ಹಾಸನ: ನಾನು 50-60 ಜನ ಕರ್ಕೊಂಡು ಬರುತ್ತೇನೆ . ಏನು ತೊಂದರೆ ಆಗುವುದು ಬೇಡ ಅಂತ ಕೇಂದ್ರದ ನಾಯಕರ ಬಳಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿರೋ ಮಾಹಿತಿ ಇದೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರು (HD Kumaraswamy) ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿ, ಲೋಕಸಭಾ ಚುನಾವಣೆ ಕಳೆಯಲಿ, ಮಹಾರಾಷ್ಟ್ರದಲ್ಲಿ ನಡೀತಲ್ಲ ಆ ರೀತಿ ನಡೆಯುತ್ತೆ. ನಾನು 50-60 ಜನ ಕರ್ಕೊಂಡು ಬಂಡ್ಬಿಡ್ತೀನಿ. ಏನು ತೊಂದರೆ ಆಗುವುದು ಬೇಡ ಅಂತ ಕೇಂದ್ರದ ನಾಯಕರ ಬಳಿ ಹೇಳಿರೋ ಮಾಹಿತಿ ಇದೆ. ಅಲ್ಲಿಯವರೆಗೂ ಐದಾರು ತಿಂಗಳು ರಿಲೀಫ್ ಕೊಡಿ ಅಂತ ಹೋಗಿದ್ದು ಗೊತ್ತು ಅಂತ ಡಿಕೆಶಿ ದೆಹಲಿ ಭೇಟಿ ಬಗ್ಗೆ ಹೆಚ್‍ಡಿಕೆ ಹೊಸ ಬಾಂಬ್ ಸಿಡಿಸಿದ್ದಾರೆ.
Advertisement
Advertisement
ಡಿಕೆ ಶಿವಕುಮಾರ್ (DK Shivakumar) ಸಿಎಂ ಆಗ್ತಾರೆ ಎಂಬ ನೊಣವಿನಕೆರೆ ಸ್ವಾಮೀಜಿಗಳ ಹೇಳಿಕೆಗೆ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ಈ ದೇಶದಲ್ಲಿ ಇವತ್ತಿನ ರಾಜಕಾರಣ ನೋಡಿದಾಗ ಏನು ಬೇಕಾದರೂ ನಡೆಯಬಹುದು, ಇಲ್ಲಿ ಯಾರಿಗೂ ಪ್ರಮಾಣಿಕತೆ, ನಿಷ್ಠೆ ಅನ್ನೋದು ಉಳಿದಿಲ್ಲ ಅವರವರ ಸ್ವಾರ್ಥಕ್ಕೆ ಏನೇನು ಆಗಬೇಕು ಮಾಡಿಕೊಂಡು ಹೋಗ್ತಾರೆ ಅಷ್ಟೇ ಅಂತ ಎಚ್‍ಡಿಕೆ ಹೇಳಿದ್ದಾರೆ. ಇದನ್ನೂ ಓದಿ: ಅರ್ಜುನನ ಕಾಲಿಗೆ ಗುಂಡೇಟು ಬಿದ್ದಿಲ್ಲ, ಯಾವುದೇ ಲೋಪ ಆಗಿಲ್ಲ: ವೈದ್ಯ ರಮೇಶ್ ಸ್ಪಷ್ಟನೆ
Advertisement
Advertisement
ಇದೇ ವೇಳೆ ಮುಸ್ಲಿಂ ಸಮುದಾಯಕ್ಕೆ 10 ಸಾವಿರ ಕೋಟಿ ನೀಡುತ್ತೇನೆ ಎಂಬ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿಕೆಯನ್ನೂ ಎಚ್‍ಡಿಕೆ ಖಂಡಿಸಿದ್ದಾರೆ. 2ನೇ ಬಾರಿ ಕಷ್ಟಪಟ್ಟು ಮುಖ್ಯಮಂತ್ರಿ ಆಗಿದ್ದಾರೆ. ಜನರಲ್ಲಿ ಕೆಟ್ಟ ರೀತಿಯ ಭಾವನೆ ಮೂಡಿಸುವ ಪರಿಸ್ಥಿತಿ ನೀವೇ ನಿರ್ಮಾಣ ಮಾಡಿಕೊಳ್ಳುತ್ತೀದ್ದೀರಾ..? ನಿಮಗೆ ಜಾತಿಗಣತಿ ಯಾಕೆ ಬೇಕು..? ಈ ರಾಜ್ಯ ದೇಶ ಉದ್ದಾರ ಆಗಬೇಕಾದರೆ ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಮಾಡಿ. ಜಾತಿಗಣತಿ ಮಾಡಿ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುತ್ತಿದ್ದೀರಾ..? ಅಲ್ಲೂ ಕಮಿಷನ್ ಎಷ್ಟಿದೆ ಅಂತ ಗೊತ್ತಿದೆ ಅಂತಾ ಕಿಡಿಕಾರಿದ್ದಾರೆ.