ಬೆಂಗಳೂರು: ಪಾಕಿಸ್ತಾನದ (Pakistan) ಹಿಟ್‌ಲಿಸ್ಟ್‌ನಲ್ಲಿ ಬೆಂಗಳೂರು ಇದ್ಯಾ ಅಂತ ಪತ್ರಕರ್ತರು ಕೇಳಿದ ಪ್ರಶ್ನೆಗೆ ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್ (G Parameshwar) ಉತ್ತರಿಸಿದರು. ಬೆಂಗಳೂರು ಹಿಟ್‌ಲಿಸ್ಟ್‌ನಲ್ಲಿ ಇದ್ಯಾ.. ಇಲ್ವಾ.. ಅಂತ ನಮಗೆ ಗೊತ್ತಿಲ್ಲ. ಆದ್ರೆ ನಮ್ಮ ತಯಾರಿಯಂತೂ ಮಾಡಿಕೊಳ್ತಿದ್ದೇವೆ. ಕೇಂದ್ರದ ಸೂಚನೆ ಮೇರೆಗೆ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಿದ್ದೇವೆ ಎಂದು ವಿವರಿಸಿದರು.
ಬೆಂಗಳೂರು (Bengaluru) ಸೇರಿ ಯಾವ ಯಾವ ಜಿಲ್ಲೆ ಹಿಟ್‌ಲಿಸ್ಟ್‌ನಲ್ಲಿದೆ ಅನ್ನೋದು ಗೊತ್ತಿಲ್ಲ. ಆದ್ರೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಎಚ್ಚರ ವಹಿಸುವಂತೆ ಸೂಚನೆ ಕೊಟ್ಟಿದೆ. ಈ ಹಿನ್ನೆಲೆ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಿದ್ದೇವೆ. ಬೇರೆ ಯಾವುದೇ ರೀತಿಯ ಚಟುವಟಿಕೆಗಳ ಬಗ್ಗೆ ಎಚ್ಚರ ವಹಿಸುವಂತೆ ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಭಾರತದ ವಾಯುನೆಲೆಗೆ ಯಾವುದೇ ಹಾನಿಯಾಗಿಲ್ಲ, ಗಡಿಯಲ್ಲಿ ಸೇನೆಯನ್ನು ನಿಯೋಜಿಸುತ್ತಿದೆ ಪಾಕ್ : ಭಾರತ
ಒಂದು ವೇಳೆ ಯುದ್ಧದ ಸಮಯ ಬಂದರೆ ನೀರು, ಆಹಾರ ಪದಾರ್ಥ, ಅಗತ್ಯ ವಸ್ತುಗಳ ಸಂಗ್ರಹದ ಬಗ್ಗೆ ಕ್ರಮಕ್ಕೆ ತಯಾರಿ ಮಡೆಯುತ್ತದೆ. ಈ ಬಗ್ಗೆ ಸಿಎಂ ಜೊತೆಗೆ ಸಭೆ ನಡೆಸಿ ಚರ್ಚಿಸುತ್ತೇವೆ. ಮುಂದೆ ಕೇಂದ್ರದಿಂದ ಬರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುತ್ತೇವೆ. ದೇಶದಲ್ಲಿ ಈ ಪರಿಸ್ಥಿತಿ ಇರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ರಾಜ್ಯದ ಪೊಲೀಸರಿಗೆ ರಜೆಗಳನ್ನು ಮಂಜೂರು ಮಾಡುವುದಿಲ್ಲ. ಕೇಂದ್ರ ಸರ್ಕಾರ (Central Government) ಎಲ್ಲವೂ ಸರಿಯಿದೆ ಎಂದು ಸೂಚನೆ ಕೊಡುವರೆಗೂ ನಮ್ಮ ಪೊಲೀಸರಿಗೆ ರಜೆ ಕೊಡಲ್ಲ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಪೊಲೀಸರೇ ಅರೆಸ್ಟ್ – ಪಾಕ್ ಹಿಡಿತದಲ್ಲಿದ್ದ ನಗರ ವಶಕ್ಕೆ ಪಡೆದ ಬಲೂಚ್ ಹೋರಾಟಗಾರರು
ಇನ್ನೂ ಕರಾವಳಿ ಭಾಗದಲ್ಲಿ ಪೊಲೀಸರು ಮತ್ತಷ್ಟು ಪರಿಣಾಮವಾಗಿ ಕೆಲಸ ಮಾಡಬೇಕು. ಅಲ್ಲಿ ಕೂಡ ಭದ್ರತೆ ನೀಡಲಾಗಿದೆ. ಕೋಸ್ಟಲ್ ಭಾಗದಲ್ಲಿ ನಮ್ಮ ಅಧಿಕಾರದಲ್ಲಿರೋ ಕಡೆ ಭದ್ರತೆ ಕೊಡ್ತೀವಿ, ನೌಕಾಪಡೆ, ಅಂತಾರಾಷ್ಟ್ರೀಯ ಗಡಿಯಲ್ಲಿ ಎಲ್ಲ ಕಡೆಯೂ ಭದ್ರತೆ ಹೆಚ್ಚಿಸಲಾಗಿದೆ. ಕೇಂದ್ರ ಏನಾದ್ರು ಬಾರ್ಡರ್ ನಲ್ಲಿ ಸೆಕ್ಯುರಿಟಿ ಕೊಡೋದಾದರೆ ಕೇಂದ್ರ ನಮಗೆ ಸೂಚನೆ ಕೊಡುತ್ತದೆ. ಅದನ್ನ ನಾವು ಪಾಲನೆ ಮಾಡ್ತೀವಿ ಎಂದು ಹೇಳಿದರು. ಇದನ್ನೂ ಓದಿ: Video | ರಾಜಸ್ಥಾನದ ಪೋಖ್ರಾನ್ ಮೇಲೆ ಪಾಕ್ ಬಳಸಿದ ಬೃಹತ್ ಮಿಸೈಲ್ ಉಡೀಸ್!