ಬೆಂಗಳೂರು: ಹನಿಟ್ರ‍್ಯಾಪ್ ಪ್ರಯತ್ನ ತನಿಖೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್‌ಗಾಗಿ ಕಾಯಬೇಕಿದೆ ಎನ್ನಲಾಗಿದೆ.
ಹನಿಟ್ರ‍್ಯಾಪ್ ಯತ್ನದ ಬಗ್ಗೆ ಸಚಿವ ರಾಜಣ್ಣ, ಗೃಹ ಸಚಿವ ಪರಮೇಶ್ವರ್‌ಗೆ (Parameshwar) ಮನವಿ ಪತ್ರ ಕೊಟ್ಟಿದ್ದಾರೆ. ಅದರ ಆಧಾರದ ಮೇಲೆ ಹೈಕಮಾಂಡ್ ಅನುಮತಿ ಪಡೆದು ತನಿಖೆಗೆ ವಹಿಸಬೇಕಾ, ಬೇಡ್ವಾ ಎಂಬ ಬಗ್ಗೆ ತೀರ್ಮಾನಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ – ಅತ್ಯಾಚಾರದ ಕುರಿತು ಅಸಂವೇದನಾಶೀಲ ಟೀಕೆ ಎಂದು ಖಂಡನೆ
ಹೈಕಮಾಂಡ್ ಗಮನಕ್ಕೆ ತಾರದೇ ಯಾವುದೇ ತೀರ್ಮಾನ ಬೇಡ ಎಂದಿರುವ ಸಿಎಂ ಸಿದ್ದರಾಮಯ್ಯ (Siddaramaiah), ನಾಳೆ ಕ್ಯಾಬಿನೆಟ್ ಸಭೆಯಲ್ಲೂ ಸಂಪುಟ ಸಹೋದ್ಯೋಗಿಗಳ ಗಮನಕ್ಕೆ ತರಲು ಮುಂದಾಗಿದ್ದಾರೆ ಎನ್ನುವುದನ್ನು ಮೂಲಗಳು ತಿಳಿಸಿವೆ. ಇದನ್ನೂ ಓದಿ: ನನ್ನ ಮೇಲೆ ಕಲ್ಲೆಸೆದಿಲ್ಲ: ಸೋನು ನಿಗಮ್ ಸ್ಪಷ್ಟನೆ
ಈ ಎಲ್ಲ ಬೆಳವಣಿಗೆಗಳನ್ನ ನೋಡುತ್ತಿದ್ದರೆ, ಹನಿಟ್ರ‍್ಯಾಪ್ ಕೇಸ್ ಹಳ್ಳ ಹಿಡಿಯುತ್ತಾ ಅಥವಾ ಯಾರಿಗಾದರೂ ಹಳ್ಳ ತೋಡುತ್ತಾ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ‘ಹನಿಟ್ರ‍್ಯಾಪ್’ ಸದನದಲ್ಲಿ ಪ್ರಸ್ತಾಪ ಮಾಡಿದ್ದು ತಲೆತಗ್ಗಿಸುವ ವಿಚಾರ: ಪ್ರಿಯಾಂಕ್ ಖರ್ಗೆ