ಕಾರವಾರ: ಪಕ್ಷ ಏನು ತೀರ್ಮಾನ ಕೈಗೊಳ್ಳುತ್ತದೆಯೋ ಅದಕ್ಕೆ ನಾನು ಬದ್ಧ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಉತ್ತರಕನ್ನಡದಿಂದ ಚಕ್ರವರ್ತಿ ಸೂಲಿಬೆಲೆ ಕಣಕ್ಕೆ ಇಳಿಯುತ್ತಾರಾ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ನಾನೊಬ್ಬ ಪಕ್ಷದ ಕಾರ್ಯಕರ್ತ, ಪಕ್ಷ ಏನು ತೀರ್ಮಾನ ಕೈಗೊಳ್ಳುತ್ತದೆಯೋ ಅದಕ್ಕೆ ಬದ್ಧವಾಗಿರುವೆ ಎಂದು ಪ್ರತಿಕ್ರಿಯಿಸಿದ್ದಾರೆ.
Advertisement
ಸಿಎಂ ವಿರುದ್ಧ ಕಿಡಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಂತೆ, ಮುಖ್ಯಮಂತ್ರಿ ಕುಮಾರಸ್ವಾಮಿ ದುರಾಡಳಿತ ನಡೆಸುತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕರಿಗೆ ಹಣ ನೀಡುತ್ತಿಲ್ಲ, ಶಾಸಕರು ಕ್ಷೇತ್ರಾಭಿವೃದ್ಧಿಗೆ ಹಣ ಕೇಳಿದರೆ ರೈತರ ಸಾಲ ಮನ್ನಾ ಮಾಡಿದ್ದೇವೆ, ಅಭಿವೃದ್ಧಿಗೆ ಹಣ ಇಲ್ಲವೆಂದು ದುರಹಂಕಾರದಿಂದ ಉತ್ತರಿಸುತ್ತಾರೆ. ಹೀಗಾಗಿ ಸಾರ್ವಜನಿಕ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಕೇಂದ್ರಸರ್ಕಾರ ವಿವಿಧ ಅನುದಾನ ನೀಡುತ್ತಿದೆ ಅಷ್ಟೇ ಅಲ್ಲದೇ ಕಂದಾಯ ಇಲಾಖೆಯಿಂದ ಆದಾಯವಿದೆ. ಆದರೂ ರಾಜ್ಯ ಸರ್ಕಾರದಲ್ಲಿ ಹಣ ಇಲ್ಲ ಎಂದರೆ ನಾಚಿಕೆಗೇಡು. ಈ ವಿಚಾರದಲ್ಲಿ ಸರ್ಕಾರ ತಲೆ ತಗ್ಗಿಸಬೇಕು ಎಂದು ಎಚ್‍ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
Advertisement
ಕರ್ನಾಟಕದ ಪುರಸಭೆ, ನಗರಸಭಾ ಚುನಾವಣಾ ಪ್ರಕ್ರಿಯೆಗಳು ಇಂದು ನಡೆದಿದೆ. ಈ ಬಾರಿ ದಾಖಲೆಯ ಮಟ್ಟದಲ್ಲಿ ಬಿಜೆಪಿ ಅತ್ಯಧಿಕ ಸ್ಥಾನ ಗೆಲ್ಲುವ ವಿಶ್ವಾಸವಿದೆ. ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿತ್ತು ಆದರೆ ಈಗ ಮಿಶ್ರ ಪಕ್ಷಗಳು ಅಧಿಕಾರದಲ್ಲಿದೆ. ಅಭಿವೃದ್ಧಿ ಕೇವಲ ಫೈಲ್‍ಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಮಾತ್ರ ಕಣ್ಣಿಸುತ್ತಿರುವುದು ಬಿಟ್ಟರೆ ಅಭಿವೃದ್ಧಿ ಬಹುತೇಕ ಸಾರ್ವಜನಿಕರಿಗೆ ಒಂದು ಮರಿಚೀಕೆಯಾಗಿದೆ. ಕರ್ನಾಟಕದಲ್ಲಿರುವ ನಗರದ ಅವ್ಯವಸ್ಥೆ ಯಾರಿಗೂ ಬೇಡ. ಹಾಗಾಗಿ ಕರ್ನಾಟಕದ ನಗರ ಪ್ರದೇಶದಲ್ಲಿರುವ ಜನತೆ ಈ ಬಾರಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂದು ನಿರ್ಧರಿಸಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕೇಂದ್ರ ಸರ್ಕರ ನಗರಾಭಿವೃದ್ಧಿ ಮಾಡಬೇಕೆಂದು ಯೋಜನೆ ಇತ್ತು ಎಂದರು.
Advertisement
ಕರಾವಳಿ ಭಾಗದಲ್ಲಿ ಆರ್‍ಎಸ್‍ಎಸ್ ಹಿನ್ನೆಲೆಯಿರುವವರಿಗೆ ಟಿಕೆಟ್ ನೀಡಲಾಗಿದೆ ಎನ್ನುವ ಆರೋಪ ಸರಿಯಲ್ಲ. ಯಾರು ಅರ್ಹರಿದ್ದಾರೋ ಅವರಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿ ಆರ್‍ಎಸ್‍ಎಸ್ ಎಂದು ಪಕ್ಷದ ಕಾರ್ಯಕರ್ತರನ್ನು ವಿಂಗಡಿಸುವುದು ಸರಿಯಲ್ಲ ಎಂದರು.
ಕೊನೆಯದಾಗಿ ಅಟಲ್ ಅವರನ್ನು ನೆನೆದು ಅವರು ತಮ್ಮನ್ನು ತಾವು ಒಂದು ದೇಶದ ಆಸ್ತಿಯೆಂದು ಪರಿಗಣಿಸಿದರು. ವೈಯಕ್ತಿಕ ಬದುಕಿಗೆ ಅವಕಾಶವೇ ನೀಡುತ್ತಿರಲಿಲ್ಲ. ಅವರ ತೀರಿಕೊಂಡ ನಂತರ ಅವರ ಅಸ್ಥಿಯನ್ನ ದೇಶದ ಎಲ್ಲಾ ನದಿಗಳಲ್ಲೂ ಬಿಡಬೇಕು ಎಂಬುದು ಅವರ ಅಪೇಕ್ಷೆ ಯಾಗಿತ್ತು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv