ತಮಿಳು ನಟ ದಳಪತಿ ವಿಜಯ್ (Thalapathy Vijay) ಅಭಿನಯದ ಬಹುನಿರೀಕ್ಷಿತ ಕೊನೆಯ ಚಿತ್ರ ʻಜನ ನಾಯಗನ್ʼ (Jana Nayagan) ಜನವರಿ 9ರಂದು ತೆರೆ ಮೇಲೆ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ. ಸಿನಿಮಾ ಬಿಡುಗಡೆಗೆ ಇನ್ನೆರಡು ದಿನಗಳಷ್ಟೇ ಬಾಕಿಯಿದೆ. ದೇಶ ವಿದೇಶಗಳಲ್ಲೂ ದಳಪತಿ ಫ್ಯಾನ್ಸ್ ಈ ಚಿತ್ರವನ್ನ ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಮಲೇಷಿಯಾ, ಸಿಂಗಪೂರ್, ಯುಎಸ್‌ಎ (USA), ಕೆನಡಾ ಸೇರಿದಂತೆ ಅನೇಕ ದೇಶಗಳಲ್ಲಿ ಚಿತ್ರ ರಿಲೀಸ್ ರೆಡಿಯಿದೆ. ಆದ್ರೆ ಅರಬ್ ರಾಷ್ಟ್ರಗಳಲ್ಲಿ ಸಿನಿಮಾಕ್ಕೆ ಬ್ಯಾನ್ ಭೀತಿ ಎದುರಾಗಿದೆ. ಹೌದು. ಜನನಾಯನ್ ಸಿನಿಮಾಗೆ ಯುಎಇ, ಸೌದಿ ಅರೇಬಿಯಾ ನಿಷೇಧ ಹೇರಿರುವುದಾಗಿ ವರದಿಗಳು ತಿಳಿಸಿವೆ. ಟ್ರೇಲರ್ ನೋಡಿಯೇ ಈ ನಿರ್ಧಾರಕ್ಕೆ ಸಲ್ಲಿನ ಸರ್ಕಾರಗಳು ಬಂದಿವೆಯಂತೆ. ಇದನ್ನೂ ಓದಿ: ಟಾಕ್ಸಿಕ್‌ನಲ್ಲಿ ರುಕ್ಮಿಣಿ ವಸಂತ್ ಗ್ಲ್ಯಾಮರ್ ಲುಕ್ ಅನಾವರಣ
ಇದಕ್ಕೆ ಕಾರಣ ಏನಂದ್ರೆ, ಚಿತ್ರದ ವಿಲನ್ ಪಾತ್ರಧಾರಿ ಪಾಕಿಸ್ತಾನದಿಂದ ಬಂದವನಾಗಿದ್ದು ಆತ ದೇಶದಲ್ಲಿ ಅಕ್ರಮ ಚಟುವಟಿಯಲ್ಲಿ ಭಾಗಿಯಾಗಿರುತ್ತಾನೆ. ಅವನಿಗೆ ಬುದ್ಧಿ ಕಲಿಸುವ ಪಾತ್ರದಲ್ಲಿ ವಿಜಯ್ ನಟಿಸಿದ್ದಾರೆ. ಇದರಿಂದಾಗಿ ಮುಸ್ಲಿಂ ಜನಸಂಖ್ಯೆಯುಳ್ಳ ರಾಷ್ಟ್ರಗಳಲ್ಲಿ ಈ ಚಿತ್ರಕ್ಕೆ ಬ್ಯಾನ್ ಬಿಸಿ ತಟ್ಟಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ದೃಶ್ಯಂ-3 ರಿಲೀಸ್ ಡೇಟ್ ಫಿಕ್ಸ್: ಸಸ್ಪೆನ್ಸ್ ಥ್ರಿಲ್ಲರ್ ಸೀಕ್ವೆಲ್‌ಗೆ ಜನ ಕಾತುರ



