ನವದೆಹಲಿ: ವಿದೇಶಗಳಲ್ಲಿ ಮದುವೆ ಸಮಾರಂಭಗಳನ್ನು ಆಯೋಜಿಸಬೇಡಿ ಎಂದು ಭಾರತೀಯ ಜೋಡಿಗಳಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸಲಹೆ ನೀಡಿದ್ದಾರೆ.
ಮನ್ ಕಿ ಬಾತ್ (Mann Ki Baat) ಕಾರ್ಯಕ್ರಮದಲ್ಲಿ ಇಂದು (ಭಾನುವಾರ) ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ, ಮದುವೆಗಳಿಗೆ ಶಾಪಿಂಗ್ ಮಾಡುವಾಗ, ಜನರು ಭಾರತದಲ್ಲಿ ತಯಾರಿಸಿದ ಉತ್ಪನ್ನಗಳಿಗೆ ಮಾತ್ರ ಪ್ರಾಮುಖ್ಯತೆ ನೀಡಬೇಕು ಎಂದು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಮೋದಿಯ ಮಾಜಿ ಸ್ನೇಹಿತ ಎಂದಿರೋ ರಾಹುಲ್‍ಗೆ ಓವೈಸಿ ತಿರುಗೇಟು
Advertisement
Advertisement
ಶ್ರೀಮಂತ ಕುಟುಂಬಗಳು ವಿದೇಶದಲ್ಲಿ ಮದುವೆಗಳನ್ನು ನಡೆಸುವ ಪ್ರವೃತ್ತಿಯಿಂದ ದೇಶಕ್ಕೆ ತುಂಬಾ ಸಮಸ್ಯೆಯಾಗುತ್ತಿದೆ. ದೇಶದ ಹಣ ಹೊರಗಡೆ ಹೋಗದಂತೆ ಭಾರತದ ನೆಲದಲ್ಲಿ ಇಂತಹ ಸಮಾರಂಭಗಳನ್ನು ನಡೆಸುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.
Advertisement
ಈಗ ಮದುವೆ ಸೀಸನ್ ಕೂಡ ಶುರುವಾಗಿದೆ. ಈ ಮದುವೆ ಸೀಸನ್‌ನಲ್ಲಿ ಸುಮಾರು 5 ಲಕ್ಷ ಕೋಟಿ ರೂ. ವ್ಯಾಪಾರ ಆಗಬಹುದು ಎಂದು ಕೆಲವು ವ್ಯಾಪಾರ ಸಂಸ್ಥೆಗಳು ಅಂದಾಜಿಸುತ್ತವೆ. ಮದುವೆಗೆ ಶಾಪಿಂಗ್ ಮಾಡುವಾಗ ನೀವೆಲ್ಲರೂ ಭಾರತದಲ್ಲಿ ತಯಾರಾದ ಉತ್ಪನ್ನಗಳಿಗೆ ಮಾತ್ರ ಪ್ರಾಮುಖ್ಯತೆ ನೀಡಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ ಪ್ರತಿಭಟನಾಕಾರರ ದಿಗ್ಬಂಧನ- ಅಧಿಕಾರಿಯ ಅಮಾನತು
Advertisement
ಹೌದು, ಮದುವೆಯ ವಿಷಯ ಬಂದಾಗಿನಿಂದ ಒಂದು ವಿಷಯವು ನನ್ನನ್ನು ಬಹಳ ಸಮಯದಿಂದ ಕಾಡುತ್ತಿದೆ. ಮನಸ್ಸಿನ ನೋವನ್ನು ನನ್ನ ಕುಟುಂಬದವರನ್ನು ಬಿಟ್ಟು ಬೇರೆ ಯಾರ ಹತ್ತಿರ ಹೇಳಿಕೊಳ್ಳಲಿ? ಸುಮ್ಮನೆ ಯೋಚಿಸಿ.. ಇತ್ತೀಚಿನ ದಿನಗಳಲ್ಲಿ ಕೆಲವು ಕುಟುಂಬಗಳು ವಿದೇಶಕ್ಕೆ ಹೋಗಿ ಮದುವೆಗಳನ್ನು ನಡೆಸುವ ಹೊಸ ಪರಿಪಾಠ ಶುರುಮಾಡಿಕೊಂಡಿವೆ. ಇದು ಅಗತ್ಯವೇ ಎಂದು ಪ್ರಶ್ನಿಸಿದ್ದಾರೆ.
ಭಾರತದ ನೆಲದಲ್ಲಿ ಜನರು ಮದುವೆ ಸಮಾರಂಭ ಆಯೋಜಿಸಿದರೆ, ದೇಶದ ಹಣವು ದೇಶದಲ್ಲೇ ಉಳಿಯುತ್ತದೆ. ಇಂತಹ ಮದುವೆಗಳಲ್ಲಿ ದೇಶದ ಜನರಿಗೆ ಒಂದಿಷ್ಟು ಸೇವೆ ಸಲ್ಲಿಸಲು ಅವಕಾಶ ಸಿಗುತ್ತದೆ ಎಂದು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಶಕುಂತಲೆ ಪ್ರೇಮ ಬಯಸಿ ಹೊರಟ ʻದುಷ್ಯಂತʼನ ಬದಕು ಕೊಲೆಯಲ್ಲಿ ಅಂತ್ಯ – ಡೇಟಿಂಗ್ ಆ್ಯಪ್ ಪ್ರಿಯತಮೆಗೆ ಜೀವಾವಧಿ ಶಿಕ್ಷೆ
ಬಡವರು ಕೂಡ ತಮ್ಮ ಮಕ್ಕಳಿಗೆ ಅವರ ಮದುವೆಯ ಬಗ್ಗೆ ಹೇಳುತ್ತಾರೆ. ‘ವೋಕಲ್ ಫಾರ್ ಲೋಕಲ್’ನ ಈ ಮಿಷನ್ ಅನ್ನು ನೀವು ವಿಸ್ತರಿಸಬಹುದೇ? ನಮ್ಮ ದೇಶದಲ್ಲಿಯೇ ಇಂತಹ ಮದುವೆ ಸಮಾರಂಭಗಳನ್ನು ಏಕೆ ನಡೆಸಬಾರದು? ನೀವು ಬಯಸಿದಂತಹ ವ್ಯವಸ್ಥೆ ಎಲ್ಲಾ ಕಡೆ ಇಲ್ಲದಿರಬಹುದು. ಆದರೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದರೆ ವ್ಯವಸ್ಥೆಗಳೂ ಅಭಿವೃದ್ಧಿ ಹೊಂದುತ್ತವೆ. ಇದು ಬಹಳ ದೊಡ್ಡ ಕುಟುಂಬಗಳಿಗೆ ಸಂಬಂಧಿಸಿದ ವಿಷಯವಾಗಿದೆ. ನನ್ನ ಈ ನೋವು ಖಂಡಿತವಾಗಿಯೂ ಆ ದೊಡ್ಡ ಕುಟುಂಬಗಳನ್ನು ತಲುಪುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ ಪ್ರಧಾನಿ.