– ಅಕ್ರಮವಾಗಿ ನಾಯಿಗಳ ಕೂಡಿಟ್ಟ ಆರೋಪ
ಬೆಂಗಳೂರು: ಬೀದಿನಾಯಿ ಹೆಸರಿನಲ್ಲಿ ಬಿರಿಯಾನಿ ಸ್ಕೀಮ್ ಆಯ್ತು. ಈಗ ಕಚ್ಚುವ ನಾಯಿಯ ನಿರ್ವಹಣೆಯ ವೀಕ್ಷಣಾ ಕೇಂದ್ರದ ಗೋಲ್‌ಮಾಲ್. ಪಬ್ಲಿಕ್ ಟಿವಿ ಬಿಚ್ಚಿಡುತ್ತಿದೆ ಜಿಬಿಎ ಸ್ಕ್ಯಾಮ್.
ಹೌದು. ಜಿಬಿಎ ಆಗಿನ ಬಿಬಿಎಂಪಿ ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುತ್ತೆ. ಬೇಜವಾಬ್ದಾರಿತನ, ಲೂಟಿ, ಹೀಗೆ ಒಂದಿಲ್ಲೊಂದು ವಿಚಾರದಲ್ಲಿ ಆರೋಪಗಳು ಕೇಳಿ ಬರುತ್ತಲೇ ಇವೆ. ಈ ಮಧ್ಯೆ ಬೆಂಗಳೂರಿಗರ ಕೆಂಗಣ್ಣಿಗೆ ಜಿಬಿಎ ಗುರಿಯಾಗಿದೆ. ಬೀದಿನಾಯಿ ಹೆಸರಿನಲ್ಲಿ ಬಿರಿಯಾನಿ ಸ್ಕೀಮ್ ಬಳಿಕ ಈಗ ಶ್ವಾನ ನಿರ್ವಹಣೆಯ ವೀಕ್ಷಣಾ ಕೇಂದ್ರದ ಗೋಲ್‌ಮಾಲ್ ಸದ್ದು ಮಾಡ್ತಿದೆ. ʻಪಬ್ಲಿಕ್ ಟಿವಿʼ ಜಿಬಿಎ ಮಹಾ ಸ್ಕ್ಯಾಮ್ ಬಿಚ್ಚಿಡುತ್ತಿದೆ. ಇದನ್ನೂ ಓದಿ: ನಿರ್ಬಂಧದ ನಡುವೆಯೂ ಕೋಳಿ ಅಂಕ; ಪುತ್ತೂರು ಶಾಸಕ ಅಶೋಕ್ ರೈ ಸೇರಿ 17 ಮಂದಿ ವಿರುದ್ಧ ಕೇಸ್
ಶೀಟ್ ಹಾಕಿದ ಶೆಡ್‌ಗೆ ಖರ್ಚು ಮಾಡಿದ್ದು ಬರೋಬ್ಬರಿ 50 ಲಕ್ಷವಂತೆ. ಅಂದಹಾಗೇ ಇದು ಯಲಹಂಕದಲ್ಲಿರುವ ನಾಯಿ ಶೆಡ್ಡು. ವಿರ‍್ಯಾಸ ಅಂದ್ರೆ ಇದಕ್ಕೆ 5 ಲಕ್ಷ ಖರ್ಚು ಆದ್ರೇ ಹೆಚ್ಚು ಬಿಡಿ. ಇನ್ನು ಈ ವೀಕ್ಷಣಾ ಕೇಂದ್ರದಲ್ಲಿ ಬೀದಿ ಬದಿ ಕಚ್ಚುವ ನಾಯಿಗಳು, ಆಕ್ರಮಣಕಾರಿ ನಾಯಿಗಳನ್ನು ತಂದು ಬಿಬಿಎಂಪಿ ವೀಕ್ಷಣೆ ಮಾಡಬೇಕು. ಆದ್ರೆ ಈ ವೀಕ್ಷಣಾ ಕೇಂದ್ರದ ಶೆಡ್‌ಗೆ ಬರೋಬ್ಬರಿ ಅರ್ಧಕೋಟಿ ಬಿಲ್ ಮಾಡಿರುವ ಜಿಬಿಎ ನಿಯತ್ತಾಗಿ ನಾಯಿಗಳನ್ನು ತಂದು ಹಾಕಿದ್ಯಾ ಅದು ಇಲ್ಲ ಸ್ವಾಮಿ..! ಕೈಗೆ ಸಿಕ್ಕ ನಾಯಿಗಳನ್ನ ಎಳೆದುಕೊಂಡು ಕೂಡಿಹಾಕಿದೆ ಅನ್ನುವ ಆರೋಪ ಪ್ರಾಣಿಪ್ರಿಯರದ್ದು.
ಆಕ್ರಮಣಕಾರಿ ನಾಯಿ ಅಂತಾ ಚಂದನೆ ಬಾಲ ಅಲ್ಲಾಡಿಸುವ ನಾಯಿಗಳನ್ನೆಲ್ಲ ಎತ್ತಾಕ್ಕೊಂಡು ಜಿಬಿಎ ಬಂದಿದೆ ಅನ್ನೋದು ಪ್ರಾಣಿಪ್ರಿಯರ ಆರೋಪ. ಅಷ್ಟೇ ಅಲ್ಲ ಹಾಲು ಕುಡಿಯುವ ನಾಯಿಮರಿಗಳನ್ನ ಅಮಾನವೀಯವಾಗಿ ಕೂಡಿಹಾಕಿದೆ. ಇದ್ರಿಂದ ಸಿಟ್ಟಿಗೆದ್ದ ಪ್ರಾಣಿಪ್ರಿಯರು ಯಲಹಂಕ ಠಾಣೆಗೆ ಜಿಬಿಎ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ. ಇದನ್ನೂ ಓದಿ: ಬೇಲೂರು ಆಸ್ಪತ್ರೆ ಸ್ಕ್ಯಾನಿಂಗ್ ಮಷಿನ್ ಕಳವು – ನೋಡಿಯೂ ನೋಡದಂತಿದ್ದ ನೌಕರನ ವಿರುದ್ಧ ಕ್ರಮಕ್ಕೆ ಶಿಫಾರಸು
ಬೀದಿನಾಯಿಗಳ ಹೆಸರಿನಲ್ಲಿ ಜೇಬು ತುಂಬಿಸಿಕೊಳ್ಳೋದ್ರಲ್ಲಿಯೇ ಬ್ಯುಸಿಯಾಗಿರುವ ಅಧಿಕಾರಿಗಳಿಗೆ ಬೀದಿನಾಯಿಗಳ ನಿರ್ವಹಣೆ ಮಾಡೋದ್ರಲ್ಲಿ ಸಂಪೂರ್ಣ ಸೋತಿದೆ. ಈ ಅಕ್ರಮ ಬಿಗ್ ಸ್ಕ್ಯಾಮ್ ಬಗ್ಗೆ ದೊಡ್ಡ ಮಟ್ಟದ ತನಿಖೆ ನಡೆಯಬೇಕು. ಇದನ್ನೂ ಓದಿ: ಹಾನಗಲ್ ಗ್ಯಾಂಗ್‌ರೇಪ್ ಪ್ರಕರಣ – 7 ಆರೋಪಿಗಳು ಯಾದಗಿರಿಗೆ ಗಡಿಪಾರು



