ಸೌತ್ ನಟಿ ಸಮಂತಾ (Samantha) ಅವರ ಹೆಸರು ಆಗಾಗ ಡೈರೆಕ್ಟರ್ ರಾಜ್ ನಿದಿಮೋರು (Raj Nidimoru)ಜೊತೆ ಸುದ್ದಿಯಾಗುತ್ತಿತ್ತು. ಈಗ ಮತ್ತೆ ಇಬ್ಬರ ಡೇಟಿಂಗ್ ವಿಚಾರ ಮುನ್ನೆಲೆಗೆ ಬಂದಿದೆ. ರಾಜ್ ಜೊತೆಗಿನ ಫೋಟೋ ಸಮಂತಾ ಶೇರ್ ಮಾಡಿರೋದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಸಂಗೀತ ಕಾರ್ಯಕ್ರಮದಲ್ಲೇ ಸೋನು ನಿಗಮ್ ಒದ್ದಾಟ- ಆಸ್ಪತ್ರೆಗೆ ದಾಖಲು
ನಾಗಚೈತನ್ಯ ಜೊತೆ ಸಮಂತಾ ಡಿವೋರ್ಸ್ ಪಡೆದುಕೊಂಡ ಮೇಲೆ ಒಬ್ಬಂಟಿಯಾಗಿದ್ದಾರೆ. ಸಿನಿಮಾಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಹೀಗಿರುವಾಗ ಡೈರೆಕ್ಟರ್ ರಾಜ್ ಜೊತೆ ಸಮಂತಾ ಹೆಸರು ಆಗಾಗ ಸುದ್ದಿಯಾಗುತ್ತಲೇ ಇತ್ತು. ಇಬ್ಬರ ಕಡೆಯಿಂದಲೂ ಡೇಟಿಂಗ್ ಸುದ್ದಿ ಬಗ್ಗೆ ಸ್ಪಷ್ಟನೆ ಸಿಕ್ಕಿರಲಿಲ್ಲ. ಈಗ ಮತ್ತೆ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿರೋದು ಇಂಟರ್‌ನೆಟ್‌ನಲ್ಲಿ ಹಾಟ್ ಟಾಪಿಕ್ ಆಗಿದೆ.
View this post on Instagram
ಇತ್ತೀಚೆಗೆ ಸಮಂತಾ ಹಾಗೂ ರಾಜ್ ಅವರು ‘ಪಿಕಲ್‌ಬಾ ಟೂರ್ನ್ಮೆಂಟ್’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆಗ ಇಬ್ಬರೂ ನಗು ನಗುತ್ತಾ ಓಡುತ್ತಿರುವ ಫೋಟೋ ಅಭಿಮಾನಿಗಳ ಗಮನ ಸೆಳೆದಿದೆ. ಇಬ್ಬರ ಬಾಂಧವ್ಯ ಚೆನ್ನಾಗಿದೆ ಎಂಬುದು ಈ ಫೋಟೋ ಸಾಕ್ಷಿಯಾಗಿದೆ. ಹಾಗಾಗಿ ಇಬ್ಬರ ಡೇಟಿಂಗ್ ವಿಚಾರ ಗಾಸಿಪ್ ಪ್ರಿಯರ ಬಾಯಿಗೆ ಆಹಾರವಾಗಿದೆ. ಇನ್ನಾದರೂ ಈ ಬಗ್ಗೆ ನಟಿ ರಿಯಾಕ್ಟ್ ಮಾಡ್ತಾರಾ ಕಾದುನೋಡಬೇಕಿದೆ.
ಇನ್ನೂ ರಾಜ್ ಅವರಿಗೆ ಮದುವೆ ಆಗಿದೆ. ಶ್ಯಾಮಲಿ ಡೇ ಅವರೊಂದಿಗೆ ಮದುವೆ ಆಗಿದ್ದಾರೆ. ಮೊದಲ ಪತ್ನಿಗೆ ಡಿವೋರ್ಸ್ ನೀಡಿ ಸಮಂತಾ ಜೊತೆ ರಾಜ್ ಮದುವೆ ಆಗುವ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.