ಬೆಂಗಳೂರು: ಸಿಸಿಬಿ ಅಧಿಕಾರಿಗಳ ವಶದಲ್ಲಿರೋ ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿಯವರು ಇಂದು ಬಂಧನವಾಗ್ತಾರಾ..? ಒಂದು ವೇಳೆ ಬಂಧಿಸಿದ್ರೆ ಅವರ ಮುಂದಿನ ನಡೆ ಏನಿರಬಹುದು. ಹಾಗೆಯೇ ಸಿಸಿಬಿ ಅಧಿಕಾರಿಗಳು ಮುಂದೆ ಏನ್ ಮಾಡಬಹುದು ಎಂಬೆಲ್ಲ ಪ್ರಶ್ನೆಗಳು ಇದೀಗ ತೀವ್ರ ಕುತೂಹಲಕ್ಕೀಡು ಮಾಡಿದೆ.
Advertisement
ಒಂದು ವೇಳೆ ಸಿಸಿಬಿ ಪೊಲೀಸರು ರೆಡ್ಡಿ ಬಂಧಿಸಿದ್ರೆ ಏನ್ ಆಗುತ್ತೆ ಅಂತ ನೋಡೋದಾದ್ರೆ, ವಿಚಾರಣೆ ಶುರು ಮಾಡಿದ 24 ಗಂಟೆ ಒಳಗಾಗಿ ಕೋರ್ಟ್ ಗೆ ಹಾಜರು ಪಡಿಸಬೇಕು. ಆದ್ರೆ ಇಂದು ಭಾನುವಾರ ಕೋರ್ಟ್ ಕಲಾಪಗಳಿಗೆ ರಜೆ ಇರೋದ್ರಿಂದ, ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕಾಗತ್ತದೆ. ಜಡ್ಜ್ ಮುಂದೆ ಹಾಜರುಪಡಿಸುವ ಮುನ್ನ ಬಂಧಿತ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು. ನಂತರ ಜಡ್ಜ್ ಮುಂದೆ ಹಾಜರುಪಡಿಸಿ ಮತ್ತೆ 14 ದಿನಗಳ ಕಾಲ ಕಸ್ಟಡಿಗೆ ಪಡೆಯುವ ಸಾಧ್ಯತೆಗಳಿವೆ.
Advertisement
Advertisement
ರೆಡ್ಡಿ ನಿರೀಕ್ಷಣಾ ಜಾಮೀನಿಗೆ ಈಗಾಗಲೇ ಸೆಷನ್ ಕೊರ್ಟ್ ನಲ್ಲಿ ಸಿಸಿಬಿ ಆಕ್ಷೇಪಣೆ ಸಲ್ಲಿಸಿದ್ದು, ಸೋಮವಾರ ರೆಡ್ಡಿ ಅರ್ಜಿ ವಿಚಾರಣೆಗೆ ಬಂದ್ರೂ ಜಾಮೀನು ಸಿಗೋ ಸಾಧ್ಯತೆ ತೀರಾ ಕಡಿಮೆಯಿದೆ. ಇಂದು ಸಿಸಿಬಿ ಅಧಿಕಾರಿಗಳು ರೆಡ್ಡಿಯನ್ನು ಬಂಧಿಸಿದ್ದೇ ಆದ್ರೆ ಕನಿಷ್ಠ ಮೂರು ದಿನಗಳ ಕಾಲ ಪೊಲೀಸರ ಆತಿಥ್ಯವೇ ಗಟ್ಟಿಯಾಗಲಿದೆ.
Advertisement
ರೆಡ್ಡಿ ಮಾಸ್ಟರ್ ಪ್ಲಾನ್:
ಸಿಸಿಬಿ ಕಚೇರಿಗೆ ಹಾಜರಾಗೋ ಮುನ್ನವೇ ರೆಡ್ಡಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಸೋಮವಾರ ಜಾಮೀನು ಅರ್ಜಿ ವಿಚಾರಣೆಯ ಹಿನ್ನೆಲೆಯಲ್ಲಿ ಇಂದು ಬಂಧಿಸಿದ್ರೆ ಕೋರ್ಟ್ ನಲ್ಲಿ ಜಾಮೀನು ಪಡೆಯಲು ನಿರ್ಧಾರ ಮಾಡಿದ್ದಾರೆ. ಅಥವಾ ಸೋಮವಾರವೇ ಅರ್ಜಿ ಹಾಕಿ ಅಂದೇ ಜಾಮೀನು ಪಡೆಯಲು ರೆಡ್ಡಿ ನಿರ್ಧರಿಸಿದ್ದಾರೆ. ಒಂದು ವೇಳೆ ಜಾಮೀನು ಸಿಗದೇ ಹೋದ್ರೆ ನಿರೀಕ್ಷಣಾ ಜಾಮೀನು ಪಡೆಯಲೂ ಸಿದ್ಧತೆ ನಡೆಸಿದ್ದಾರೆ. ನೀವು ಹೇಳಿದಂತೆ ನಾನು ವಿಚಾರಣೆಗೆ ಹಾಜರಾಗಿದ್ದೇನೆ. ನಾನು ಎಲ್ಲಿಯೂ ಓಡಿಹೋಗಿಲ್ಲ. ವಿಚಾರಣೆಗೆ ಕರೆದ್ರೆ ಮತ್ತೆ ಹಾಜರಾಗುತ್ತೇನೆ. ಹಾಗಾಗಿ ನನಗೆ ಜಾಮೀನು ನೀಡಿ ಅಂತ ಕೋರ್ಟ್ ನಲ್ಲಿ ವಾದ ಮಂಡಿಸಲು ಸಿದ್ಧರಾಗಿದ್ದಾರೆ ಅನ್ನೋ ಮಾಹಿತಿ ಪಬ್ಲಿಕ್ ಟಿವಿಗೆ ದೊರಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews