ವಾಷಿಂಗ್ಟನ್: ಅಮೆರಿಕದ ಚುನಾವಣೆ (US Election) ದಿನಾಂಕ ಹತ್ತಿರ ಬರುತ್ತಿದ್ದಂತೆ ಬೆಟ್ಟಿಂಗ್ ಮಾರುಕಟ್ಟೆಯಲ್ಲಿ (Betting Market) ಮಾಜಿ ಅಧ್ಯಕ್ಷ, ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ (Donald Trump) ಮುಂದಿದ್ದಾರೆ.
ಕೆಲವು ಸಮೀಕ್ಷೆಗಳು ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ (Kamala Harris) ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಬಿರುಸಿನ ಸ್ಪರ್ಧೆ ಇದೆ ಎಂದು ತೋರಿಸುತ್ತಿದ್ದರೂ, ಕ್ರಿಪ್ಟೋ ಆಧಾರಿತ ಪಾಲಿಮಾರ್ಕೆಟ್ 60 ಪ್ರತಿಶತ ಗೆಲ್ಲುವ ಅವಕಾಶದೊಂದಿಗೆ ಟ್ರಂಪ್ ಅವರು ಮುನ್ನಡೆಯಲ್ಲಿದ್ದಾರೆ ಎಂದು ಹೇಳಿದೆ. ಇದನ್ನೂ ಓದಿ: ಆರ್‌ಸಿಬಿ ಸೇರುವಂತೆ ರೋಹಿತ್‌ಗೆ ಆಫರ್ – ಹಿಟ್‌ಮ್ಯಾನ್‌ಗೆ ಆಫರ್ ಕೊಟ್ಟಿದ್ಯಾರು?
Advertisement
Advertisement
ನವೆಂಬರ್ 5 ರಂದು ಚುನಾವಣೆ ನಡೆಯಲಿದ್ದು ಅಮೆರಿಕದ ಮಾಧ್ಯಮಗಳು ನಡೆಸುವ ಬಹುತೇಕ ಸಮೀಕ್ಷೆಯಲ್ಲಿ ಇಬ್ಬರ ಗ್ರಾಫ್ ಏರಿಳಿತವಾಗುತ್ತಿದೆ.
Advertisement
projects.fivethirtyeight ಎಲ್ಲಾ ಸಮೀಕ್ಷೆಗಳನ್ನು ಕ್ರೋಢಿಕರಿಸಿ ಅಪ್‌ಡೇಟ್ ನೀಡುತ್ತಿದೆ. ಸದ್ಯದ ಟ್ರೆಂಡ್ ಪ್ರಕಾರ ಕಮಲಾ ಹ್ಯಾರಿಸ್ ಅವರನ್ನು 48.4% ಜನ ಬೆಂಬಲಿಸಿದ್ದರೆ ಟ್ರಂಪ್ ಅವರನ್ನು 46.3% ಮಂದಿ ಬೆಂಬಲಿಸುತ್ತಿದ್ದಾರೆ.
Advertisement