ಭಾರತದಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾದ ನಂತರ, ಒಂದೇ ಭಾಷೆ ಮಾತನಾಡುವವರೆಲ್ಲರೂ ಒಂದೇ ರಾಜ್ಯದವರಾದರು. ಆದರೂ ಅವರೆಲ್ಲರ ಮಾತಾಡುವ ಶೈಲಿ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿವೆ. ಭಾಷೆ ಮಾತ್ರವಲ್ಲ ಉಡುಗೆ ತೊಡುಗೆಗಳು ಬೇರೆಯಾಗಿವೆ. ಊಟ, ಅಭಿರುಚಿ, ನಡವಳಿಕೆ ಹೀಗೆ ಎಲ್ಲವೂ ಭಿನ್ನ. ಹೀಗೆಯೇ ವಾಹನ ಪ್ರಪಂಚವೂ ಇದರಿಂದ ಹೊರತಾಗಿಲ್ಲ. ವಾಹನ ಪ್ರಪಂಚದಲ್ಲಿ ಬಗೆಬಗೆಯ ಕಂಪನಿಯ ಕಾರುಗಳು, ಬೈಕುಗಳು, ಜಿಪ್ಸಿಗಳು ಹೀಗೆ ಬೇರೆ ಬೇರೆ ಕೆಲಸಗಳಿಗೆ ಭಿನ್ನ ಭಿನ್ನ ವಾಹನಗಳು ಮಾರುಕಟ್ಟೆಯಲ್ಲಿವೆ. ಆಯ್ಕೆಗಳು ಗ್ರಾಹಕನ ಕೈಯಲ್ಲಿದೆ. ಹೀಗಾಗಿಯೇ ಭಾರತದ ಕೆಲವು ನಗರಗಳಲ್ಲಿ ಟ್ರಾಫಿಕ್ ಸಮಸ್ಯೆ (Traffic Problem) ಹೆಚ್ಚಾಗಿದೆ. ಏಕಕಾಲಕ್ಕೆ ರಸ್ತೆಗಿಳಿಯುವ ಸಾವಿರಾರು ವಾಹನಗಳಿಂದ ಶಬ್ಧ ಮಾಲಿನ್ಯ, ವಾಯು ಮಾಲಿನ ಉಂಟಾಗುತ್ತಿರುವುದು ಇದಕ್ಕೆ ನಿರ್ದಶನ.
Advertisement
ಹೀಗೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿರುವ ಟಾಪ್-10 ನಗರಗಳಲ್ಲಿ ರಾಷ್ಟ್ರ ರಾಜಧಾನಿಯೂ ಪ್ರಮುಖವಾಗಿದೆ. ಆದ್ರೆ ಹೆಚ್ಚುತ್ತಿರುವ ವಾಹನ ದಟ್ಟಣೆಯನ್ನು ನಿಯಂತ್ರಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು, ನಗರದಿಂದ ಹೊರಗು-ಒಳಗಿನ ಸಂಪರ್ಕ ಮತ್ತಷ್ಟು ಸುಲಭವಾಗಿಸುವ ನಿಟ್ಟಿನಲ್ಲಿ ದೆಹಲಿ ಸರ್ಕಾರ ಹೊಸ ನಿಯಮ ಜಾರಿಗೆ ತರುವುದಕ್ಕೆ ಮುಂದಾಗಿದೆ. ಅದೇನೆಂದರೆ ಸಂಚಾರದಟ್ಟಣೆ ಮಿತಿಮೀರಿದ ಸಮಯದಲ್ಲಿ ನಿರ್ದಿಷ್ಟ ರಸ್ತೆ ಬಳಸುವುದಕ್ಕಾಗಿ ವಾಹನಗಳಿಗೆ ಶುಲ್ಕ ವಿಧಿಸುವುದು. ಈಗಾಗಲೇ ನ್ಯೂಯಾರ್ಕ್ (New York) ಸೇರಿದಂತೆ ಅನೇಕ ದೇಶದ ಪ್ರಮುಖ ನಗರಗಳಲ್ಲಿ ಈ ಯೋಜನೆಯನ್ನು ಪರಿಚಯಿಸಲಾಗಿದೆ. ಈ ಯೋಜನೆಯನ್ನ ಭಾರತಕ್ಕೂ ಪರಿಚಯಿಸುವ ಯೋಜನಾ ಪ್ರಕ್ರಿಯೆ ನಡೆಯುತ್ತಿದೆ. ಇದರ ಮೊದಲ ಹಂತವಾಗಿ ದೆಹಲಿಯಲ್ಲಿ ಯೋಜನೆ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ..
Advertisement
Advertisement
ದಟ್ಟಣೆ ಬೆಲೆ ನಿಗದಿ ಅಂದ್ರೆ ಏನು?
ʻದಟ್ಟಣೆ ಬೆಲೆ ನಿಗದಿʼ (Congestion Pricing) ಅನ್ನೋದು ಎಲೆಕ್ಟ್ರಾನಿಕ್ ಟೋಲಿಂಗ್ ವ್ಯವಸ್ಥೆಯಾಗಿದೆ. ದಟ್ಟಣೆ ಸಮಯದಲ್ಲಿ ನಿರ್ದಿಷ್ಟ ರಸ್ತೆಯನ್ನು ಬಳಸಲು ಶುಲ್ಕ ವಿಧಿಸಲಾಗುತ್ತದೆ. ಟ್ರಾಫಿಕ್ ದಟ್ಟಣೆ ಶುರುವಾಗುವ ಪಾಯಿಂಟ್‌ನಿಂದ ಈ ರಸ್ತೆಯಲ್ಲಿ ಸಂಚರಿಸಲು ಇ-ಝಡ್‌ಪಾಸ್‌ಗಳ ಮೂಲಕ ಸುಂಕ ಸಂಗ್ರಹಿಸಲಾಗುತ್ತದೆ. ಪಾಸ್ ಇಲ್ಲದ ಚಾಲಕರು ಇ-ಮೇಲ್ ಮೂಲಕ ಬಿಲ್ ಸ್ವೀಕರಿಸಿ ಪಾವತಿ ಮಾಡಬಹುದು. ನ್ಯೂಯಾರ್ಕ್‌ನ ಮ್ಯಾನ್‌ಹ್ಯಾಟನ್ ನಗರದಲ್ಲಿ ಮೊದಲು ಟೋಲ್ ಶುಲ್ಕ ಹೆಚ್ಚಾಗಿ ವಿಧಿಸುತ್ತಿದ್ದರಿಂದ ದಟ್ಟಣೆ ಬೆಲೆ ನಿಗದಿಗೆ ವಿನಾಯ್ತಿ ನೀಡಲಾಗಿತ್ತು. ಆದ್ರೆ ಕಳೆದ ನವೆಂಬರ್ ತಿಂಗಳಲ್ಲಿ ಟೋಲ್‌ದರದಲ್ಲಿ ಕೊಂಚ ಕಡಿತಗೊಳಿಸಿ ದಟ್ಟಣೆ ಬೆಲೆ ನಿಗದಿ ಯೋಜನೆಯನ್ನ ಮರುಪರಿಚಯಿಸಲಾಗಿದೆ ಎಂದು ವರದಿಗಳು ಹೇಳಿವೆ. ಸಂಚಾರ ದಟ್ಟಣೆ ಕಡಿಮೆ ಮಾಡುವುದು ಮಾತ್ರವಲ್ಲದೇ, ಉತ್ತಮ ಪರಿಸರ ರೂಪಿಸುವುದು, ಸುಗಮ ಸಂಚಾರ ಕಲ್ಪಿಸುವ ಉದ್ದೇಶವನ್ನೂ ಈ ಯೋಜನೆ ಹೊಂದಿದೆ.
