಿ ಆದರೆ ಆ ಪದ ಬಳಕೆ ಮಾಡಿದ್ದು ತಪ್ಪು. ಲಕ್ಷ್ಮಿ ಹೆಬ್ಬಾಳ್ಕರ್ ಇರಲಿ ಅಥವ ಯಾವ ಹೆಣ್ಮಗಳು ಇರಲಿ ಷಡ್ಯಂತ್ರ ಮಾಡಿ ಹೇಳಿಕೆ ಕೊಡಲು ಆಗಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಸದನದೊಳಗೆ ನಡೆಯುವ ಘಟನೆಗಳಿಗೆ ಪೊಲೀಸರು ಹಸ್ತಕ್ಷೇಪ ಮಾಡುವಂತಿಲ್ಲ: ಬಸವರಾಜ ಹೊರಟ್ಟಿ
Advertisement
Advertisement
ಪ್ರಹ್ಲಾದ್ ಜೋಷಿ ಫೇಕ್ ಎನ್‌ಕೌಂಟರ್ ಆರೋಪ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಯಾರನ್ನು ಎನ್‌ಕೌಂಟರ್ ಮಾಡುವುದು? ಅದು ಫೇಕ್ ಎನ್‌ಕೌಂಟರ್ ಅಲ್ಲ, ಫೇಕ್ ಕೌಂಟರ್. ಅವರ ತಪ್ಪು ಮುಚ್ಚಿಕೊಳ್ಳೋಕೆ ಫೇಕ್ ಎನ್‌ಕೌಂಟರ್ ಎಂಬ ಫೇಕ್ ಕೌಂಟರ್ ಮಾಡುತ್ತಿದ್ದಾರೆ ಅಷ್ಟೇ ಎಂದು ಗುಡುಗಿದರು. ಇದನ್ನೂ ಓದಿ: ವೈಟ್ ಹೌಸ್ AI ವಿಭಾಗದ ನೀತಿ ಸಲಹೆಗಾರನಾಗಿ ಭಾರತ ಮೂಲದ ಶ್ರೀರಾಮ್ ಕೃಷ್ಣನ್ ನೇಮಕ
Advertisement
ಅವರು ನೀಡಿದ ಹೇಳಿಕೆ ಮುಚ್ಚಿ ಹಾಕಲು ಈ ರೀತಿಯ ಹೇಳಿಕೆ ನೀಡಿದ್ದಾರೆ. ಬಳಸಿದ ಪದಕ್ಕೆ ಪ್ರತಿಯಾಗಿ ಇದೆಲ್ಲ ಸೃಷ್ಟಿ ಮಾಡುತ್ತಿದ್ದಾರೆ. ಸಿ.ಟಿ ರವಿ ಬಹಿರಂಗ ಕ್ಷಮೆ ಕೇಳಿದರೆ ಎಲ್ಲಾ ಮುಗಿಯುತ್ತದೆ ಎಂದರು. ಅವರನ್ನು ರಾತ್ರಿ ಎಲ್ಲಾ ಸುತ್ತಿಸಿದ ವಿಚಾರದ ಕುರಿತು ಮಾತನಾಡಿ, ಅದರ ಬಗ್ಗೆ ತನಿಖೆ ನಡೆಯುತ್ತಿದೆ. ಗೃಹ ಸಚಿವರು ಅದರ ಬಗ್ಗೆ ಮಾತನಾಡುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಚಿನ್ನದಂಗಡಿ ಮಾಲೀಕರಿಗೆ ಮಹಿಳೆಯಿಂದ ವಂಚನೆ – ಇಂದು ವರ್ತೂರ್ ಪ್ರಕಾಶ್ ವಿಚಾರಣೆಗೆ ಹಾಜರು