ಬೆಂಗಳೂರು: ಆಧಾರ್ ಮಾಹಿತಿ ಖಾಸಗಿತನ ಎನ್ನುವ ಚರ್ಚೆ ಎದ್ದಿರುವ ಕಾರಣ ಸುಪ್ರೀಂಕೋರ್ಟ್ ನಲ್ಲಿ ಕುತೂಹಲಕಾರಿ ವಾದ-ಪ್ರತಿವಾದ ನಡೆಯುತ್ತಿದೆ. ಇದರ ಬೆನ್ನಲ್ಲೇ, ಆಧಾರ್ ವೆಬ್‍ಸೈಟ್ ಯುಐಡಿಎಐಗೆ ಐಟಿ ಹಬ್ ಬೆಂಗಳೂರಿನಿಂದಲೇ ಹ್ಯಾಕ್ ಮಾಡಲಾಗಿದೆ ಎನ್ನುವ ಆಘಾತಕಾರಿ ಸುದ್ದಿ ಸ್ಫೋಟಗೊಂಡಿದೆ.
ಬೆಂಗಳೂರಿನ ಕ್ವರ್ಥ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಎನ್ನುವ ಕಂಪನಿ ಆಧಾರ್‍ನ ಅಧಿಕೃತ ವೆಬ್‍ಸೈಟ್ uidai.gov.in ಹ್ಯಾಕ್ ಮಾಡಿದೆ ಎನ್ನಲಾಗಿದೆ. ಇ-ಕೆವೈಸಿ ಆ್ಯಂಡ್ರಾಯ್ಡ್ ಆ್ಯಪ್ ಮುಖಾಂತರ ಆಧಾರ್ ಕಾರ್ಡ್ ಮಾಹಿತಿಯನ್ನ ಹ್ಯಾಕ್ ಮಾಡಿ ಜನರ ಗೌಪ್ಯ ಮಾಹಿತಿಯನ್ನ ಕದ್ದಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
ಈ ಬಗ್ಗೆ ಆಧಾರ್ ಕಾರ್ಡ್ ಡೆಪ್ಯುಟಿ ಡೈರೆಕ್ಟರ್ ಅಶೋಕ್ ಲೆನಿನ್ ಅವರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕ್ವರ್ಥ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಡೈರೆಕ್ಟರ್ ಅಭಿನವ್ ಶ್ರೀವಾತ್ಸವ್ ಮೇಲೆ ಎಫ್‍ಐಆರ್ ದಾಖಲು ಮಾಡಲಾಗಿದೆ. ಅಲ್ಲದೆ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಪ್ರಕರಣವನ್ನ ಸೈಬರ್ ಕ್ರೈಂ ಪೊಲೀಸರಿಗೆ ವರ್ಗಾಯಿಸಲು ಚಿಂತನೆ ನಡೆಸುತ್ತಿದ್ದಾರೆ.