Advertisement
2023ರಲ್ಲಿ ಮ್ಯಾನ್‌ಹ್ಯಾಟನ್ ನಗರವು ವಿಶ್ವದಲ್ಲೇ ಅತಿಹೆಚ್ಚು ಸಂಚಾರ ದಟ್ಟಣೆ ಉಂಟಾಗುವ ನಗರವಾಗಿತ್ತು. ಹಾಗಾಗಿ ಈ ಯೋಜನೆಯನ್ನ ಪರಿಚಯಿಸಲಾಯಿತು. ಸದ್ಯ ಮ್ಯಾನ್‌ಹ್ಯಾಟನ್‌ನಲ್ಲಿರುವ ಪ್ರಮುಖ ವ್ಯಾಪಾರ ಕೇಂದ್ರವಿರುವ ನಗರ ಪ್ರವೇಶಿಸಬೇಕೆಂದೆರೆ ಚಾಲಕರು ಗರಿಷ್ಠ 9 ಡಾಲರ್ (775 ರೂ.) ಪಾವತಿಸಬೇಕು.
15 ಲಕ್ಷ ಕೋಟಿ ಆದಾಯದ ಗುರಿ ಏಕೆ?
ಇನ್ನೂ ಈ ಯೋಜನೆಯಿಂದ ನ್ಯೂಯಾರ್ಕ್ 2028ರ ವೇಳೆಗೆ 12 ಲಕ್ಷ ಕೋಟಿ ಹಾಗೂ 2031ರ ವೇಳೆಗೆ 15 ಲಕ್ಷ ಕೋಟಿ ರೂ. ಆದಾಯದ ಗುರಿಯನ್ನು ಹೊಂದಿದೆ. ಈ ಆದಾಯವನ್ನು ಬಸ್ ನಿಲ್ದಾಣ, ಸಬ್‌ವೇಗಳು, ರೈಲು ಮಾರ್ಗಗಳ ನವೀಕರಣಕ್ಕೆ ಬಳಸಲಾಗುತ್ತದೆ. ಅದಕ್ಕಾಗಿ ಮೋಟಾರ್ ಸೈಕಲ್‌ಗಳಿಗೂ ಪ್ರತಿದಿನಕ್ಕೆ 4.50 ಡಾಲರ್ (388 ರೂ.) ಶುಲ್ಕ ವಿಧಿಸಲಾಗುತ್ತಿದೆ. ಇನ್ನೂ ವಾರದ ಪ್ರಮುಖ ದಿನಗಳಲ್ಲಿ ರಾತ್ರಿ 9 ರಿಂದ ಬೆಳಗ್ಗೆ 5 ಮತ್ತು ವಾರಾಂತ್ಯದ ಪ್ರಮುಖ ಸಮಯದಲ್ಲಿ ರಾತ್ರಿ 9 ರಿಂದ ಬೆಳಗ್ಗೆ 9 ಗಂಟೆ ವರೆಗೆ ಸಂಚಾರಕ್ಕೆ ಅನುಮತಿ ಇರಲಿದೆ. ಟ್ಯಾಕ್ಸಿಗಳು, ಹಸಿರು ಕ್ಯಾಬ್‌ಗಳು ಮತ್ತು ಕಪ್ಪು ಕಾರುಗಳಿಗೆ ಪ್ರತಿ ಟ್ರಿಪ್‌ಗೆ ಶೇ.75 ರಷ್ಟು ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ರಾತ್ರಿ ಸಮಯದಲ್ಲಿ ಕಪ್ಪು ಕಾರುಗಳು ಕಡಿಮೆ ಗೋಚರತೆಯಿಂದಾಗಿ ಅಪಘಾತ ಸಂಭವಿಸುವ ಸಾಧ್ಯತೆಗಳಿರುತ್ತವೆ. ಈ ಕಾರಣಕ್ಕಾಗಿಯೇ ಕಪ್ಪು ಕಾರುಗಳಿಗೂ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.
ಇತರ ದೇಶಗಳಲ್ಲಿ ಈ ನಿಯಮ ಜಾರಿಯಲ್ಲಿದೆಯೇ?
