ಲಂಡನ್: 2019ರ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಂಡು ಟೂರ್ನಿಯಿಂದ ಹೊರ ನಡೆದ ಬಳಿಕ ತಂಡದ ಗೊಂದಲ ನಿವಾರಣೆಗೆ ಬಿಸಿಸಿಐ ಮುಂದಾಗಿದೆ.
ಕೆಲ ಸದಸ್ಯರು ಟೀಂ ಇಂಡಿಯಾ ನಾಯಕತ್ವದಲ್ಲಿ ಬಲಾವಣೆ ಮಾಡಲು ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಸದ್ಯ ಬಿಸಿಸಿಐ ಕೂಡ ಇತ್ತ ಮನಸ್ಸು ಮಾಡಿದೆ ಎನ್ನಲಾಗಿದ್ದು, ಉಪ ನಾಯಕ ರೋಹಿತ್‍ಗೆ ಏಕದಿನ ನಾಯಕತ್ವ ನೀಡಿ, ಕೊಹ್ಲಿ ಅವರನ್ನ ಟಿ20, ಟೆಸ್ಟ್ ನಾಯಕನಾಗಿ ಮುಂದುವರಿಸಲು ಚಿಂತನೆ ನಡೆಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
Advertisement
Advertisement
ಬಿಸಿಸಿಐ ವಕ್ತಾರರೊಬ್ಬರು ಈ ಕುರಿತು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದು, ವಿಶ್ವಕಪ್ ಟೂರ್ನಿಯ ಬಳಿಕ ತಂಡದ ಭವಿಷ್ಯದ ಬಗ್ಗೆ ಚಿಂತನೆಗಳನ್ನು ನಡೆಸಲಾಗುತ್ತಿದೆ. ಈ ದೃಷ್ಟಿಯಿಂದ ಟೀಂ ಇಂಡಿಯಾ ತಂಡದ ನಾಯಕತ್ವದಲ್ಲಿ ಕೆಲ ಬದಲಾವಣೆಗಳನ್ನು ಮಾಡಲು ಚಿಂತನೆ ನಡೆಸಲಾಗಿದೆ. ರೋಹಿತ್ ಗೆ ಸಿಮೀತ ಓವರ್ ಪಂದ್ಯಗಳ ನಾಯಕತ್ವ ನೀಡಿ ಟಿ20, ಟೆಸ್ಟ್ ಕ್ರಿಕೆಟ್‍ಗೆ ಕೊಹ್ಲಿ ನಾಯಕತ್ವ ಮುಂದುವರಿಸುವ ಚಿಂತನೆ ಇದೆ ಎಂದರು.
Advertisement
ಈ ಸಮಯ ರೋಹಿತ್‍ಗೆ ಏಕದಿನ ಕ್ರಿಕೆಟ್ ನಾಯಕತ್ವ ನೀಡುವುದು ಸೂಕ್ತವಾಗಿದೆ. ಅಲ್ಲದೇ ಕೊಹ್ಲಿಯಿಂದ ಇದಕ್ಕೆ ಬೆಂಬಲ ವ್ಯಕ್ತವಾಗುವ ಅವಕಾಶ ಇದೆ. ಮುಂದಿನ ವಿಶ್ವಕಪ್ ಟೂರ್ನಿಯ ದೃಷ್ಟಿಯ ಹಿನ್ನೆಲೆಯಲ್ಲಿ ಈ ಬದಲಾವಣೆಗಳನ್ನು ಕೈಗೊಳ್ಳುವ ಚಿಂತನೆ ಇದೆ ಎಂದಿದ್ದಾರೆ.
Advertisement
ತಂಡದ ಯಾವ ಅಂಶಗಳಲ್ಲಿ ಹಿನ್ನಡೆ ಆನುಭವಿಸಿತು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇರುವುದಿಂದ ರೋಹಿತ್ ಈ ಕೆಲಸ ಮಾಡಲು ಸೂಕ್ತ ಎಂಬ ಅಭಿಪ್ರಾಯ ಇದೆ ಎಂದಿದ್ದಾರೆ. ಇತ್ತ ಬಿಸಿಸಿಐ ಸುಪ್ರೀಂ ನೇಮಿಸಿರುವ ಆಡಳಿತ ಸಮಿತಿ ಕೂಡ ವಿಶ್ವಕಪ್ ಹಿನ್ನೆಲೆಯಲ್ಲಿ ತಂಡದ ಪ್ರದರ್ಶನದ ಬಗ್ಗೆ ಚರ್ಚೆ ನಡೆಸಲಿದೆ. ಈ ಸಂದರ್ಭದಲ್ಲಿ ನಾಯಕ ಕೊಹ್ಲಿ, ಕೋಚ್ ರವಿಶಾಸ್ತ್ರಿ ಅವರ ಪ್ರದರ್ಶನ ಸೇರಿದಂತೆ ಇತರೇ ಅಂಶಗಳ ಕುರಿತು ಚರ್ಚೆ ನಡೆಸಲಿದೆ.