ರಾಮನಗರ: ಸಚಿವ ಚಲುವರಾಯಸ್ವಾಮಿ (Chaluvaraya Swamy) ನನಗೇನು ಎದುರಾಳಿನಾ, ಅವರ ಬಗ್ಗೆ ಚರ್ಚೆ ಅಪ್ರಸ್ತುತ ಎಂದು ಮಾಜಿ ಸಿಎಂ ಕುಮಾರಸ್ವಾಮಿ (H.D. Kumaraswamy) ತಿರುಗೇಟು ನೀಡಿದ್ದಾರೆ.
ಚಲುವರಾಯಸ್ವಾಮಿ ಸ್ಪರ್ಧೆಯ ಕುರಿತು ಬಿಡದಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನನ್ನ ಸೋಲಿನ ಬಗ್ಗೆ ಮಾತನಾಡುವವರು ಇವರೇಕೆ ಸೋತಿದ್ರು. ಮಂತ್ರಿ ಆಗಿದ್ದರೂ ಕೂಡಾ ಚಲುವರಾಯಸ್ವಾಮಿ ಸೋತಿದ್ರಲ್ಲ. ಈಗ ದೇವೇಗೌಡರ ಮುಖ ನೋಡಿಕೊಂಡು ಸುಮ್ಮನಿದ್ದೀನಿ ಅಂದ್ರಲ್ಲಾ? ಇಲ್ಲ ಅಂದರೆ ಏನು ಮಾಡ್ತಿದ್ರಿ. ನಿಮ್ಮ ಮಾತಿನ ಅರ್ಥ ಏನು. ನಾನು ಅವರನ್ನು ತುಂಬಾ ಹತ್ತಿರದಿಂದ ನೋಡಿದ್ದೀನಿ. ಅವರು ನನಗೇನು ಎದುರಾಳಿನಾ? ಅವರ ಬಗ್ಗೆ ಚರ್ಚೆ ಅಪ್ರಸ್ತುತ. ಅದೇನು ಮಾಡ್ತಿರೋ ಮಾಡಿ ನೋಡೊಣ ಎಂದು ಚಲುವರಾಯಸ್ವಾಮಿಗೆ ಹೆಚ್‌ಡಿಕೆ ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ರಾಷ್ಟ್ರ ವಿಭಜನೆಯ ಮಾತೇ ಅಪರಾಧ – ಸುರೇಶ್ ದೇಶದ ಕ್ಷಮೆ ಕೋರಲಿ ಸುನೀಲ್‍ಕುಮಾರ್
Advertisement
Advertisement
ರಾಮಕೃಷ್ಣ ಹೆಗಡೆ ಮತ್ತು ಜೆ.ಹೆಚ್.ಪಟೇಲರನ್ನು ಹೊರಹಾಕಿದ್ದು ಹೆಚ್‌ಡಿಕೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಅವರನ್ನ ಹೊರಹಾಕಿದ್ನಾ? ರಾಮಕೃಷ್ಣ ಹೆಗಡೆಯವರು ನಮ್ಮ ಪಕ್ಷದಲ್ಲಿದಾಗ, ಆಗಿನ್ನೂ ನಾನು ಚಿಕ್ಕ ಹುಡುಗ. ಚಲುವರಾಯಸ್ವಾಮಿ ಅವರಿಗೆ ಇಷ್ಟೂ ಗೊತ್ತಿಲ್ವಾ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಹುಲ್ ಭಾರತ್ ಜೋಡೋ ಅಂತಾರೆ, ಸುರೇಶ್ ತೋಡೋ ಅಂತಾರೆ – ಕಾಂಗ್ರೆಸ್‍ಗೆ ಬುದ್ಧಿ ಭ್ರಮಣೆ ಎಂದ ರವಿಕುಮಾರ್
Advertisement
ಕಾಂಗ್ರೆಸ್‌ನಲ್ಲೂ ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ ಎಂಬ ಕಾಂಗ್ರೆಸ್‌ನ ಮಾಜಿ ಸಚಿವ ಎಂ.ಸಿ.ಶಿವರಾಂ ಹೇಳಿಕೆ ಬಗ್ಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ 40 ಪರ್ಸೆಂಟ್ ಇತ್ತು. ಕಾಂಗ್ರೆಸ್‌ನಲ್ಲಿ 59 ಪರ್ಸೆಂಟ್ ಇದೆ ಅಂತ ಮಾಜಿ ಸಚಿವರು ಹೇಳಿದ್ದಾರೆ. ಬಿಜೆಪಿಗಿಂತಲೂ ಕಾಂಗ್ರೆಸ್‌ನಲ್ಲಿ ಪರ್ಸೆಂಟ್ ಜಾಸ್ತಿ ಇದೆ ಅಂತ ತಲೆ ಚಚ್ಚಿಕೊಂಡಿದ್ದಾರೆ. ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣನ ನಮ್ಮ ಮಾರ್ಗದರ್ಶರು ಅಂತಿದರು. ಆದರೆ ಅವರೇ ಬಾಣಲಿಯಿಂದ ಬೆಂಕಿಗೆ ಬಿದ್ದಾಹಾಗಾಗಿದೆ ಅಂತ ಹೇಳಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಮುಂದಿನ ಪೀಳಿಗೆ ಬಗ್ಗೆ ಆಲೋಚನೆ ಮಾಡ್ತಾರೆ.. ಅದಕ್ಕೆ ಉಚಿತ ಕೊಡುಗೆ ಕೊಟ್ಟಿಲ್ಲ: ವಿಜಯೇಂದ್ರ
Advertisement
ಇದನ್ನೆಲ್ಲಾ ಕುಮಾರಸ್ವಾಮಿ ಪ್ರಶ್ನೆ ಮಾಡಿದರೆ ಅವರಿಗೆ ಅಸಹನೆ, ಮೆಂಟಲ್ ಬ್ಯಾಲೆನ್ಸ್ ತಪ್ಪಿದೆ ಅಂತಾರೆ. ಪ್ರತಿನಿತ್ಯ ವರ್ಗಾವಣೆ ಮಾಡೋ ಕೆಲಸವೇ ಆಗಿದೆ. ನಿನ್ನೆ ಸಿದ್ದರಾಮಯ್ಯ ಮೋದಿ ಬಗ್ಗೆ ಕಮೆಂಟ್ ಮಾಡಿದ್ದಾರೆ. ಮೊದಲು ನಿಮ್ಮ ಸ್ಥಿತಿ ನೋಡಿಕೊಳ್ಳಿ ಎಂದು ಬಿಡದಿಯಲ್ಲಿ ಹೆಚ್‌ಡಿಕೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಗ್ಯಾರಂಟಿ ರದ್ದು ಹೇಳಿಕೆ; ‘ಕೈ’ ಶಾಸಕನ ವಿರುದ್ಧ ಚುನಾವಣಾ ಆಯೋಗಕ್ಕೆ ಜೆಡಿಎಸ್ ದೂರು