ಚಿತ್ರದುರ್ಗ: ನಿಮ್ಮದಲ್ಲದ ಸೈಟ್‌ಗೆ ಪರಿಹಾರ ಕೇಳೋದು ಆತ್ಮಸಾಕ್ಷಿಯಾ ಎಂದು ಬಿಜೆಪಿ ಸಂಸದ ಗೋವಿಂದ ಕಾರಜೋಳ (Govinda Karajola) ಸಿಎಂ ಸಿದ್ದರಾಮಯ್ಯಗೆ (Siddaramaiah) ಟಾಂಗ್ ಕೊಟ್ಟಿದ್ದಾರೆ.
ಚಿತ್ರದುರ್ಗದಲ್ಲಿ (Chitradurga) ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಆತ್ಮಸಾಕ್ಷಿಗೆ ಅನುಗುಣ ನಡೆಯುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಮುಡಾ ಹಗರಣದಲ್ಲಿ (MUDA Scam) ಸಿಲುಕಿರುವ ಸಿಎಂ ಸಿದ್ದರಾಮಯ್ಯ ಆತ್ಮಸಾಕ್ಷಿ ಬಗ್ಗೆ ಮಾತನಾಡಿದ್ದಾರೆ. ಅಕ್ರಮವಾಗಿ ಬೇನಾಮಿ ಆಸ್ತಿ ಪಡೆದುಕೊಳ್ಳುವುದು ಆತ್ಮಸಾಕ್ಷಿಯಾ? ಅಲ್ಲದೇ, ಈ ಕೇಸ್ ವಿಚಾರದಲ್ಲಿ ಕೋರ್ಟ್ ಆದೇಶ ನೀಡಿದ ದಿನವೇ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಿತ್ತು ಎಂದರು. ಇದನ್ನೂ ಓದಿ: ಸಿಎಂ ಪತ್ನಿ ಸೈಟ್ ಮರಳಿಸಿದ್ದು ತಪ್ಪೇ? ಈ ಕೇಸ್‌ನಲ್ಲಿ ತಪ್ಪೇನಿದೆ: ತಿಮ್ಮಾಪುರ್ ಪ್ರಶ್ನೆ
ಈಗಲೂ ಕಾಲ ಮಿಂಚಿಲ್ಲ. ಸಿಎಂ ಸ್ಥಾನಕ್ಕೆ ಅವರು ರಾಜೀನಾಮೆ ನೀಡಲಿ. ಹಾಗೆಯೇ ಸಿಎಂ ಸಿದ್ದರಾಮಯ್ಯ ಅಷ್ಟೊಂದು ತಪ್ಪು ಮಾಡಿಲ್ಲವೆಂಬ ಖಚಿತತೆ ಇದ್ದಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಲಿ. ಆ ಪ್ರಕರಣದಲ್ಲಿ ಒಂದು ವೇಳೆ ಕ್ಲೀನ್ ಚಿಟ್ ಸಿಕ್ಕರೆ ಮತ್ತೆ ಅವರೇ ಸಿಎಂ ಆಗಲಿ ಎಂದರು. ಈ ವೇಳೆ ಕೇಂದ್ರ ಸಚಿವ ಸೋಮಣ್ಣ, ಎಂಎಲ್‌ಸಿ ನವೀನ್ ಉಪಸ್ಥಿತರಿದ್ದರು. ಇದನ್ನೂ ಓದಿ: ಯತ್ನಾಳ್ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು: ಮಾಜಿ ಸಂಸದ ಮುನಿಸ್ವಾಮಿ