ಬಾಲಿವುಡ್ ಸುಂದರಿ ಐಶ್ವರ್ಯ ರೈ `ಪೊನ್ನಿಯನ್ ಸೆಲ್ವನ್’ ಚಿತ್ರದ ಮೂಲಕ ಸೌಂಡ್ ಮಾಡುತ್ತಿರುವ ಬೆನ್ನಲ್ಲೇ ಈಗ ತಮ್ಮ ಖಾಸಗಿ ವಿಚಾರವಾಗಿ ಸುದ್ದಿಯಾಗುತ್ತಿದ್ದಾರೆ. ಮಾಜಿ ಭುವನ ಸುಂದರಿ ಐಶ್ವರ್ಯ ರೈ ಮತ್ತೆ ಗರ್ಭಿಣಿನಾ ಅಂತಾ ನೆಟ್ಟಿಗರು ಪ್ರಶ್ನೆಸುತ್ತಿದ್ದಾರೆ. ಗರ್ಭಿಣಿ ಎನ್ನುವಂತಹ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕರಾವಳಿ ಬ್ಯೂಟಿ ಐಶ್ವರ್ಯ ರೈ ಮತ್ತೆ ಗರ್ಭಿಣಿನಾ, ಬಚ್ಚನ್ ಕುಟುಂಬಕ್ಕೆ ಮತ್ತೊಬ್ಬ ಕುಡಿಯ ಎಂಟ್ರಿ ಆಗುತ್ತಿದ್ಯಾ ಅಂತಾ ಸಾಮಾಜಿಕ ಜಾಲತಾಣಲದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. ಇದಕ್ಕೆಲ್ಲಾ ಕಾರಣ ವಿಮಾನ ನಿಲ್ದಾಣದಲ್ಲಿ ಐಶ್ವರ್ಯ ರೈ ಎಂಟ್ರಿ. ಮಗಳ ಜತೆ ಏರ್‌ಪೋರ್ಟ್ನಲ್ಲಿ ಇತ್ತೀಚೆಗಷ್ಟೇ ಕಾಣಿಸಿಕೊಂಡಿದ್ದರು. ಆಗ ಪಾಪರಾಜಿಗಳು ಫೋಟೋ ತೆಗೆಯುವಾಗ ಹೊಟ್ಟೆಯತ್ತ ಕೈ ಹಿಡಿದುಕೊಂಡು ನಟಿ ಹೊರನಡೆದಿದ್ದಾರೆ. ಈ ನಡೆಯಿಂದ ಐಶ್ವರ್ಯ ಮತ್ತೆ ಗರ್ಭಿಣಿನಾ ಅಂತಾ ಅನುಮಾನ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ವದಂತಿ ನಿಜಾನಾ ಅಂತಾ ಮುಂದಿನ ದಿನಗಳವೆರೆಗೆ ಕಾದುನೋಡಬೇಕಿದೆ. ಇದನ್ನೂ ಓದಿ:`ಮಾರ್ಟಿನ್’ ಆ್ಯಕ್ಷನ್ ಸೀನ್‌ಗಾಗಿ ಧ್ರುವಾ ಸರ್ಜಾ- ಎ.ಪಿ ಅರ್ಜುನ್ ಭರ್ಜರಿ ತಯಾರಿ
View this post on Instagram
- Advertisement
ಸದ್ಯ ಮಣಿರತ್ನಂ ನಿರ್ದೇಶನದ `ಪೊನ್ನಿಯನ್ ಸೆಲ್ವನ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಬಹುಭಾಷೆಯಲ್ಲಿ ತೆರೆಗೆ ಬರಲಿರುವ ಈ ಚಿತ್ರದಲ್ಲಿ ಐಶ್ವರ್ಯ ರೈ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.