ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ (Diwali Festival) ಬಂದ್ರೆ ಎಲ್ಲೆಲ್ಲೂ ಪಟಾಕಿ (Firework) ಸದ್ದಿನದ್ದೇ ಆರ್ಭಟ. ಅದರಲ್ಲೂ ಈ ಬಾರಿ ಅತ್ತಿಬೆಲೆಯ ಬಾಲಾಜಿ ಕ್ರ‍್ಯಾಕರ್ಸ್‌ನ ಬೆಂಕಿ ಅವಘಡದಿಂದ ಬೆಂಗಳೂರಿನಲ್ಲಿ ಪ್ರಮುಖ ಏರಿಯಾಗಳಲ್ಲಿ ಪಟಾಕಿ ಬ್ಯಾನ್ ಮಾಡುವ ಚರ್ಚೆಗಳು ನಡೆಯುತ್ತಿವೆ.
Advertisement
ಶನಿವಾರ ಅತ್ತಿಬೆಲೆಯ ಬಾಲಾಜಿ ಕ್ರ‍್ಯಾಕರ್ಸ್ಗೆ ಬೆಂಕಿ ಬಿದ್ದು 14 ಮಂದಿ ಸಜೀವ ದಹನವಾಗಿದ್ರು. ಪಟಾಕಿ ಅಂಗಡಿಗಳು ಸುರಕ್ಷತ ನಿಯಮ ಪಾಲಿಸದಿರುವ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ನಿಯಮಗಳನ್ನ ಗಾಳಿಗೆ ತೂರಿರುವ ಎಲ್ಲಾ ಅಂಗಡಿಗಳನ್ನ ತಪಾಸಣೆಗೊಳಪಡಿಸುವಂತೆ ಜಿಲ್ಲಾಧಿಕಾರಿ ಆದೇಶ ಕೂಡ ನೀಡಿದ್ದರು. ಇದೀಗ ತಹಶೀಲ್ದಾರರು ಪಟಾಕಿ ಗೊಡೌನ್‌ಗಳ ಮೇಲೆ ರೇಡ್ ನಡೆಸುತ್ತಿದ್ದು, ಡಿಸಿ, ಎಸಿ ತಹಶೀಲ್ದಾರ್ ಗಳ ಸಭೆಯಲ್ಲಿ ಮಹತ್ವದ ವಿಷಯವನ್ನ ಚರ್ಚಿಸಲಾಗಿದೆ. ಇದನ್ನೂ ಓದಿ: ವಿಶ್ವ ಹಿಂದೂ ಪರಿಷತ್‍ಗೆ ತುಂಬಿತು 60 ವರ್ಷ- ಉಡುಪಿ ಶ್ರೀಕೃಷ್ಣನ ನಗರ ಕೇಸರಿಮಯ
Advertisement
Advertisement
ಈ ಬಾರಿ ಬೆಂಗಳೂರಲ್ಲಿ ಪಟಾಕಿ ಬ್ಯಾನ್ ಮಾಡಬೇಕು. ಆ ಮೂಲಕ ಮುಂಜಾಗೃತಾ ಕ್ರಮಗಳನ್ನ ಕೈಗೊಳ್ಳದ, ನಿಯಮ ಪಾಲಿಸದ ಪಟಾಕಿ ಅಂಗಡಿಗಳ ಮಾಲೀಕರಿಗೆ ಬಿಸಿ ಮುಟ್ಟಿಸಬೇಕು ಅನ್ನೋ ನಿಟ್ಟಿನಲ್ಲಿ ಜಿಲ್ಲಾಡಳಿತದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಹಮಾಸ್ ಉಗ್ರರ ನಡೆಗೆ ಮೋದಿ ಖಂಡನೆ- ಇಸ್ರೇಲ್ ಪರ ನಿಂತ ಭಾರತ
Advertisement
ಒಂದು ವೇಳೆ ಬೆಂಗಳೂರಿನಾದ್ಯಂತ ಪಟಾಕಿ ನಿಷೇಧಿಸುವುದು ಅಸಾಧ್ಯವೆನಿಸಿದರೆ, ಪ್ರಮುಖ ಬಡಾವಣೆಗಳಲ್ಲಾದರೂ ಪಟಾಕಿ ನಿಷೇಧಿಸಬೇಕು. ಅದೂ ಸಾಧ್ಯವಾಗದಿದ್ದಲ್ಲಿ, ಕಟ್ಟು ನಿಟ್ಟಿನ ನಿಯಮಗಳೊಂದಿಗೆ ದೀಪಾವಳಿ ಆಚರಣೆಗೆ ಅನುವು ಮಾಡಿಕೊಡಬೇಕು ಎಂಬ ನಿರ್ಧಾರದ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ನ್ಯೂಜಿಲೆಂಡ್‌ಗೆ 99 ರನ್‌ಗಳ ಭರ್ಜರಿ ಜಯ – ಡಚ್ಚರ ಗೇಮ್ ಪ್ಲ್ಯಾನ್‌ಗೆ ಅಭಿಮಾನಿಗಳ ಮೆಚ್ಚುಗೆ
Web Stories