ಇಟಲಿ, ಸ್ವೀಡನ್, ಸಿಂಗಾಪುರ್, ಇಂಗ್ಲೆಂಡ್ (ಲಂಡನ್) ಸೇರಿದಂತೆ ಅನೇಕ ದೇಶಗಳಲ್ಲಿ ಈ ನಿಯಮ ಜಾರಿಯಲ್ಲಿದ್ದು, ಕಾರು ಹಾಗೂ ಬೈಕ್‌ಗಳಿಗೆ ಪ್ರತ್ಯೇಕ ಶುಲ್ಕವನ್ನು ವಿಧಿಸಲಾಗುತ್ತಿದೆ. ಭಾರತದ ರೂಪಾಯಿ ಪ್ರಕಾರ 800 ರೂ. ಗಳಿಂದ 1,200 ರೂ. ವರೆಗೆ ಶುಲ್ಕ ವಿಧಿಸಲಾಗುತ್ತಿದೆ. ಕಾರುಗಳಿಗೆ ಪ್ರತಿ ಟ್ರಿಪ್ ಲೆಕ್ಕದಲ್ಲಿ ಹಾಗೂ ಬೈಕ್‌ಗಳಿಗೆ ದಿನದ ಲೆಕ್ಕದಲ್ಲಿ ಶುಲ್ಕ ವಿಧಿಸಲಾಗುತ್ತಿದೆ. ಲಂಡನ್‌ನಲ್ಲಿ 2003ರಲ್ಲೇ ಈ ವ್ಯವಸ್ಥೆಯನ್ನ ಪರಿಚಯಿಸಲಾಗಿದೆ ಅನ್ನೋದು ವಿಶೇಷ.
ದೆಹಲಿಯಲ್ಲಿ ಯಾವಾಗ ಜಾರಿ?
ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳಕ್ಕೆ ವಾಹನ ದಟ್ಟಣೆಯೂ ಒಂದು ಪ್ರಮುಖ ಕಾರಣವಾಗಿದೆ. ಹಾಗಾಗಿ ಈ ನಿಯಮ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿದೆ. ಈಗಾಗಲೇ ಪ್ರಸ್ತಾವನೆ ಮಂಡಿಸಲಾಗಿದ್ದು, ದೆಹಲಿ ಗಡಿಗಳಲ್ಲಿ ಅನೇಕ ರಸ್ತೆಗಳನ್ನ ಗುರುತಿಸಲಾಗಿದೆ. 2018ರಲ್ಲಿ ಅಂದಿನ ರಾಜ್ಯಪಾಲರಾಗಿದ್ದ ಅನಿಲ್ ಬೈಜಲ್ ಅವರೊಂದಿಗೂ ಈ ಪ್ರಸ್ತಾವನೆ ಬಗ್ಗೆ ಚರ್ಚಿಸಲಾಗಿತ್ತು. ಆಗ ಅವರು ನಿಯಮ ಅನುಷ್ಠಾನಕ್ಕೂ ಮುನ್ನ ಸಾರ್ವಜನಿಕ ಅಭಿಪ್ರಾಯಕ್ಕೆ ಬಿಡುವಂತೆ ಸೂಚಿಸಿದ್ದರು. ಇದೀಗ ಅದೇ ರೀತಿ ನಿಮಯ ಜಾರಿಗೊಳಿಸುವ ಚಿಂತನೆ ನಡೆಯುತ್ತಿದೆ. ಅದಕ್ಕಾಗಿ ಮೆಹ್ರೌಲಿ – ಗುರುಗ್ರಾಮ್ ಸೇರಿದಂತೆ 21 ರಸ್ತೆಗಳನ್ನು ಶುಲ್ಕ ಸಹಿತ ರಸ್ತೆಗಳನ್ನಾಗಿ ಮಾಡಲು ಚರ್ಚಿಸಲಾಗಿದೆ.
ಕರ್ನಾಟಕದಲ್ಲಿ ಈಗಾಗಲೇ ಫಾಸ್ಟ್‌ಟ್ಯಾಗ್ ವ್ಯವಸ್ಥೆ ಜಾರಿಯಲ್ಲಿರುವುದರಿಂದ ಈ ಯೋಜನೆಯ ಅನುಷ್ಠಾನದ ಅಗತ್ಯವಿಲ್ಲ. ಆದ್ರೆ ಮುಂದಿನ ದಿನಗಳಲ್ಲಿ ಬೆಂಗಳೂರು ನಗರಕ್ಕೆ ಅನ್ವಯವಾಗುವಂತೆ ಈ ಯೋಜನೆಯನ್ನು ಜಾರಿಗೊಳಿಸಬಹುದು ಅನ್ನೋದು ತಜ್ಞರ ಅಭಿಪ್ರಾಯ.