ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ನಟನೆಯ ‘ಧಾಕಡ್’ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿದೆ. ಐವತ್ತು ಕೋಟಿಗೂ ಅಧಿಕ ವೆಚ್ಚದಲ್ಲಿ ತಯಾರಾದ ಸಿನಿಮಾ ಈವರೆಗೂ ಗಳಿಸಿದ್ದು ಮಾತ್ರ ಕೇವಲ ಎರಡು ಕೋಟಿ ಎನ್ನಲಾಗುತ್ತಿದೆ. ಅವರ ವೃತ್ತಿ ಜೀವನದಲ್ಲೇ ಇಂತಹ ಸೋಲನ್ನು ಅವರು ಯಾವತ್ತೂ ಕಂಡಿರಲಿಲ್ಲವಂತೆ. ಈ ಸೋಲಿಗೆ ಕಾರಣ ಯಾರು ಎನ್ನುವ ಚರ್ಚೆ ಇದೀಗ ನಡೆದಿದೆ. ಇದನ್ನೂ ಓದಿ : ನಾಳೆ ಉಪೇಂದ್ರ ಹೊಸ ಸಿನಿಮಾಗೆ ಮುಹೂರ್ತ : ಅತಿಥಿಗಳಾದ ನಾಲ್ವರು ಸ್ಟಾರ್ ನಟರು
ಬಾಲಿವುಡ್ ನ ಅನೇಕ ನಟ ನಟಿಯರನ್ನು ತಮ್ಮ ಮಾತುಗಳಿಂದ ಎದುರು ಹಾಕಿಕೊಂಡಿದ್ದಾರೆ ಕಂಗನಾ ರಣಾವತ್. ಅಲ್ಲದೇ, ಧಾರ್ಮಿಕವಾಗಿಯೂ ಅವರು ಪ್ರಖರವಾಗಿ ಮಾತನಾಡಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ರಿಲೀಸ್ ಆದಾಗ, ನೇರವಾಗಿ ಕೆಲ ವ್ಯಕ್ತಿಗಳ ಹೆಸರನ್ನು ಹೆಸರಿಸಿಯೇ ವಿರೋಧಿಸಿದ್ದಾರೆ. ಅನೇಕ ನಿರ್ಮಾಪಕರ ಮತ್ತು ನಿರ್ದೇಶಕರ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಇದೇ ಅವರಿಗೆ ಮುಳುವಾಗಿದೆ ಎಂದು ಹೇಳಾಗುತ್ತಿದೆ. ಇದನ್ನೂ ಓದಿ : ಖ್ಯಾತ ಗಾಯಕ ಕೆಕೆ ಅಂತ್ಯ ಸಂಸ್ಕಾರ ಮುಂಬೈನಲ್ಲಿ : ಅಂತಿಮ ನಮನ ಸಲ್ಲಿಸಿದ ಬಿಟೌನ್
ಈ ಕುರಿತು ಮಾಧ್ಯಮವೊಂದರಲ್ಲಿ ಮಾತನಾಡಿರುವ ಕಂಗನಾ, ‘ಈ ನನ್ನ ಸಿನಿಮಾ ಸೋಲಿಗೆ ಪರೋಕ್ಷವಾಗಿ ಬಾಲಿವುಡ್ ಕಾರಣ’ ಎಂದು ಹೇಳಿದ್ದಾರೆ ಎನ್ನಲಾಗುತ್ತದೆ. ಸತ್ಯವನ್ನು ಹೇಳಿದ್ದಕ್ಕಾಗಿ ತಾವು ಸೋಲನ್ನು ಅನುಭವಿಸಬೇಕಾಯಿತು ಎಂದಿದ್ದಾರಂತೆ. ಧಾಕಡ್ ಸಿನಿಮಾ ಚೆನ್ನಾಗಿಯೇ ಮೂಡಿ ಬಂದಿತ್ತು. ಇಡೀ ಸಿನಿಮಾ ಕಂಗನಾ ಸುತ್ತಲೇ ಗಿರಕಿ ಹೊಡೆಯುತ್ತಿತ್ತು. ಆದರೂ, ಸಿನಿಮಾ ನೋಡಲು ಜನ ಬಂದಿಲ್ಲ ಎನ್ನುವ ಬೇಸರ ಅವರಲ್ಲೂ ಇದೆ.